ವೇದಿಕೆ ಮೇಲೆಯೇ ಕಲಾವಿದನಿಗೆ ಹೃದಯಾಘಾತ! – ನಾಟಕ ಮಾಡುತ್ತಲೇ ದುರಂತ ಅಂತ್ಯ!

ವೇದಿಕೆ ಮೇಲೆಯೇ ಕಲಾವಿದನಿಗೆ ಹೃದಯಾಘಾತ! – ನಾಟಕ ಮಾಡುತ್ತಲೇ ದುರಂತ ಅಂತ್ಯ!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ವ್ಯಾಯಾಮ ಮಾಡುವಾಗ, ಜಿಮ್‌ನಲ್ಲಿ, ಕೆಲಸದ ಸ್ಥಳದಲ್ಲಿ ಹಾಗೂ ಸಾರ್ವಜನಿಕವಾಗಿ ಓಡಾಡುವಾಗ ಕೆಲವರು ಏಕಾಏಕಿ ಕುಸಿದು ಬೀಳುತ್ತಿರುವ ಘಟನೆಗಳು ಸುದ್ದಿಯಾಗುತ್ತಿವೆ. ಇದೀಗ ಚಿತ್ರದುರ್ಗದಲ್ಲಿ ನಾಟಕ ಪ್ರದರ್ಶನದ ವೇಳೆ ಕಲಾವಿದರೊಬ್ಬರು ವೇದಿಕೆಯ ಮೇಲೆಯೇ ಕುಸಿದು ಬಿದ್ದಿರುವ ದುರಂತ ಘಟನೆ ವರದಿಯಾಗಿದೆ.

ನಾಟಕ ನಡುವೆ ಬಂದ ಹಾಡಿಗೆ ಕಲಾವಿದೆ ಜೊತೆ ಕಲಾವಿದ ಶಿವಣ್ಣ ಅವ್ರು ನಾಟಕ ಪ್ರದರ್ಶನ ಮಾಡುತ್ತಿದ್ದ ವೇಳೆ ಶಿವಣ್ಣ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶಿವಣ್ಣ ಸಾವನ್ನಪ್ಪಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.

ಇದನ್ನೂ ಓದಿ: ಬೇಲೂರು ವರ್ತಕನ ಆತ್ಮಹ*ತ್ಯೆ ಕೇಸ್‌ಗೆ ಟ್ವಿಸ್ಟ್! – ಶಾಸಕ ಎಚ್.ಕೆ. ಸುರೇಶ್ ವಿರುದ್ಧ ಎಫ್‌ಐಆರ್!

ಹೃದಯ ಜಾರಿತು ಪ್ರೀತಿ ಉಳಿಯಿತು ನಾಟಕ ಪ್ರದರ್ಶನದ ವೇಳೆ ಕಲಾವಿದ ಶಿವಣ್ಣ ಅವ್ರು CID ಎಂಬ ಪಾತ್ರ ಮಾಡುತ್ತಿದ್ರು. ನಟನೆ ಮಾಡ್ತಿದ್ದ ವೇಳೆಯೇ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ.

ಆದರೆ ಹೃದಯಾಘಾತದಂತಹ ಘಟನೆಗಳನ್ನು ತಡೆಯಲು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು, ತಲೆಸುತ್ತು ಅಥವಾ ಎದೆಭಾಗದಲ್ಲಿ ಒತ್ತಡ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಇಂತಹ ಲಕ್ಷಣಗಳು ಕಂಡಾಗ ವಿಳಂಬ ಮಾಡದೆ ತುರ್ತು ಚಿಕಿತ್ಸೆಗೆ ಮುಂದಾಗುವುದು ಅತ್ಯಂತ ಮುಖ್ಯ.
ಚಿತ್ರದುರ್ಗದಲ್ಲಿ ನಡೆದ ಈ ಘಟನೆ ಕಲಾವಿದರ ಕುಟುಂಬ ಹಾಗೂ ರಂಗಭೂಮಿ ವಲಯದಲ್ಲಿ ದುಃಖದ ಛಾಯೆ ಮೂಡಿಸಿದೆ.

Kishor KV

Leave a Reply

Your email address will not be published. Required fields are marked *