ಬಾಲಿವುಡ್‌ ಬಿಚ್ಚಮ್ಮಳ ಅರೆಸ್ಟ್ ನಾಟಕ – ಉರ್ಫಿ ಜೊತೆಗಿದ್ದ ನಾಲ್ವರು ನಕಲಿ ಪೊಲೀಸರ ಬಂಧನ!

ಬಾಲಿವುಡ್‌ ಬಿಚ್ಚಮ್ಮಳ ಅರೆಸ್ಟ್ ನಾಟಕ – ಉರ್ಫಿ ಜೊತೆಗಿದ್ದ ನಾಲ್ವರು ನಕಲಿ ಪೊಲೀಸರ ಬಂಧನ!

ಉರ್ಫಿ ಜಾವೇದ್‌ ಹೆಸರು ಕೇಳಿದಾಕ್ಷಣ ಎಲ್ಲರ ಕಣ್ಣು ಮುಂದೆ ಬರುವುದು ಅರೆಬರೆ ಬಟ್ಟೆ ಧರಿಸಿರುವ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ಇತ್ತೀಚೆಗೆ ಹಿಂದೆ ಉರ್ಫಿ ಜಾವೇದ್ ಅವರನ್ನು ಬಂಧಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೇ ವಿಚಾರವಾಗಿ ಬಾಲಿವುಡ್‌ ಬಿಚ್ಚಮ್ಮಳಿಗೆ ಕಾನೂನು ಸಂಕಷ್ಟ ಎದುರಾಗಿದೆ.

ಹೌದು, ಇತ್ತೀಚೆಗೆ ಉರ್ಫಿ ತುಂಡುಡುಗೆ ಧರಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಹೇಳುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ಈ ವಿಚಾರವಾಗಿ ಅನೇಕರು ಮುಂಬೈ ಪೊಲೀಸರ ವಿರುದ್ಧ ಅಪಸ್ವರ ತೆಗೆದಿದ್ದರು. ಇನ್ನೂ ಕೆಲವರು ಪ್ರಚಾರಕ್ಕಾಗಿ ಇದು ಉರ್ಫಿ ಆಡಿದ ನಾಟಕ ಎನ್ನಲಾಗಿತ್ತು. ಈ ಪ್ರಕರಣದ ಅಸಲಿಯತ್ತು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಓಶಿವಾರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇದರಿಂದಾಗಿ ಉರ್ಫಿಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ತುಂಡುಡುಗೆ ಧರಿಸಿ ಬಂದ ಉರ್ಫಿ ಪೊಲೀಸರ ವಶಕ್ಕೆ – ಪಾಪ.. ಈ ನಟಿಯ ದೇಹಕ್ಕೆ ಬಟ್ಟೆಯೇ ಸೆಟ್ ಆಗಲ್ವಂತೆ..!

ಉರ್ಫಿ ಜಾವೇದ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ವಿಡಿಯೋ ಮಾಡಿ ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಿದ್ದಕ್ಕಾಗಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸಿದ ಓಶಿವಾರ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?

ಸಣ್ಣ ಬಟ್ಟೆ ಧರಿಸಿದ್ದಕ್ಕೆ ಉರ್ಫಿ ಅವರನ್ನು ಮಹಿಳಾ ಪೊಲೀಸ್ ಸಿಬ್ಬಂದಿ ರೀತಿ ಕಾಣಿಸಿದ ಇಬ್ಬರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಅವರನ್ನು ವಶಕ್ಕೆ ಪಡೆಯುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆಗಿತ್ತು. ಸಣ್ಣ ಬಟ್ಟೆ ಹಾಕಿದ್ದಕ್ಕೆ ಅರೆಸ್ಟ್ ಮಾಡೋದು ಏಕೆ ಎಂದು ಅನೇಕರು ಪೊಲೀಸರನ್ನು ಪ್ರಶ್ನೆ ಮಾಡಿದ್ದರು.

ಪೊಲೀಸರು ಹೇಳೋದೇನು?

ವಿಡಿಯೋದಲ್ಲಿ ಇರುವವರು ಮುಂಬೈ ಪೊಲೀಸರು ಅಲ್ಲ. ಅದು ನಮ್ಮ ಸಮವಸ್ತ್ರವೂ ಅಲ್ಲ. ತಪ್ಪು ದಾರಿಗೆ ಎಳೆದ ಈ ವಿಡಿಯೋ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Shwetha M