ಅತ್ಯಾಚಾರಕ್ಕೆ ಮುಂದಾದ ಫೇಸ್‌ಬುಕ್ ಸ್ನೇಹಿತ – ಪ್ರತಿಭಟಿಸಿದ ಯುವತಿಯ ತಲೆಬುರುಡೆಯನ್ನೇ ಒಡೆದ ಕಿರಾತಕ ಅರೆಸ್ಟ್

ಅತ್ಯಾಚಾರಕ್ಕೆ ಮುಂದಾದ ಫೇಸ್‌ಬುಕ್ ಸ್ನೇಹಿತ – ಪ್ರತಿಭಟಿಸಿದ ಯುವತಿಯ ತಲೆಬುರುಡೆಯನ್ನೇ ಒಡೆದ ಕಿರಾತಕ ಅರೆಸ್ಟ್

ಆಕೆಗೆ ಈಗಷ್ಟೇ 18 ತುಂಬಿತ್ತು. ಕಣ್ಣಿನ ತುಂಬಾ ನೂರೆಂಟು ಹೊಂಗನಸು. ಓದಿನ ಬಗ್ಗೆ ಅಪಾರ ಆಸಕ್ತಿ. ಕೆಲಸಕ್ಕೆ ಸೇರಿ ತಾನು ಸೆಟಲ್ ಆಗಬೇಕು ಎಂಬ ಗುರಿ. ಹೀಗಿರುವಾಗಲೇ ಫೇಸ್‌ಬುಕ್‌ಲ್ಲಿ ಗೆಳೆಯನೊಬ್ಬನ ಪರಿಚಯವಾಗಿತ್ತು. ಆತ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಈಕೆ ಅಕ್ಸೆಪ್ಟ್ ಮಾಡಿದ್ದಳು. ಮೊದಲು ಸ್ನೇಹ ನಂತರ ಪ್ರೀತಿ.. ನಂತರ ಶುರುವಾಗಿದ್ದು ಮಾತುಕತೆ. ಆತನೋ ಪ್ರೀತಿಯ ನೆಪದಲ್ಲಿ ಮಂಚಕ್ಕೆ ಕರೆಯುವಷ್ಟರ ಮಟ್ಟಿಗೆ ಬಂದಿದ್ದ. ಇದಕ್ಕೆ ಮನೆಯವರ ಬಳಿ ಮದುವೆ ಎಂಬ ಒಪ್ಪಿಗೆಯನ್ನೂ ಪಡೆದಿದ್ದ. ನಂತರ ಆತನ ವರ್ತನೆ ನಿಜಕ್ಕೂ ಅಕ್ಷಮ್ಯ.

ಇದನ್ನೂ ಓದಿ:   ಶಿವನಿಗೆ ಕಣ್ಣು ಕೊಟ್ಟು ಭಕ್ತಿ ಮೆರೆದ ಬೇಡರ ಕಣ್ಣಪ್ಪನಂತೆ ನಾನು ತಲೆಯನ್ನೇ ಕೊಡುತ್ತೇನೆ – ದೇಗುಲದಲ್ಲಿ ತಲೆ ಕತ್ತರಿಸಿಕೊಂಡ ಶಿವಭಕ್ತ..!

ಮುಂಬೈನ ನಿವಾಸಿ ದೀಪಕ್ ಎಂಬಾತ ಫೇಸ್ ಬುಕ್ ಮೂಲಕ 18ಕ ಹರೆಯದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ನೈಸ್ ಆಗಿಯೇ ಮಾತನಾಡಿ ಸ್ನೇಹಿತನಾಗಿದ್ದ. ನಂತರ ಯುವತಿ ತನ್ನ ಪ್ರೀತಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದ. ಹುಡುಗಿ ತಾನು ಹೆಣೆದ ಬಲೆಗೆ ಬಿದ್ದಿದ್ದು ಗೊತ್ತಾಗಿದ್ದೇ ತಡ, ಯುವತಿಯ ಹೆತ್ತವರ ಬಳಿ ಮದುವೆಯ ಪ್ರೊಪೋಸಲ್ ಇಟ್ಟಿದ್ದಾನೆ. ಯುವತಿಯ ಮನೆಯವರು ಕೂಡ ಒಪ್ಪಿಗೆ ಸೂಚಿಸಿಯೇ ಬಿಟ್ಟರು. ಅಷ್ಟೇ ಅಲ್ಲ, ಯುವತಿ ಮನೆಯವರಿಗೆ ಅದೇನೋ ಮೋಡಿ ಮಾಡಿದ್ದಾನೋ ಈ ದೀಪಕ್. ಯುವತಿ ಮನೆಯವರು ಅವರಿಬ್ಬರಿಗೂ ಜೊತೆಯಲ್ಲೇ ಇರುವ ಅವಕಾಶ ಕೂಡಾ ನೀಡಿದರು. ಆದರೆ, ಯುವತಿಗೆ ತಾನು ತನ್ನ ಶಿಕ್ಷಣವನ್ನು ಮುಗಿಸಬೇಕು, ನಂತರ ಬಾಲಿವುಡ್‌ ನಲ್ಲಿ ಕೆಲಸ ಮಾಡಬೇಕೆನ್ನುವ ಆಸೆ. ಈತ ಕೂಡಾ ತಾನು ಬಾಲಿವುಡ್ ನಲ್ಲಿ ನಿರ್ಮಾಪಕ ಅಂತಾನೂ ಹೇಳಿಕೊಂಡಿದ್ದ. ಇದರ ಮಧ್ಯೆ ಯುವತಿ ಜೊತೆ ಆತ ಸಲುಗೆ ಜಾಸ್ತಿ ಮಾಡಿಕೊಂಡಿದ್ದ. ನಂತರ ಇದೇ ಸಲುಗೆಯಲ್ಲಿ ಲೆಂಗಿಕ ಬಯಕೆ ಈಡೇರಿಸಿಕೊಳ್ಳಲು ಮುಂದಾಗಿದ್ದ. ಆದರೆ, ಆಕೆ ಒಪ್ಪಿರಲಿಲ್ಲ. ಅದಕ್ಕೆ ಕೋಪಗೊಂಡ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಇದನ್ನು ಪ್ರತಿಭಟಿಸಿದ್ದಕ್ಕೆ, ಆಕೆಯ ತಲೆಬುರುಡೆಯನ್ನೇ ಒಡೆದು ಹಾಕಿದ್ದಾನೆ ಈ ಪಾಪಿ ದೀಪಕ್. ಆಕೆ ನೆಲಕ್ಕೆ ಕುಸಿದು ಬಿದ್ದ ಬಳಿ ಅಲ್ಲಿಂದ ಆತ ಪರಾರಿಯಾಗಿದ್ದಾನೆ. ಈತ ಹುಡುಗಿ ಸತ್ತೇ ಹೋಗಿದ್ದಾಳೆ ಎಂದು ಪರಾರಿಯಾಗಿದ್ದಾನೆ. ಇದಾದ ನಂತರ ಯುವತಿಗೆ ಪ್ರಜ್ಞೆ ಬಂದಿದೆ. ಸಹಾಯಕ್ಕಾಗಿ ಕೂಗಿ ಕೊಂಡಿದ್ದಾಳೆ. ಕೂಡಲೇ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡ ಯುವತಿ ಚೇತರಿಕೊಳ್ಳುತ್ತಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಲಕಿಯನ್ನು ಕೊಲ್ಲಲು ಬಯಸಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಸೂರತ್ನಲ್ಲಿ ಎಟಿಎಂ ಒಂದರಲ್ಲಿ ಆರೋಪಿ ದೀಪಕ್ ಮಾಲಕರ್ನನ್ನು ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.

suddiyaana