ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೊಟ್ಟಮೊದಲ ಪ್ರಯೋಗ ಸಕ್ಸಸ್

ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೊಟ್ಟಮೊದಲ ಪ್ರಯೋಗ ಸಕ್ಸಸ್

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ವಿಶೇಷ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಿಸಿ ಅಪರೂಪದ ಮೈಲಿಗಲ್ಲು ಸ್ಥಾಪಿಸಿದೆ. ಈ ಅಪರೂಪದ ಸಾಧನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.

ಇದನ್ನೂ ಓದಿ:ಡೆಹ್ರಾಡೂನ್‌ನಲ್ಲಿ ಭಾರಿ ಮೇಘಸ್ಫೋಟ – ದೇವಾಲಯ, ಮನೆ, ರಸ್ತೆ ಜಲಾವೃತ , ಇಬ್ಬರು ಬಲಿ

ಕಾಲು ಕಳೆದುಕೊಂಡಿದ್ದ ವಸಿಕರನ್ ಎಂಬ ಕರಡಿಗೆ ಮೂರು ದಿನಗಳ ಕಾಲ, ಕಾಲು ಜೋಡಣೆಯ ಕಾರ್ಯ ನಡೆದಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ವೈಲ್ಡ್ ಲೈಫ್ sos ಸಂಸ್ಥೆ, ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ವೈದ್ಯರು, ಕರಡಿಗೆ ಕೃತಕ ಕಾಲು ಜೋಡಣೆ ಮಾಡಿದ್ದಾರೆ.

2019 ರಲ್ಲಿ ಬಳ್ಳಾರಿ ಅರಣ್ಯ ಪ್ರದೇಶದಿಂದ ಕರಡಿಯನ್ನು ರಕ್ಷಣೆ ಮಾಡಲಾಗಿತ್ತು. ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದ ಕರಡಿಯ (ವಸಿಕರನ್), ಹಿಂಬದಿ ಎಡಗಾಲು ಮುರಿದು ನರಳಾಡಿತ್ತು. ನಂತರ ಅದನ್ನು ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತರಲಾಗಿತ್ತು. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯ ಸುಧಾರಣೆಯಾಗಿತ್ತು. ಅಲ್ಲದೇ ಮೂರು ಕಾಲಿನಿಂದ ನಡೆಯಲು ಕರಡಿ ಅಭ್ಯಾಸ ಮಾಡಿಕೊಂಡಿತ್ತು. ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಬನ್ನೇರುಘಟ್ಟಕ್ಕೆ ಭೇಟಿ ನೀಡಿ, ಕರಡಿ ವಸಿಕರನ್ ಓಡಾಡುವುದನ್ನ ಗಮನಿಸಿದ್ದರು. ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹಕ್ಕೆ ಕೃತಕ ಕಾಲನ್ನ ತಜ್ಞರು ಸಿದ್ದಪಡಿಸಿದ್ದರು. ಸದ್ಯ ಕೃತಕ ಕಾಲಿನಿಂದ ಮೊದಲಿನ ಹಾಗೆ ಕರಡಿ ಓಡಾಟ ನಡೆಸಿದೆ.

Sulekha