ದ್ರಾವಿಡ್ ಸೂಚನೆಗೂ ಅಹಂಕಾರಿ ಇಶಾನ್ ಕಿಶನ್ ಡೋಂಟ್‌ಕೇರ್- ಟೀಂ ಇಂಡಿಯಾ ಬಾಗಿಲು ಬಂದ್?

ಇಶಾನ್ ಕಿಶನ್.. ಇದ್ದಕ್ಕಿದ್ದಂತೆ ಈ ಯಂಗ್ಸ್ಟರ್ ಟೀಂ ಇಂಡಿಯಾದ ಬ್ಯಾಡ್ ಬಾಯ್ ಆಗಿಬಿಟ್ಟಿದ್ದಾರೆ. ವರ್ಷ ಇನ್ನೂ 25. ಕೆರಿಯರ್ ಆರಂಭವಾಗಿ ಕೆಲ ವರ್ಷಗಳಾಗಿದೆಯಷ್ಟೇ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಧನೆ ಮಾಡೋದು ಸಾಕಷ್ಟಿದೆ. ಆದ್ರೆ ಅದ್ಯಾಕೋ ಅಣ್ಣನಿಗೆ ಅಹಂಕಾರ ತಲೆಗೆ ಹತ್ತಿದಂತೆ ಕಾಣ್ತಿದೆ. ಐಪಿಎಲ್ನಲ್ಲಿ ಬಂದ ದುಡ್ಡು ಇಶಾನ್ ಕಿಶನ್ಗೆ ಇನ್ನೂ ಕರಗಿಲ್ಲ ಅನ್ಸುತ್ತೆ. ಯಾಕಂದ್ರೆ ಕೋಚ್ ರಾಹುಲ್ ದ್ರಾವಿಡ್ ಕೊಟ್ಟ ಸೂಚನೆಯನ್ನ ಕೂಡ ಇಶಾನ್ ಕಿಶನ್ ಲೆಕ್ಕಕ್ಕೇ ತೆಗೆದುಕೊಳ್ತಾ ಇಲ್ಲ. ನಾನು ಮಹಾನ್ ಇಂಟರ್ನ್ಯಾಷನಲ್ ಕ್ರಿಕೆಟರ್ ಅನ್ನೋ ರೀತಿ ವರ್ತನೆ ಮಾಡ್ತಾ ಇದ್ದಾರೆ. ಸೌತ್ ಆಫ್ರಿಕಾ ಸೀರಿಸ್ನಿಂದ ಡ್ರಾಪ್ ಆಗಿದ್ರು. ಆಫ್ಘನ್ ಸೀರಿಸ್ನಲ್ಲೂ ಆಡಿಸಿಲ್ಲ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸೀರಿಸ್ಗೂ ಡ್ರಾಪ್ ಮಾಡಲಾಗಿದೆ. ಇಶಾನ್ ಕಿಶನ್ ವಿಚಾರದಲ್ಲಿ ಸಮ್ಥಿಂಗ್ ಹ್ಯಾಪನಿಂಗ್. ಹಾಗಿದ್ರೆ ನಿಜಕ್ಕೂ ಏನಾಗ್ತಿದೆ. ಈ ಯಂಗ್ಸ್ಟರ್ ಒರಟನಂತೆ ವರ್ತಿಸ್ತಿರೋದ್ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಫೀಲ್ಡಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮೀರಿಸುವವರಿಲ್ಲ – ಟೀಂ ಇಂಡಿಯಾದ ಬೆಸ್ಟ್ ಫೀಲ್ಡರ್ ಕಿಂಗ್ ಕೊಹ್ಲಿ
ಈ ಹಿಂದೆ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ರನ್ನ ಬರೋಬ್ಬರಿ 16 ಕೋಟಿ ರೂಪಾಯಿ ಕೊಟ್ಟು ತಂಡಕ್ಕೆ ಸೇರಿಸಿಕೊಡಿತ್ತು. ಐಪಿಎಲ್ ಮೂಲಕ ಇಶಾನ್ ಕಿಶನ್ ಬೇಜಾನ್ ದುಡ್ಡು ಬಾಚಿಯಾಗಿದೆ. ಹೀಗಾಗಿ ದುಡ್ಡಿನ ಮದ ಇಶಾನ್ ಕಿಶನ್ರನ್ನ ಕುಣಿಸ್ತಾ ಇರುವಂತೆ ಕಾಣ್ತಿದೆ. ಯಾಕಂದ್ರೆ ಟೀಂ ಇಂಡಿಯಾದಲ್ಲಿ ಇಶಾನ್ ಕಿಶನ್ರ ಅಶಿಸ್ತಿನ ನಡೆ ಈಗ ಅವರ ಕೆರಿಯರ್ನ್ನೇ ಡ್ಯಾಮೇಜ್ ಮಾಡ್ತಿದೆ. ಸದ್ಯ ಭಾರತೀಯ ತಂಡದಿಂದ ಇಶಾನ್ರನ್ನ ಬಾಯ್ಕಾಟ್ ಮಾಡಲಾಗಿದೆ ಅಂದ್ರೂ ತಪ್ಪಾಗೋದಿಲ್ಲ. ಆದ್ರೆ ಇಲ್ಲಿ ನಿಜಕ್ಕೂ ಇಶಾನ್ ಕಿಶನ್ರನ್ನ ಟೀಮ್ಗೆ ಸೆಲೆಕ್ಟ್ ಮಾಡದೆ ಇರೋದಕ್ಕೆ ಅಸಲಿ ಕಾರಣ ಏನು ಅನ್ನೋ ಬಗ್ಗೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಕೆಲ ಸೋರ್ಸ್ಗಳ ಪ್ರಕಾರ, ಟೀಂ ಇಂಡಿಯಾದಲ್ಲಿರೋವ ಇಶಾನ್ ಕಿಶನ್ ತುಂಬಾ ಅಶಿಸ್ತಿನಿಂದ ವರ್ತಿಸಿದ್ರಂತೆ. ಅಂದ್ರೆ ಪ್ರಾಕ್ಟೀಸ್ ವೇಳೆ ಟೈಮ್ಗೆ ಸರಿಯಾಗಿ ಬಾರದೆ ಇರೋದು. ಸೀರಿಯಸ್ ಆಗಿ ಪ್ರಾಕ್ಟೀಸ್ ಮಾಡದೆ ಇರೋದು ಈ ಎಲ್ಲಾ ಸಂಗತಿಗಳನ್ನ ಕೋಚ್ ದ್ರಾವಿಡ್ ಮತ್ತು ಮ್ಯಾನೇಜ್ಮೆಂಟ್ ನೋಟ್ ಮಾಡಿಕೊಂಡಿದೆ. ಸೌತ್ ಆಫ್ರಿಕಾ ಸೀರಿಸ್ನಲ್ಲಿ ಇಶಾನ್ ಕಿಶನ್ ಆಡಿರಲಿಲ್ಲ. ಆದ್ರೆ ಇಶಾನ್ ಕಿಶನ್ ತಾನು ಮೆಂಟಲಿ ಸ್ಟ್ರೆಸ್ ಅನುಭವಿಸ್ತಾ ಇದ್ದೇನೆ. ನಂಗೆ ರೆಸ್ಟ್ ಬೇಕು ಅಂತೆಲ್ಲಾ ಕಾರಣ ಕೊಟ್ಟಿದ್ರು ಅನ್ನೋದು ಸುದ್ದಿ ಹಬ್ಬಿತ್ತು. ಈ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ಪ್ರೆಸ್ಮೀಟ್ನಲ್ಲಿ ಫಸ್ಟ್ಕ್ಲಾಸ್ ಕ್ರಿಕೆಟ್ನತ್ತ ಫೋಕಸ್ ಮಾಡುವಂತೆ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಉತ್ತಮವಾಗಿ ಪರ್ಫಾಮ್ ಮಾಡಿ ನ್ಯಾಷನಲ್ಗೆ ಟೀಂಗೆ ಕಮ್ಬ್ಯಾಕ್ ಮಾಡೋದು ಬೆಟರ್ ಚಾಯ್ಸ್ ಅಂತಾ ಇಶಾನ್ ಕಿಶನ್ಗೆ ನೇರವಾಗಿಯೇ ಸಲಹೆ ಕೊಟ್ಟಿದ್ರಿ. ಆದ್ರೆ ದ್ರಾವಿಡ್ ಸಲಹೆಗೆ ಇಶಾನ್ ಮಾತ್ರ ಕ್ಯಾರೇ ಅಂದಿಲ್ಲ. ರಣಜಿಯಲ್ಲಾಗಲಿ ಯಾವುದೇ ಫಸ್ಟ್ ಕ್ಲಾಸ್ ಕ್ರಿಕೆಟ್ ಟೂರ್ನಿಯಲ್ಲಿ ಇಶಾನ್ ಕಿಶನ್ ಆಡ್ತಿಲ್ಲ. ಅದ್ರಲ್ಲೂ ತಮ್ಮ ಕೆರಿಯರ್ನ ಆರಂಭಿಕ ದಿನಗಳಲ್ಲಿ ರಣಜಿಯಲ್ಲಿ ಜಾರ್ಖಂಡ್ ಪರ ಆಡ್ತಿದ್ದ ಇಶಾನ್ ಕಿಶನ್ ಅಲ್ಲೂ ಕೂಡ ಕನ್ಸಿಸ್ಟೆಂಟ್ ಆಗಿರಲಿಲ್ಲ. ನಿರಂತರವಾಗಿ ಮ್ಯಾಚ್ಗಳಿಂದ ತಪ್ಪಿಸ್ತಾನೆ ಇದ್ರು.
ಟೀಂ ಇಂಡಿಯಾದಲ್ಲಿ ಆಡೋ ಪ್ಲೇಯರ್ಸ್ಗಳು ಫಾರ್ಮ್ ಕಳೆದುಕೊಂಡಾಗ ಫಸ್ಟ್ ಕ್ಲಾಸ್ ಕ್ರಿಕೆಟ್ ಟೂರ್ನಿಗಳಲ್ಲಿ ಆಡ್ತಾರೆ. ಇನ್ನೂ ಕೆಲಲವರು ಇಂಗ್ಲೆಂಡ್ಗೆ ತೆರಳಿ ಕೌಂಟಿ ಕ್ರಿಕೆಟ್ ಆಡ್ತಾರೆ. ಅಲ್ಲಿ ಪರ್ಫಾಮ್ ಮಾಡಿ ಬಳಿಕ ಇಂಡಿಯಾ-ಎ ಟೀಮ್ನಲ್ಲಿ ಆಡ್ತಾರೆ. ಅಲ್ಲೂ ಪರ್ಫಾಮ್ ಮಾಡಿದ್ರೆ ಬಳಿಕ ಅವರನ್ನ ನ್ಯಾಷನಲ್ ಟೀಮ್ಗೆ ಮತ್ತೆ ಸೆಲೆಕ್ಟ್ ಮಾಡಲಾಗುತ್ತೆ. ಆಫ್ಕೋಸ್ ಫಾರ್ಮ್ ಅನ್ನೋದು ಯಾವತ್ತಿಗೂ ಪರ್ಮನೆಂಟ್ ಅಲ್ಲ. ಎಲ್ಲರ ಕೆರಿಯರ್ನಲ್ಲೂ ಅಪ್ & ಡೌನ್ ಅಂತಾ ಇದ್ದೇ ಇರುತ್ತೆ. ಬಟ್ ಮತ್ತೆ ಕಮ್ಬ್ಯಾಕ್ ಮಾಡೋಕೆ ಎಫರ್ಟ್ ಹಾಕಲೇಬೇಕಲ್ಲ. ತಮ್ಮನ್ನ ತಾವು ಪ್ರೂವ್ ಮಾಡ್ಲೇಬೇಕಲ್ಲ. ಡೊಮೆಸ್ಟಿಕ್, ಕೌಂಟಿ ಕ್ರಿಕೆಟ್ಗಿಂತ ಒಳ್ಳೆಯ ಪ್ಲ್ಯಾಟ್ಫಾರ್ಮ್ ಮತ್ತೊಂದಿಲ್ಲ. ಈಗ ನೋಡಿ, ನ್ಯಾಷನಲ್ ಟೀಂನಿಂದ ಹೊರಗಿರೋ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾಣೆ, ಯುಜುವೇಂದ್ರ ಚಹಾಲ್ ಇವರೆಲ್ಲ ಕೌಂಟಿ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ ಟೂರ್ನಿಗಳಲ್ಲಿ ಆಡ್ತಾ ಇದ್ದಾರೆ. ಪೂಜಾರ ಅಂತೂ ಮೇಲಿಂದ ಮೇಲೆ ಸೆಂಚೂರಿ ಹೊಡೆದಿದ್ದಾರೆ. ಇದು ಈಗಲ್ಲ.. ಈ ಹಿಂದಿನಿಂದಲೂ ಟೀಂ ಇಂಡಿಯಾದ ಕ್ರಿಕೆಟರ್ಸ್ ಫಾರ್ಮ್ ಕಳ್ಕೊಂಡಾಗ ಕೌಂಟಿ, ಡೊಮೆಸ್ಟಿಕ್ ಕ್ರಿಕೆಟ್ ಆಡ್ತಾ ಇದ್ರು. 2013 ಇಲ್ಲಾ 2014ರಲ್ಲೇನೊ ಇರ್ಬೇಕು. ನಮ್ಮ ಶಿವಮೊಗ್ಗದಲ್ಲಿರೋ ಗ್ರೌಂಡ್ನಲ್ಲಿ ಇಂಡಿಯಾ-ಎ ಮತ್ತು ವೆಸ್ಟ್ಇಂಡೀಸ್-ಎ ಟೀಮ್ ಮಧ್ಯೆ ಮ್ಯಾಚ್ ನಡೆದಿತ್ತು. ಆಗ ಇಂಡಿಯಾ-ಎ ತಂಡದ ಪರ ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್ ಮತ್ತು ಗೌತಮ್ ಗಂಭೀರ್ ಆಡಿದ್ರು. ಈ ಮೂವರೂ ಆಗ ಟೀಂ ಇಂಡಿಯಾದಲ್ಲಿ ಆಡ್ತಾ ಇದ್ರು. ನಾನು ಇಂಟರ್ನ್ಯಾಷನಲ್ ಪ್ಲೇಯರ್, ಟೀಂ ಇಂಡಿಯಾ ಪರ ಆಡುವವನು ಅನ್ನೋ ರೀತಿಯಲ್ಲಿ ಯೋಚಿಸಿದ್ರೆ ಆಗೋದಿಲ್ಲ. ಆಕಾಶಕ್ಕೆ ಹಾರಿದವನು ಒಂದಲ್ಲಾ ಒಂದು ಟೈಮ್ನಲ್ಲಿ ಕೆಳಕ್ಕೆ ಬರಲೇಬೇಕು. ಹೀಗಾಗಿ ಇಂಟರ್ನ್ಯಾಷನಲ್ ಮ್ಯಾಚ್ ಆಡಿದ ಮಾತ್ರಕ್ಕೆ ಡೊಮೆಸ್ಟಿಕ್ ಕ್ರಿಕೆಟ್ ಆಡಬಾರದು ಅಂತೇನಿಲ್ಲ. ಇದ್ರಿಂದ ಯಾವ ಪ್ಲೇಯರ್ನ ಪ್ರತಿಷ್ಠೆಗೂ ಡ್ಯಾಮೇಜ್ ಆಗೋದಿಲ್ಲ. ಡೊಮೆಸ್ಟಿಕ್ ಕ್ರಿಕೆಟ್ ಅನ್ನೋದು ಇಂಟರ್ನ್ಯಾಷನಲ್ ಮ್ಯಾಚ್ಗಳನ್ನ ಆಡ್ತಾ ಇರೋ, ದೇಶವನ್ನ ಪ್ರತಿನಿಧಿಸ್ತಾ ಇರೋ ಪ್ರತಿಯೊಬ್ಬ ಕ್ರಿಕೆಟಿಗನ ರೂಟ್ ಅದು. ನಾವು ನಡೆದು ಬಂದ ಹಾದಿಯನ್ನ ಯಾವತ್ತೂ ಮರೀಬಾರ್ದು ಅಂತಾರಲ್ಲಾ.. ಫಸ್ಟ್ಕ್ಲಾಸ್ ಅನ್ನೋದು ಕ್ರಿಕೆಟರ್ಸ್ಗಳು ತಮ್ಮ ಫೈನಲ್ ಡೆಸ್ಟಿನೇಷನ್ನತ್ತ ಹಾದು ಹೋಗುವ ದಾರಿ. ಅಲ್ಲಿಗೆ ಮತ್ತೆ ಮರಳೋದ್ರಲ್ಲಿ ಪ್ರತಿಷ್ಠೆಯ ಪ್ರಶ್ನೆ ಬರೋದಿಲ್ಲ. ಈವನ್ ಸಚಿನ್ ತೆಂಡೂಲ್ಕರ್ ಕೂಡ ತಾವು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ರಿಟೈರ್ ಆಗೋ ಮುನ್ನ ಕೊನೆಯ ಬಾರಿಗೆ ಮುಂಬೈ ಪರ ರಣಜಿ ಮ್ಯಾಚ್ ಆಡಿದ್ರು. ಯಾಕಂದ್ರೆ ಸಚಿನ್ ಅವರು ಬಂದ ಹಾದಿಯನ್ನ ಮರೆತಿರಲಿಲ್ಲ. ಕೇವಲ ಸಚಿನ್ ಅಷ್ಟೇ ಅಲ್ಲ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಎಲ್ಲರೂ ಎಷ್ಟೇ. ಫಸ್ಟ್ ಕ್ಲಾಸ್ ಕ್ರಿಕೆಟ್ನ್ನ ಕೂಡ ಆಡ್ತಿದ್ರು. ಇಲ್ಲಿ ಕೋಚ್ ದ್ರಾವಿಡ್ ಸೂಚನೆ ಕೊಟ್ರೂ ಕೂಡ ಇಶಾನ್ ಕಿಶನ್ ಡೊಮೆಸ್ಟಿಕ್ ಮ್ಯಾಚ್ಗಳನ್ನ ಆಡೋಕೆ ಗ್ರೌಂಡ್ಗೆ ಇಳೀತಾ ಇಲ್ಲ. ದ್ರಾವಿಡ್ ಏನು ಸುಮ್ನೆ ಅಂತೂ ಸಲಹೆ ಕೊಟ್ಟಿಲ್ಲ. ಪರ್ಫಾಮ್ ಮಾಡು, ಫಾರ್ಮ್ಗೆ ಬಾ, ಶಿಸ್ತು ಅಳವಡಿಸಿಕೋ ಮತ್ತೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡು ಅನ್ನೋ ಉದ್ದೇಶದಿಂದಲೇ ಸೂಚನೆ ನೀಡಿರೋದು. ಬಟ್ –ಇಶಾನ್ ಕಿಶನ್ ತಲೆಯಲ್ಲಿ ಅದೇನು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಅಣ್ಣ, ಫಸ್ಟ್ಕ್ಲಾಸ್ ಕ್ರಿಕೆಟ್ ಆಡೋಕಂತೂ ತಯಾರಿಲ್ಲ. ಮೋಸ್ಟ್ಲಿ ಐಪಿಎಲ್ನಲ್ಲೇ ಪರ್ಫಾಮ್ ಮಾಡಿ ತೋರಿಸ್ತೇನೆ ಅಂದುಕೊಂಡಿದ್ದಾರೋ ಗೊತ್ತಿಲ್ಲ. ಬಟ್ ಇದ್ರಿಂದ ಇಶಾನ್ ಕಿಶನ್ ತಮ್ಮ ಅಂತಾರಾಷ್ಟ್ರೀಯ ಕೆರಿಯರ್ಗೆ ಡ್ಯಾಮೇಜ್ ಮಾಡಿಕೊಳ್ಳೋದಂತೂ ಗ್ಯಾರಂಟಿ. ಯಾಕಂದ್ರೆ, ಈಗಾಗ್ಲೇ ಕೆ.ಎಸ್.ಭರತ್, ಕೆ.ಎಲ್.ರಾಹುಲ್ ಮತ್ತು ಧ್ರುವ್ ಜ್ಯುರೆಲ್ ಈ ಮೂವರೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೀರಿಸ್ಗೆ ಸೆಲೆಕ್ಟ್ ಆಗಿದ್ದಾರೆ. ಇಶಾನ್ ಕಿಶನ್ ಇಲ್ಲದಿದ್ರೂ ನಮ್ಮಲ್ಲಿ ಪ್ಲೇಯರ್ಸ್ಗಳಿಗೇನು ಕೊರತೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಟಿ-20 ವರ್ಲ್ಡ್ಕಪ್ಗೆ ಸೆಲೆಕ್ಟ್ ಆಗೋದು ಡೌಟೇ. ಇನ್ನಾದ್ರೂ ತಮ್ಮ ತಲೆಗೆ ಹತ್ತಿರೋದನ್ನ ಕಾಲಿಗೆ ಇಳಿಸಿ ಒಂದಷ್ಟು ಡೊಮೆಸ್ಟಿಕ್ ಮ್ಯಾಚ್ಗಳನ್ನ ಆಡಿ, ಇಂಡಿಯಾ-ಎ ಟೀಮ್ಗೆ ಸೆಲೆಕ್ಟ್ ಕಮ್ಬ್ಯಾಕ್ ಮಾಡಿದ್ರೆ ಬಚಾವ್. ಇಲ್ಲದೇ ಇದ್ರೆ ಕೇಲ್ ಖತಂ..ದುಕಾನ್ ಬಂದ್ ಆದ್ರೂ ಆಶ್ಚರ್ಯ ಇಲ್ಲ. ಹಾಗೆ ಬಂದು ಹೀಗೆ ಮರೆಯಾದ ಅದೆಷ್ಟೋ ಕ್ರಿಕೆಟಿಗರು ನಮ್ಮ ದೇಶದಲ್ಲಿದ್ದಾರೆ. ಕ್ರಿಕೆಟ್ನಲ್ಲಿ ಭಾರತ ಯಂಗ್ ಟ್ಯಾಲೆಂಟ್ಗಳು ದೊಡ್ಡ ಹಬ್ ಆಗಿರೋವಾಗ ಇಶಾನ್ ಕಿಶನ್ ಸ್ವಲ್ಪ ಎಚ್ಚರಿಕೆಯಿಂದ ಇರೋದು ಒಳ್ಳೆಯದು.