ಕಬಾಬ್, ಪಾನಿಪುರಿಯಲ್ಲೂ ಕೃತಕ ಬಣ್ಣ! – ರಾಜ್ಯದಲ್ಲಿ ಈ ಎರಡು ಖಾದ್ಯಗಳು ಬ್ಯಾನ್‌ ಆಗುತ್ತಾ?

ಕಬಾಬ್, ಪಾನಿಪುರಿಯಲ್ಲೂ ಕೃತಕ ಬಣ್ಣ! – ರಾಜ್ಯದಲ್ಲಿ ಈ ಎರಡು ಖಾದ್ಯಗಳು ಬ್ಯಾನ್‌ ಆಗುತ್ತಾ?

ಇತ್ತೀಚೆಗೆ ಕಾಟನ್‌ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಕಲರ್‌ ಹಾಕುವುದನ್ನು ರಾಜ್ಯ ಸರ್ಕಾರ ಬ್ಯಾನ್‌ ಮಾಡಿತ್ತು. ಇದೀಗ ಕಬಾಬ್ ಮತ್ತು ಪಾನಿಪುರಿಯನ್ನ ಟೆಸ್ಟ್‍ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ದಿನಾಂಕ ಮಾರ್ಚ್‌ 16 ಕ್ಕೆ ಘೋಷಣೆ

ಹೌದು, ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನ ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿತ್ತು. ಬಳಿಕ ಕಲರ್‍ಗಳ ಬಳಕೆ ಮಾಡೋದನ್ನ ನಿಷೇಧ ಮಾಡಿದೆ. ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಕಲರ್‍ಗಳನ್ನ ಬಳಕೆ ಮಾಡಬಾರದು ಅಂತಾ ಆದೇಶ ಮಾಡಿದ್ದಾರೆ. ಈ ಬೆನ್ನಲ್ಲೇ ಕಬಾಬ್, ಪಾನಿಪೂರಿ ತಯಾರಿಕೆಯಲ್ಲಿ ಸ್ವಚ್ಛತೆ ಇರಲ್ಲ ಅಂತಾ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೂಡ ಬಂದಿವೆ.  ಇದೀಗ ಕಬಾಬ್‌ ಹಾಗೂ ಪಾನಿಪುರಿಯನ್ನು ಟೆಸ್ಟ್‌ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ.

ಬೆಂಗಳೂರಿನ ಹಲವು ಏರಿಯಾಗಳ ಕಬಾಬ್, ಪಾನಿಪುರಿಯ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಮಾರ್ಚ್‌ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ ಎಂದು ವರದಿಯಾಗಿದೆ. ಕಬಾಬ್‌ ಹಾಗೂ ಪಾನಿಪುರಿಯಲ್ಲೂ ಕ್ಯಾನ್ಸರ್ ಕಾರಕ, ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಲರ್ ಬಳಕೆ ನೀಷೇಧ ಹೇರಿ ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Shwetha M