J&K ಕಲಾಪದಲ್ಲೇ ಶಾಸಕರ ಕುಸ್ತಿ – ಮರುಸ್ಥಾಪನೆ ಆಗುತ್ತಾ ಆರ್ಟಿಕಲ್ 370?
ಕಣಿವೆಯಲ್ಲಿ ನಡೆಯಲ್ಲ ಅಸೆಂಬ್ಲಿ ಆಟ 

J&K ಕಲಾಪದಲ್ಲೇ ಶಾಸಕರ ಕುಸ್ತಿ – ಮರುಸ್ಥಾಪನೆ ಆಗುತ್ತಾ ಆರ್ಟಿಕಲ್ 370?ಕಣಿವೆಯಲ್ಲಿ ನಡೆಯಲ್ಲ ಅಸೆಂಬ್ಲಿ ಆಟ 

ಆಗಸ್ಟ್ 2019 ರಲ್ಲಿ, ಕೇಂದ್ರ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿಬಂಧನೆಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ  ಸ್ಥಾನಮಾನವನ್ನು ನೀಡಿತ್ತು.  370ನೇ ವಿಧಿ ರದ್ದು ಬಳಿಕ ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಮರುಸ್ಥಾಪಿಸಲಾಯಿತು. ಸದ್ಯ ಜಮ್ಮು ಮತ್ತು ಕಾಶ್ಮೀರ, ಶಾಸಕಾಂಗ ಸಭೆಯನ್ನು ಉಳಿಸಿಕೊಂಡಿದೆ ಮತ್ತು ಲಡಾಖ್ ಅನ್ನು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಉಳಿಸಲಾಗಿದೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೆ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಇತರರು ಸೇರಿದಂತೆ ಪ್ರಾದೇಶಿಕ ಪಕ್ಷಗಳಿಂದ ವ್ಯಾಪಕ ವಿರೋಧವನ್ನು ವ್ಯಕ್ತವಾಗಿತ್ತು. ಕಳೆದ ವರ್ಷ ಡಿಸೆಂಬರ್ 11 ರಂದು, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದೆ. ಆದ್ರೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯುಲ್ಲಿ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ. ಆದ್ರೆ ಅದು  ಜಮ್ಮು ಮತ್ತು ಕಾಶ್ಮೀರ ಕಲಾಪದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.

ಸದನದ ಬಾವಿಗಿಳಿದು ಡಿಶುಂ..ಡಿಶುಂ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ಮುಂದುವರಿದಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನಿರ್ಣಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರು ಪ್ರತಿಭಟಿಸಿದ್ದರಿಂದ ಸ್ಪೀಕರ್ ಅವರು 12 ಮಂದಿ ಪ್ರತಿಪಕ್ಷ ಶಾಸಕರು ಮತ್ತು ಶಾಸಕ ಶೇಖ್ ಖುರ್ಷಿದ್ ಅವರನ್ನು ಪ್ರತ್ಯೇಕಗೊಳಿಸಿದರು. ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ‘ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಾ’ ಎಂಬ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಜಿಗಿದ್ರು. ಅಲ್ಲದೇ ಸಂವಿಧಾನದ 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ  ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯ್ತು. ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹಮದ್ ಬ್ಯಾನರ್ ಪ್ರದರ್ಶಿಸಿದ್ದರು. ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾನರ್ ಕಿತ್ತುಕೊಳ್ಳಲು ಮುಂದಾದ ಬಿಜೆಪಿ ಶಾಸಕರು, ಪಿಡಿಪಿ, ಎನ್‌ಸಿ ಶಾಸಕರ ನಡುವೆ ಹೊಡೆದಾಟ ನಡೆಯಿತು.

ನಿರ್ಣಯ ಅಂಗೀಕರಿಸಿದರು ನೋ ಯ್ಯೂಸ್

ಹೌದು ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಜಮ್ಮ ಮತ್ತು ಕಾಶ್ಮೀರ ವಿಧಾನಸಭೆ ಅಂಗೀಕರಿಸಿದೆ. ಆದ್ರೆ ಅಂಗೀಕರಿಸದ ಕೂಡಲೇ ಇದು ಜಾರಿಗೆ ಬರಲ್ಲ.. ಯಾಕಂದ್ರೆ ಏನೇ ನಿರ್ಣಯ ಕೈಗೊಂಡ್ರು ಅದಕ್ಕೆ ಲೆಫ್ಟಿನೆಂಟ್ ಜನರಲ್ ಸಹಿ ಬೇಕು. ಅವರು ಯಾವುದೇ ಕಾರಣಕ್ಕೂ ಸಹಿ ಹಾಕಲ್ಲ.. ಜಮ್ಮ ಕಾಶ್ಮೀರ ಕೇಂದ್ರಡಾಳಿತ ಪ್ರದೇಶ, ಇಲ್ಲಿ ಅಸೆಂಬ್ಲಿಗೆ ಅಷ್ಟೆನೂ ಪವರ್ ಇಲ್ಲ.  ಹೀಗಾಗಿ ಅರ್ಟಿಕಲ್ 370 ಮತ್ತೆ ಜಾರಿಗೆ ಬರಲ್ಲ.. ಆಡಳಿತ ನಡೆಸುತ್ತಿರೋ ಪಕ್ಷ ನಾವು 370 ನೇ ವಿಧಿ  ಮತ್ತೆ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರೂ, ಅದು ಅಷ್ಟು ಸಲಭ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.

Shwetha M

Leave a Reply

Your email address will not be published. Required fields are marked *