ಒಂದೇ ಮನೆಯ ನಾಲ್ವರನ್ನು ಕೊಂದ ಕಟುಕ ಅರೆಸ್ಟ್ – ಮಂಗಳೂರು ಏರ್‌ಪೋರ್ಟ್ ಉದ್ಯೋಗಿಯಿಂದ ಭೀಕರ ಕೃತ್ಯ

ಒಂದೇ ಮನೆಯ ನಾಲ್ವರನ್ನು ಕೊಂದ ಕಟುಕ ಅರೆಸ್ಟ್ – ಮಂಗಳೂರು ಏರ್‌ಪೋರ್ಟ್ ಉದ್ಯೋಗಿಯಿಂದ ಭೀಕರ ಕೃತ್ಯ

ಆತ ಮಂಗಳೂರು ಏರ್‌ಪೋರ್ಟ್‌ನಲ್ಲಿ ಉದ್ಯೋಗಿ. ಆಕೆ ಗಗನ ಸಖಿ. ಇಬ್ಬರಿಗೂ ಪರಿಚಯವಿತ್ತು. ಈ ಇಬ್ಬರ ಪರಿಚಯದಿಂದ ಆಕೆಯ ಕುಟುಂಬದವರಿಗೂ ಆತ ಹತ್ತಿರವಾಗಿದ್ದ. ಆದರೆ, ಹೀಗೆ ಪರಿಚಯವಾದವನೇ ಮನೆಯವರ ಪಾಲಿನ ಮೃತ್ಯುವಾಗುತ್ತಾನೆ ಅಂತಾ ಯಾರಿಗೆ ಗೊತ್ತಿತ್ತು. ಆ ಪಾಪಿ ಒಂದೇ ಮನೆಯ ನಾಲ್ಕು ಜನರ ನೆತ್ತರು ಹೀರಿದ್ದಾನೆ. ಮಾಡಿದ ಪಾಪಕ್ಕೆ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗ! – ಹಮಾಸ್‌ ಉಗ್ರರ ಕೃತ್ಯ ಬಯಲು ಮಾಡಿದ ಇಸ್ರೇಲ್‌

ಆವತ್ತು ನವೆಂಬರ್ 12. ಮಲ್ಪೆ ಠಾಣಾ ವ್ಯಾಪ್ತಿಯಲ್ಲಿರುವ ನೆಜಾರುವಿನಲ್ಲಿ ತೃಪ್ತಿ ಲೇಔಟ್ ನಲ್ಲಿರುವ ಮೊಹಮ್ಮದ್ ನೂರ್ ಎಂಬುವರ ಮನೆಗೆ ಪ್ರವೀಣ್ ಆಗಮಿಸಿದ್ದ. ಮಲ್ಪೆಯ ಸಂತೆಕಟ್ಟೆಯಿಂದ ಆಟೋ ಹತ್ತಿ ನೇರವಾಗಿ ತೃಪ್ತಿ ಲೇಔಟ್ ಗೆ ಬಂದಿದ್ದ ಆತ, ಆಟೋ ಇಳಿದು ಒಳ ಪ್ರವೇಶಿಸಿದ್ದ. ಆನಂತರ ಮನೆಯಲ್ಲಿದ್ದ ಒಬ್ಬೊಬ್ಬರನ್ನೇ ಚೂರಿಯಿಂದ ಇರಿದು ಕೊಂದಿದ್ದ. ಮನೆಯಲ್ಲಿದ್ದ ನೂರ್ ಪತ್ನಿ ಹಸೀನಾ ಹಾಗೂ ಅವರ ಮಕ್ಕಳಾದ 23 ವರ್ಷದ ಅಫ್ನಾನ್  ಹಾಗೂ 21 ವರ್ಷದ ಅಯ್ನಾಝ್ ನ್ನು ಚೂರಿ ಇರಿದು ಕೊಂದಿದ್ದ. ಮನೆಯೊಳಗೆ ಚೀರಾಟ ಕೇಳಿಬಂದಿದ್ದರಿಂದ ಮನೆ ಹೊರಗೆ ಇದ್ದ 14 ವರ್ಷದ ಅಸೀಮ್ ಓಡೋಡಿ ಬಂದಿದ್ದ. ಆತನನ್ನು ಕೂಡಾ ಭೀಕರವಾಗಿ ಪ್ರವೀಣ್ ಕೊಂದಿದ್ದಾನೆ. ಕಟುಕನೊಬ್ಬ ಮನೆಯವರ ಮೇಲೆ ದಾಳಿ ಮಾಡುತ್ತಿದ್ದಂತೆ ಮನೆಯಲ್ಲಿದ್ದ ಹಸೀನಾ ಎಂಬುವರು ಬಾತ್ ರೂಮಿನಲ್ಲಿ ಅಡಗಿಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದರು. ಇದೀಗ ಅವರೂ ಸಹ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಒಂದೇ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ ಕಂಡು ಇಡೀ ಉಡುಪಿ ಜಿಲ್ಲೆ ದಂಗಾಗಿ ಹೋಗಿತ್ತು.

ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಭೀಭತ್ಸ ಹತ್ಯೆ ಪ್ರಕರಣದ ಆರೋಪಿಯನ್ನು ಕೊನೆಗೂ ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಮೂಲಕ ಮಹಾರಾಷ್ಟ್ರಕ್ಕೆ ಪಲಾಯನ ಮಾಡಲು ಯತ್ನಿಸಿದ್ದ ಆತನನ್ನು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು 35 ವರ್ಷದ ಪ್ರವೀಣ್ ಚೌಗಲೆ ಎಂದು ಗುರುತಿಸಲಾಗಿದೆ. ಈತ ಮಂಗಳೂರು ಏರ್ ಪೋರ್ಟ್ ನಲ್ಲಿ ಉದ್ಯೋಗಿಯಾಗಿದ್ದು, ಖಾಸಗಿ ಕಂಪನಿಯ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈತ ಮೃತರ ಕುಟುಂಬಕ್ಕೆ ಪರಿಚಿತನಾಗಿದ್ದ. ಈತ, ಮಹಾರಾಷ್ಟ್ರದ ಸಾಂಗ್ಲಿಯವನು ಎಂಬುದು ಸಹ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ.

ಉಡುಪಿಯಲ್ಲಿ ನಾಲ್ಕು ಕೊಲೆಗಳನ್ನು ಮಾಡಿದ ನಂತರ, ಪರಾರಿಯಾಗಿದ್ದ ಈತ ನಾನಾ ಕಡೆಗೆ ತೆರಳಿ, ಆನಂತರ ಬೆಳಗಾವಿ ತಲುಪಿದ್ದ. ಅಲ್ಲಿಂದ ಮಹಾರಾಷ್ಟ್ರದ ಕಡೆಗೆ ಹೋಗುವಾಗ ಈತನ ಬೆನ್ನು ಹತ್ತಿದ್ದ ಉಡುಪಿ ಪೊಲೀಸರು ಬೆಳಗಾವಿ ಪೊಲೀಸರ ಸಹಾಯದಿಂದ ಮಿಂಚಿನ ಕಾರ್ಯಾಚರಣೆ ನಡೆಸಿ ಕುಡಚಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಆರೋಪಿ ಪ್ರವೀಣ್, ಮೃತ ಅಯ್ನಾಝ್ ಎಂಬಾಕೆಗೆ ಪರಿಚಿತವಾಗಿದ್ದ. ಆಕೆ, ಮಂಗಳೂರು ವಿಮಾನ ನಿಲ್ದಾಣದಲ್ಲಿಯೇ ಗಗನಸಖಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಈಕೆಯ ಮೂಲಕವೇ ಪ್ರವೀಣ್, ಈ ಕುಟುಂಬಕ್ಕೆ ನಂಟು ಉಂಟಾಗಿತ್ತು. ಅಯ್ನಾಝ್ ನೊಂದಿಗೆ ಯಾವುದೋ ದೊಡ್ಡದಾದ ಮನಸ್ತಾಪ ಹಾಗೂ ದ್ವೇಷದಿಂದಲೇ ಈ ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ. ಆರೋಪಿನಿಗೆ ಈಗಾಗಲೇ ಮದುವೆ ಆಗಿ 2 ಮಕ್ಕಳಿದ್ದಾರೆ. ಯುವತಿಯ ಮನೆಯವರ ಹಾಗೂ ಮನೆಯವರಿಗೂ ಈತನ ಪರಿಚಯವಿದ್ದ ಕಾರಣ ಭಾನುವಾರ ಬೆಳಗ್ಗೆ ರಿಕ್ಷಾದಲ್ಲಿ ಬಂದು ನೇರವಾಗಿ ಮನೆಗೆ ಹೋದಾಗಲೂ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಯುವತಿಗೆ ಚೂರಿಯಿಂದ ಇರಿದು ಹತ್ಯೆ ಮಾಡುವುದಕ್ಕೆ ಮುಂದಾಗಿರುವುದನ್ನು ಗಮನಿಸಿದ ತಾಯಿ ಹಸೀನಾ ಹಾಗೂ ಸಹೋದರಿ ಅಫ್ನಾನ್ ಅವರು ರಕ್ಷಿಸುವುದಕ್ಕೆ ಮುಂದಾಗಿದ್ದರು. ಈ ಕೊಲೆಯ ಬಗ್ಗೆ ಪೊಲೀಸರಿಗೆ ಬಾಯಿ ಬಿಟ್ಟರೆ ಶಿಕ್ಷೆಯಾಗಬಹುದೆನ್ನುವ ಭೀತಿ ಹಾಗೂ ಸಾಕ್ಷ್ಯ ನಾಶ ಮಾಡಬೇಕೆಂಬ ಉದ್ದೇಶದಿಂದ ಉಳಿದ ಮೂವರನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Sulekha