ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯರ ಗಲ್ಲಕ್ಕೆ ಮುತ್ತು – ಕಿಸ್ ಕೊಟ್ಟು ಎಸ್ಕೇಪ್ ಆಗ್ತಿದ್ದ ಕಾಮುಕ ಕೊನೆಗೂ ಅರೆಸ್ಟ್

ಬೆಂಗಳೂರಿನಲ್ಲಿ ಪಾರ್ಕ್‌ಗೆ ವಾಕಿಂಗ್ ಹೋಗುವ ಮಹಿಳೆಯರು ಕೂಡಾ ಸೇಫ್ ಅಲ್ವಾ?. ಹೀಗೊಂದು ಪ್ರಶ್ನೆ ಕಾಡಲು ಉದಾಹರಣೆಯೂ ಇದೆ. ಪಾರ್ಕ್‌ಗೆ ಹೋಗಿ ತಮ್ಮ ಪಾಡಿಗೆ ವಾಕಿಂಗ್ ಮಾಡುತ್ತಿದ್ದರೆ ಒಬ್ಬ ಕಾಮುಕ ಸಡನ್ ಆಗಿ ಬಳಿ ಬರುತ್ತಾನೆ. ಗಲ್ಲಕ್ಕೆ ಮುತ್ತು ಕೊಟ್ಟು ಪರಾರಿಯಾಗುತ್ತಾನೆ. ಸಾರ್ವಜನಿಕ ಸ್ಥಳದಲ್ಲಿಯೇ ಮಹಿಳೆಯರನ್ನ ತಬ್ಬಿಕೊಳ್ಳುತ್ತಾನೆ. ಇಂಥಾ ಕಾಮುಕನೊಬ್ಬ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: ಮೊದಲು ಸರಸ.. ನಂತರ 17 ಬಾರಿ ಇರಿದು ಕೊಂದ – ಬೆಂಗಳೂರಿನ ಓಯೋ ರೂಮ್‌ನಲ್ಲಿ ಪ್ರೇಯಸಿಯ ಭೀಕರ ಹತ್ಯೆ
ಬೆಂಗಳೂರು ನಗರದ ವಿವಿಧ ಉದ್ಯಾನಗಳು, ಸಣ್ಣ ಪಾರ್ಕ್‌ಗಳು, ಮೈದಾನಗಳು ಸೇರಿದಂತೆ ಮಹಿಳೆಯರು ವಾಯು ವಿಹಾರ ಮಾಡುವ ಪ್ರಮುಖ ರಸ್ತೆಗಳಲ್ಲಿ ಕಾಮುಕನೊಬ್ಬನ ಅಟ್ಟಹಾಸ ಮಿತಿಮೀರಿತ್ತು. ಜೂನ್ 6 ರಂದು ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ಉತ್ತರ ವಿಭಾಗದ ಕಾಕ್ಸ್‌ಟೌನ್‌ನ ಮಿಲ್ಟನ್ ಪಾರ್ಕ್ ಬಳಿ ಕೂಡಾ ಅದೇ ಕಾಮುಕ ಚೇಷ್ಟೆ ಮಾಡಿದ್ದಾನೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಪ್ರದೇಶದಲ್ಲಿ ಆರೋಪಿ ಮದನ್ ತನ್ನ ಕೀಳಮಟ್ಟದ ಮನಸ್ಥಿತಿ ಪ್ರದರ್ಶಿಸಿದ್ದಾನೆ.
ಬೆಳಗ್ಗೆ ವಾಯು ವಿಹಾರಕ್ಕೆ ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬಳಿ ಆರೋಪಿಯು ಮುಗ್ಧವಾಗಿ ಹತ್ತಿರ ಹೋಗಿ ತಬ್ಬಿಕೊಂಡು ಬಲವಂತವಾಗಿ ತುಟಿಗೆ ಮುತ್ತು ಕೊಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಇದೇ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನೂ ಪಾರ್ಕ್‌ನಲ್ಲಿಯೇ ತಬ್ಬಿ ಮುತ್ತು ಕೊಟ್ಟಿದ್ದಾನೆ ಎಂದು ದೂರುಗಳು ದಾಖಲಾಗಿವೆ. ಈ ಘಟನೆ ನಂತರ ಮಹಿಳೆಯರು ಆರೋಪಿಗೆ ಪ್ರಶ್ನೆ ಮಾಡುತ್ತಿದ್ದಂತೆ, ‘ನೀವು ಯಾರಿಗೇ ಹೇಳಿದರೂ ಏನು ಆಗಲ್ಲ’ ಎಂದು ಬೆದರಿಕೆ ಹಾಕಿ ಅಲ್ಲಿ ನಿಂತ ಕಾರಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮಹಿಳೆಯರು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ದೂರು ದಾಖಲಿಸಿದ್ದಾರೆ. ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ವಿಚಾರಣೆ ನಡೆಸಲಾಗುತ್ತಿದ್ದು, ಪೋಕ್ಸೋ (POCSO) ಮತ್ತು ಇತರ ಸಂಬಂಧಿತ ಕಲಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆ ಬಗ್ಗೆ ಮಕ್ಕಳ ಪೋಷಕರು, ಮಹಿಳಾ ಹಕ್ಕು ಹೋರಾಟಗಾರರು, ಮತ್ತು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚುವರಿ ಪೊಲೀಸ್ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಕಠಿಣ ಕಾನೂನು ಜಾರಿ ಮಾಡುವಂತೆ ಒತ್ತಾಯಿಸಲಾಗಿದೆ.

ನೋಡಿರಿ

