ಕೃತಕ ಬೆಳಕಿನಿಂದ ಜಗತ್ತು ಸುಂದರ – ಮಧುಮೇಹದ ಅಪಾಯವಿದೆ ಎಚ್ಚರ..!

ಕೃತಕ ಬೆಳಕಿನಿಂದ ಜಗತ್ತು ಸುಂದರ – ಮಧುಮೇಹದ ಅಪಾಯವಿದೆ ಎಚ್ಚರ..!

ಕೃತಕ ಬೆಳಕಿನಿಂದ ಕಣ್ಣಿಗೆ ಹಾನಿ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಕೃತಕ ಬೆಳಕಿಗೂ ಮಧುಮೇಹಕ್ಕೂ ಸಂಬಂಧವಿದೆ ಮತ್ತು ಮನುಷ್ಯನಿಗೆ ಮಧುಮೇಹದ ಅಪಾಯವನ್ನೂ ಈ ಕೃತಕ ಬೆಳಕು ಹೆಚ್ಚಿಸುತ್ತದೆ ಎಂದು ಕೆಲವೊಂದು ಅಧ್ಯಯನಗಳು ಹೇಳ್ತಿವೆ. ಚೀನಾದ ಶಾಂಗೈ ಜಿಯೋತೊಂಗ್ ಯೂನಿವರ್ಸಿಟಿಯವರು ನಡೆಸಿದ ಅಧ್ಯಯನದಲ್ಲಿ ಕೃತಕ ಬೆಳಕು ಮತ್ತು ಡಯಾಬಿಟಿಸ್ ನಡುವಿನ ಸಂಬಂಧವನ್ನು ವಿವರಿಸಲಾಗಿದೆ. ಕೃತಕ ಬೆಳಕು, ಜಗತ್ತನ್ನ ತುಂಬಾ ಸುಂದರವಾಗಿಸುತ್ತದೆ. ಮಾಲ್, ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಜಗಮಗಿಸುವ ಲೇಸರ್ ಬೆಳಕಿದ್ದರೆ ಅದರ ಲುಕ್ಕೇ ಬೇರೆ. ನೋಡುಗರನ್ನ ಇಂಥಾ ಕೃತಕ ಬೆಳಕು ಬೇಗನೇ ಆಕರ್ಷಿಸುತ್ತದೆ. ಆದರೆ ಕೃತಕ ಬೆಳಕು ಕೇವಲ ಮಾಲ್, ಪಾರ್ಕ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಇವತ್ತು ಪ್ರತಿ ಮನೆಗಳಲ್ಲೂ, ಮನೆಗೆ ಹೊಸ ವೈಬ್ ತರಲು ಒಳಾಂಗಣ ವಿನ್ಯಾಸದಲ್ಲೂ ಕೃತಕ ಬೆಳಕನ್ನು ಉಪಯೋಗಿಸುತ್ತಾರೆ. ಆದರೆ ಕೃತಕ ಬೆಳಕಿಗೆ ಒಡ್ಡಿಕೊಂಡಷ್ಟು ಮನುಷ್ಯನ ದೇಹದಲ್ಲಿ ಆಗುವ ಬದಲಾವಣೆ ಮೇಲ್ನೋಟಕ್ಕೆ ಗೊತ್ತಾಗದಿದ್ದರೂ ನಿಧಾನವಾಗಿ ಅದೂ ನಮ್ಮ ದೇಹದಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಅನ್ನುವ ಬಗ್ಗೆ ಈ ಅಧ್ಯಯನದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ : ಬಾಹ್ಯಾಕಾಶದಲ್ಲೇ ಟೋಮ್ಯಾಟೋ ಬೀಜ ಬಿತ್ತನೆ – ನಾಸಾ ಸಂಶೋಧಕರಿಂದ ಮತ್ತೊಂದು ಪ್ರಯೋಗ

ಚೀನಾ ದ ಶಾಂಗೈ ಜಿಯೋತೊಂಗ್ ಯೂನಿವರ್ಸಿಟಿ ಯವರು ನಡೆಸಿದ ಅಧ್ಯಯನದ ಪ್ರಕಾರ ಮನುಷ್ಯ ಕೃತಕ ಬೆಳಕಿಗೆ ಒಡ್ಡಿಕೊಂಡಾಗ ದೇಹದ ಹಾರ್ಮೋನ್ ಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಮುಖ್ಯವಾಗಿ ಮೇಲಾಟೋನಿನ್ ಮತ್ತು ಕಾರ್ಟಿಸೋಲ್ ಅನ್ನುವ ಎರಡು ಹಾರ್ಮೋನ್ ಗಳು ನೇರವಾಗಿ ನಮ್ಮ ದೇಹದಲ್ಲಿ ನಡೆಯುವ ಶುಗರ್ ಉತ್ಪಾದನೆಗೆ ಸಂಬಂಧ ಹೊಂದಿರುತ್ತದೆ. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಸಿರ್ಕಾಡಿಯನ್ ರಿದಮ್ ಅನ್ನುವ  ಜೈವಿಕ ಗಡಿಯಾರವಿರುತ್ತದೆ. ಇದೂ ಪ್ರಕೃತಿ ಬದ್ದವಾಗಿ ನಡೆಯುವ ಬೆಳಕು ಮತ್ತು ಕತ್ತಲಿನ ಚಕ್ರವನ್ನ ಸುಲಭವಾಗಿ ಅರ್ಥೈಸಿಕೊಳ್ಳುತ್ತದೆ.  ಆ ಮೂಲಕ ನಮ್ಮ ದೇಹವೂ ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತದೆ. ರಾತ್ರಿಯ ಸಮಯದಲ್ಲಿ ಮನುಷ್ಯನ ದೇಹದಲ್ಲಿ ಮೇಲಾಟೋನಿನ್ ಹಾರ್ಮೋನ್ ಉತ್ಪಾದನೆ ಜಾಸ್ತಿ ಇರುತ್ತದೆ. ಈ ಮೇಲಾಟೋನಿನ್ ಹಾರ್ಮೋನ್ ರಾತ್ರಿ ಹೊತ್ತಿನಲ್ಲಿ ನಿದ್ರೆಯ ಭಾವನೆ ತರುತ್ತದೆ ಮತ್ತೂ ಬೆಳಿಗ್ಗಿನ ಜಾವದಲ್ಲಿ ಬೆಳಕು ಹರಿಯುತ್ತಿದ್ದಂತೆ ಪಿಟ್ಯುಟರಿ ಗ್ರಂಥಿಯಲ್ಲಿರುವ ಹೈಪೋತಲಾಮಸ್ ಕಾರ್ಟಿಸೋಲ್ ಹಾರ್ಮೋನ್ ನ ಸಕ್ರಿಯಗೊಳಿಸುತ್ತದೆ. ದೇಹದಲ್ಲಿ ಶುಗರ್ ಉತ್ಪಾದನೆಯನ್ನ ಜಾಸ್ತಿ ಮಾಡಲು ಉತ್ತೇಜಿಸುತ್ತದೆ. ಆದರೆ ಮನುಷ್ಯ ರಾತ್ರಿ ಹೊತ್ತಿನ ಸಮಯದಲ್ಲಿ ಜಾಸ್ತಿ ಹೊತ್ತು ಕೃತಕ ಬೆಳಕಿಗೆ ಒಡ್ಡಿಕೊಂಡಾಗ ಮನುಷ್ಯನ ದೇಹಕ್ಕೆ ಗೊಂದಲವುಂಟಾಗಿ, ಮೇಲಾಟೋನಿನ್ ಹಾರ್ಮೋನ್ ನ ನಿಗ್ರಹಿಸಿ ಕಾರ್ಟಿಸೋಲ್ ಹಾರ್ಮೋನ್ ನ ಜಾಸ್ತಿ ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಮನುಷ್ಯನ ದೇಹದಲ್ಲಿ ಶುಗರ್ ಉತ್ಪಾದನೆಯಲ್ಲಿ ಏರುಪೇರಾಗಿ ಮಧುಮೇಹದ ಅಪಾಯವನ್ನ ಹೆಚ್ಚಿಸುತ್ತದೆ.

ಅಧ್ಯಯನದಲ್ಲಿ ಸಂಶೋಧಕರು ಹೊರಾಂಗಣ ಕೃತಕ ಬೆಳಕಿಗೆ (LAN) ಗೆ ಅತೀ ಹೆಚ್ಚಾಗಿ ಒಡ್ಡಲ್ಪಟ್ಟವರನ್ನ ಪರೀಕ್ಷಿಸಿದಾಗ ಅವರಲ್ಲಿ ಮಧುಮೇಹದ ಅಪಾಯವೂ 28 ಶೇಕಡದಷ್ಟು ಹೆಚ್ಚಿದೆ ಎಂದೂ ತಿಳಿದುಬಂದಿದೆ. ಈ ಸಂಶೋಧನಾ ವರದಿಯು ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ನ ‘ಡಯಾಬಿಟೊಲೊಜಿಯಾ’ ಜರ್ನಲ್ ನಲ್ಲಿ ಪ್ರಕಟವಾಗಿದೆ.

suddiyaana