ಹುಷಾರ್.. ಜಗತ್ತನ್ನೇ ಆಳುತ್ತೆ ‘AI’- ಮನುಷ್ಯರ ಕೆಲಸಕ್ಕೆ ಕುತ್ತು ತರುತ್ತಾ?
AI ತಂತ್ರಜ್ಞಾನದ ಲಾಭ, ನಷ್ಟವೇನು?

ಹುಷಾರ್.. ಜಗತ್ತನ್ನೇ ಆಳುತ್ತೆ ‘AI’-  ಮನುಷ್ಯರ ಕೆಲಸಕ್ಕೆ ಕುತ್ತು ತರುತ್ತಾ?AI ತಂತ್ರಜ್ಞಾನದ ಲಾಭ, ನಷ್ಟವೇನು?

ದಿನ ದಿನಕ್ಕೂ ಜಗತ್ತು ಅಪ್ಡೆಟ್ ಆಗುತ್ತಿದೆ.. ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿಗಳು ನಡೆಯುತ್ತಿವೆ.. ಒಂದೊಂದು ದೇಶಗಳು ಒಂದೊಂದು ರೀತಿಯಲ್ಲಿ ಮುಂದುವರಿಯುತ್ತಿವೆ. ಮಾನವನ ಮೆದಳು ಹೊಸ ಹೊಸ ಆವಿಷ್ಕಾರ್ ಮಾಡುತ್ತಿದೆ. ಮೊಬೈಲ್‌ಗಳಲ್ಲಿ ಈಗಂತೂ ಸಾಕಷ್ಟು ತಂತ್ರಜ್ಞಾನಗಳು ಮುಂದುವರಿದಿದೆ. ಈಗ AI ಯುಗ ಶುರುವಾಗಿದೆ.  ಎಐ ಬಳಕೆಯ ಸಾಕಷ್ಟು ಪ್ರಯೋಜನಗಳಿವೆ. ಅಷ್ಟೇ  ಡೇಂಜರ್ ಕೂಡ.. ಎಲ್ಲಾ ಕ್ಷೇತ್ರದಲ್ಲಿ ಈಗ AI ತಂತ್ರಜ್ಞಾನವನ್ನ ಬಳಕೆ ಮಾಡಲಾಗುತ್ತಿದೆ.  ..

ಇಂದು ಜಗತ್ತನ್ನು ಎಐ ತಂತ್ರಜ್ಞಾನ ಆಳುತ್ತಿದೆ. ಈ ತಂತ್ರಜ್ಞಾನದಿಂದ ಜಗತ್ತಿನಲ್ಲಿ ಅಸಾಧ್ಯವಾದದ್ದು ಸಾಧ್ಯವಾಗುತ್ತಿದೆ. ಕಠೀಣವಾಗಿರೋದು ಸುಲಭವಾಗುತ್ತಿದೆ. ಹಾಗೆನೇ ಎಐ ಬಳಕೆಯಿಂದ ಅತೀ ಕಡಿಮೆ ಸಮಯದಲ್ಲಿ ದೊಡ್ಡ ದೊಡ್ಡ ಕೆಲಸಗಳು ಅದ್ಬುತವಾಗಿ ಆಗುತ್ತಿವೆ. ತಂತ್ರಜ್ಞಾನ ಯಾವುದೇ ಆಗಿರ್ಲಿ ಅದರ ಬಳಕೆ ನಮಗೆ ಸರಿಯಾಗಿ ತಿಳಿಯದೇ ಹೋದರೆ ಅದರಿಂದ ಹೆಚ್ಚಿನ ಪ್ರಮಾಣದ ಅಪಾಯವನ್ನು ನಾವು ಎದುರಿಸಬೇಕಾಗುತ್ತದೆ. ಜೀವಕ್ಕೆ ಆಪತ್ತು ಕೂಡ ಆಗಲಿದೆ. ಎಐ ಅನ್ನೋದು ಒಂದು ಕಂಪ್ಯೂಟರ್ ಪ್ರೋಗ್ರಾಮ್‌.. ತಪ್ಪನ್ನ ಸರಿ ಮಾಡೋದ್ ಆಗಲಿ.. ಗೊಗಲ್‌ನಲ್ಲಿ ಯಾವುದು ಒಂದು ವಿಷ್ಯನ ಸರ್ಚ್ ಮಾಡಿದ್ರೆ, ಅದ್ರ ಬಗ್ಗೆ ನಿಮ್ಗೆ ಎಲ್ಲಾ ಕಡೆ ಮಾಹಿತಿ ಕೊಡುತ್ತೇ.. ನಿಮ್ಗೆ ಏನ್ ಬೇಕು ಅದನ್ನ ಅರ್ಥ ಮಾಡ್ಕೊಂಡು ಮಾಹಿತಿ ನೀಡುತ್ತೆ.  ಹುಡುಗ ಮುದುಕ ಆಗೋದು.. ಮನುಷ್ಯ ಪ್ರಾಣಿ ಪಕ್ಷಿಗಳು ಆಗೋ ವಿಡಿಯೋವನ್ನ ನೋಡ್ತೀರಾ.. ಇದನ್ನ ನೋಡಿ..ಇದು ನಿಜನಾ.. ಹೇಗೆ ಸಾಧ್ಯ ಅನ್ಸುತ್ತೆ.. ಬಟ್ ಇದು AI ವಿಡಿಯೋ.. ನಿಜವೆನಿಸುವಂತೆ AI ವಿಡಿಯೋ ಕ್ರಿಯೆಟ್ ಮಾಡಲಾಗುತ್ತೆ.. ಯಾವುದೇ ವೇದಿಕೆ ಮೇಲೆ AI ವಿಡಿಯೋ ಕ್ರಿಯೆಟ್ ಮಾಡಿ ನಿಜ ಎಂಬಂತೆ ಬಿಂಬಿಸುತ್ತಾರೆ..

ಈ AI ಗೆ ಸಾಕಷ್ಟು ವಿಷ್ಯವನ್ನ ತಿಳಿದುಕೊಳ್ಳುವಂತೆ ಮಾಡಲಾಗುತ್ತೆ..  ಎಲ್ಲಾ ರೀತಿಯ ವಿಷ್ಯ ತಿಳಿದುಕೊಳ್ಳುತ್ತೆ.. ರೋಬೋಟ್‌.. ಸಿಸಿ ಟಿವಿ , ಮೊಬೈಲ್‌ ಸೇರಿದಂತೆ ಎಲ್ಲಾ ರೀತಿಯ ತಂತ್ರಜ್ಞಾನದಲ್ಲಿ AI ಅಳವಡಿಕೆ ಮಾಡಿಕೊಳ್ಳಲಾಗುತ್ತೆ.. ಈಗ ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೂೡ ಎಐ ಬಳಸಲಾಗಿದ್ದು, ಹೆಚ್ಚು ಟ್ರಾಫಿಕ್ ಇರೋ ಸಿಗ್ನಲ್‌ಗಳು AI ಕ್ಯಾಮರಗಳ ಮೂಲಕ ಓಪನ್ ಮಾಡಲಾಗುತ್ತೆ.. ಮನುಷ್ಯನೇ ಕ್ರಿಯೆಟ್ ಮಾಡರೋ AI ನಿಂದ ಎಷ್ಟು ಲಾಭ ಇದ್ಯೋ, ಅಷ್ಟೇ ಡೇಂಜರ್ ಕೂಡ ಇದೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಹಾಗಿದ್ರೆ ಯಾವೆಲ್ಲಾ ಕ್ಷೇತ್ರದಲ್ಲಿ AI ಪ್ರಯೋಗ ಆಗಲಿದೆ ಅನ್ನೋದನ್ನ ನೋಡೋಣ..

ಎಲ್ಲೆಲ್ಲಿ AI ಬಳಕೆಯಾಗುತ್ತೆ?

ಎಐ ಸಹಾಯದಿಂದ ಬರವಣಿಗೆಯಲ್ಲಿ ಉಂಟಾಗುವ ಮಾನವ ಸಹಜವಾದ ತಪ್ಪುಗಳನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಎಐ ಟ್ರೋಲ್‌ಗಳು ಬರಹಗಳಲ್ಲಿ ತಪ್ಪುಗಳಿವೆಯೇ ಎಂದು ಪರಿಶೀಲಿಸಿ, ಬರಹಗಳ  ಎಡಿಟಿಂಗ್ ನಡೆಸುತ್ತವೆ.  ಭಾರತಕ್ಕೆ ಶತ್ರು ರಾಷ್ಟ್ರಗಳಾಗಿ ಕಾಡುತ್ತಿರುವ ಪಾಕಿಸ್ತಾನ  ಮತ್ತು ಚೀನಾದ ಗಡಿಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆಗೆ ಸೇನೆ ಮುಂದಾಗಿದೆ. ಈ ಮೂಲಕ ದೇಶದ ಗಡಿಯೊಳಗೆ ನುಗ್ಗಲು ಭಯೋತ್ಪಾದಕರಿಗೆ ಉತ್ತೇಜಿಸುವ ಪಾಕಿಸ್ತಾನಕ್ಕೆ ಭಾರತ ಸೆಡ್ಡು ಹೊಡೆದಿದೆ. ವೈದ್ಯಕೀಯ ಲೋಕದಲ್ಲಿ ಸವಾಲಾಗಿರುವ ಎಷ್ಟೋ ಖಾಯಿಲೆಗಳನ್ನು ಪತ್ತೆ ಹಚ್ಚಲು ಎಐ ಬಹಳಷ್ಟು ಸಹಕಾರಿಯಾಗಿದೆ.  ವೈದ್ಯಕೀಯ ಲೋಕದಲ್ಲಿ ಸವಾಲಾಗಿರುವ ಎಷ್ಟೋ ಖಾಯಿಲೆಗಳನ್ನು ಪತ್ತೆ ಹಚ್ಚಲು ಎಐ ಬಹಳಷ್ಟು ಸಹಕಾರಿಯಾಗಿದೆ. ಸ್ವಯಂ-ಚಾಲಿತ ಕಾರುಗಳಲ್ಲಿ AI ತಂತ್ರಜ್ಞಾನ. ಇದು ಮಾನವ ಹಸ್ತಕ್ಷೇಪವಿಲ್ಲದೆ ಕ್ಯಾಮೆರಾ ಹಾಗೂ ತಂತ್ರಜ್ಞಾನದ ಮೂಲಕ ಸಂಚರಿಸುವ ಶಕ್ತಿ ಹೊಂದಿದೆ. ಇದರಿಂದ ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಿಕಲಾಂಗರಿಗೆ ಅನುಕೂಲವಾಗಲಿದೆ. ಅಲ್ಲದೇ ವಾಹನ ಚಾಲನೆಯಲ್ಲಿ ಎಐ ನಿಕಯಂತ್ರಿತ ವ್ಯವಸ್ಥೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಬಹು..  ಮೊಬೈಲ್  ಮತ್ತು ಇಂಟರ್ನೆಟ್‌ಗಳಲ್ಲಿ ಎಐ ಬಳಕೆ.

ಯಾಕೆ AI  ಡೇಂಜರ್

AIಯಂತ್ರ ತಯಾರು ಮಾಡೋದು ತಮಾಷೆ ಮಾತಲ್ಲ..ಇದಕ್ಕೆ ಸಾಕಷ್ಟು ದುಡ್ಡು ಖರ್ಚು ಆಗುತ್ತೆ. ಈಗಿನ ಕಾಲಕ್ಕ  ಅಪ್ಡೇಟ್ ಆಗಲು ಸಾಕಷ್ಟು ಹಣದ ಖರ್ಚಾಗುತ್ತೆ.. ಎಐ ತನ್ನ ಮಿತಿಯೊಳಗೆ ಮಾತ್ರ  ಕೆಲಸ ಮಾಡುತ್ತೆ.. ಅದರಾಚೆ ಅದು ಯೋಚಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಒದಗಿಸಲಾದ ಡೇಟಾ ಮತ್ತು ಸಂಗತಿಗಳನ್ನು ಮಾತ್ರ ಅದು ಒಳಗೊಂಡಿರುತ್ತದೆ.  ಕೃತಕ ಬುದ್ಧಿಮತ್ತೆಯ ರೋಬೋಟ್‌ಗಳು ಮನುಷ್ಯನ ಕೆಲಸ ಕಸಿಯುವ ಸಾಧ್ಯತೆ ಎದ್ದು ಕಾಣುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆ ತಲೆದೂರುವ ಸಾಧ್ಯತೆಗಳು ಹೆಚ್ಚಾಗಿದೆ. ಉದಾಹರಣೆಗೆ ಜಪಾನ್‌ನಂತಹ ಕೆಲವು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಕೈಗಾರಿಕಾ ಕೆಲಸಗಳಲ್ಲಿ ಮಾನವ ಸಂಪನ್ಮೂಲಗಳ ಬದಲು ರೋಬೋಟ್‌ಗಳನ್ನು ಬಳಸಲಾಗುತ್ತದೆ. ಇದು ನಿರುದ್ಯೋಗಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿವೆ. ಎಐ ಅಪ್ಲಿಕೇಶನ್‌ಗಳ ಹೆಚ್ಚಿನ ಬಳಕೆ ಮೆದುಳಿಗೆ ಕೆಲಸ ಕಡಿಮೆ ಮಾಡುತ್ತವೆ. ಮನುಷ್ಯನ ಬೌದ್ಧಿಕ ಸಾಮರ್ಥ್ಯದಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕಂಪ್ಯೂಟರ್‌ಗಳು ಹಾಗೂ ಎಐ ಆಧಾರಿತ ಯಂತ್ರಗಳು ಭಾವನೆಗಳನ್ನು ಹೊಂದಿಲ್ಲ. ಆದರೆ ಇತ್ತೀಚೆಗೆ ಮಾನವನ ಸಂಗಾತಿಯ ಸ್ಥಾನವನ್ನು ಆಕ್ರಮಿಸುವ ಮಟ್ಟಕ್ಕೆ ಇವು ಬೆಳೆದು ನಿಂತಿವೆ.

Kishor KV

Leave a Reply

Your email address will not be published. Required fields are marked *