ಕೋರ್ಟ್ನಲ್ಲಿ ವಿಚಾರಣೆ ಮಾಡುತ್ತಿರುವಾಗಲೇ ನ್ಯಾಯಾಧೀಶೆ ಮೇಲೆ ಅಟ್ಯಾಕ್ ಮಾಡಿದ ಆರೋಪಿ!

ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಪ್ರಕರಣವೊಂದರ ಆರೋಪಿ ನ್ಯಾಯಾಧೀಶೆಯ ಮೇಲೆ ಅಟ್ಯಾಕ್ ಮಾಡಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಮದುವೆ – ಚಡ್ಡಿ, ಬನಿಯನ್ ಧರಿಸಿ ಮದುವೆಗೆ ಬಂದ ಇರಾ ಗಂಡ ನೂಪುರ್
ಅಮೆರಿಕದ ನೆವಾಡಾ ಕೋರ್ಟ್ ರೂಂನಲ್ಲಿ ಈ ಘಟನೆ ನಡೆದಿದೆ. ನ್ಯಾಯಾಧೀಶೆ ಮೇಲೆ ಅಟ್ಯಾಕ್ ಮಾಡಿದಾತನನ್ನು 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂದು ಗುರುತಿಸಲಾಗಿದೆ. ಅಪರಾಧಿ ಮೇಲೆ ಅನೇಕ ಪ್ರಕರಣಗಳಿದ್ದು, ಈಗಾಗಲೇ ಶಿಕ್ಷೆಯನ್ನು ಅನುಭವಿಸಿದ್ದಾನೆ. ಬ್ಯಾಟರಿ ದಂಧೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ ಬುಧವಾರ ಕೋರ್ಟ್ ಮುಂದೆ ಹಾಜರುಪಡಿಸಿದಲಾಗಿದೆ. ಈ ಪ್ರಕರಣದ ವಿಚಾರಣೆ ಸಮಯದಲ್ಲಿ ನ್ಯಾಯಧೀಶರ ಟೆಬಲ್ ಮೇಲೆ ಹಾರಿ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಿಯೋಬ್ರಾ ರೆಡ್ಡೆನ್ ನ್ಯಾಯಧೀಶರು ಇರುವ ಟೆಬಲ್ ಮೇಲೆ ಹಾರಿದ ವೇಳೆ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರು ಕೆಳಗೆ ಬಿದ್ದು ತಲೆ ಗಾಯಗಳಾಗಿವೆ, ಇನ್ನು ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರನ್ನು ಕಾಪಾಡಲು ಬಂದ ಕೋರ್ಟ್ ಮಾರ್ಷಲ್ಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನ್ಯಾಯಧೀಶೆ ಹಾಗೂ ಮಾರ್ಷಲ್ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.