ಒಂದು ಊರಿನಿಂದ ಮತ್ತೊಂದು ಊರಿಗೆ ಸಂಪರ್ಕ ಕಲ್ಪಿಸಿದ ಭಾರತೀಯ ಸೇನಾ ಯೋಧರು! – ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಕೇವಲ 18 ದಿನಗಳಲ್ಲಿ ಸೇತುವೆ ನಿರ್ಮಾಣ!

ಒಂದು ಊರಿನಿಂದ ಮತ್ತೊಂದು ಊರಿಗೆ ಸಂಪರ್ಕ ಕಲ್ಪಿಸಿದ ಭಾರತೀಯ ಸೇನಾ ಯೋಧರು! – ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಕೇವಲ 18 ದಿನಗಳಲ್ಲಿ ಸೇತುವೆ ನಿರ್ಮಾಣ!

ಸಿಕ್ಕಿಂನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿದೆ. ನೂರು ಮರಗಳು ನೆಲಕ್ಕುರುಳಿವೆ. ಹಲವು ಮನೆಗಳು ನೆಲಕ್ಕುರುಳಿವೆ. ಸೇತುವೆಗಳು ಕೊಚ್ಚಿಹೋಗಿವೆ. ಪ್ರವಾಹದಿಂದ ನಲುಗಿರುವ ಸಿಕ್ಕಿಂನಲ್ಲಿ ರಕ್ಷಣಾ ಸಿಬ್ಬಂಧಿಗಳು ಇನ್ನೂ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದೀಗ ಭಾರತೀಯ ಸೇನಾ ಯೋಧರು ದೇಶವೇ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ. ಪ್ರವಾಹಪೀಡಿತ ಸಿಕ್ಕಿಂನಲ್ಲಿ ಭಾರತೀಯ ಸೇನೆಯ ಯೋಧರು ಕೇವಲ 18 ದಿನಗಳಲ್ಲಿ ಸೇವೆಯೊಂದನ್ನು ನಿರ್ಮಿಸಿದ್ದಾರೆ.

ಸದ್ಯ ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಕೊಚ್ಚಿಹೋಗಿವೆ. ಸದ್ಯ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಯೋಧರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದೀಗ ಸಿಕ್ಕಿಂನಲ್ಲಿ ಭಾರತೀಯ ಸೇನೆಯ ಯೋಧರು ಕೇವಲ 18 ದಿನಗಳಲ್ಲಿ ಸೇತುವೆಯೊಂದನ್ನು ನಿರ್ಮಿಸುವ ಮೂಲಕ ಎರಡು ನಗರಗಳ ನಡುವೆ ಮತ್ತೆ ಸಂಪರ್ಕ ಏರ್ಪಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಬಂಧನ – ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿಯ ಬಂಧನ

ಅ.4ರಂದು ಸಿಕ್ಕಿಂನಲ್ಲಿ ಉಂಟಾದ ದಿಢೀರ್‌ ಪ್ರವಾಹದಿಂದಾಗಿ ಮಂಗಾನ್‌ ಮತ್ತು ಚುಂಗ್‌ಥಾಂಗ್‌ ನಡುವಿನ ಸಂಪರ್ಕದ ಕೊಂಡಿಯಾಗಿದ್ದ ಸೇತುವೆಯು ಕೊಚ್ಚಿಹೋಗಿತ್ತು. ಹೀಗಾಗಿ, ಎರಡು ನಗರಗಳ ನಡುವೆ ಸಂಪರ್ಕವೇ ಇಲ್ಲದಾಗಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ಸೇನೆಯ ತ್ರಿಶಕ್ತಿ ಪಡೆಯು ಸ್ಥಳೀಯರ ನೆರವಿನಿಂದ ಹೊಸ ಸೇತುವೆ ನಿರ್ಮಾಣ ಆರಂಭಿಸಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ 18 ದಿನಗಳಲ್ಲಿ ಸೇತುವೆ ತಲೆಎತ್ತಿ, ಸಂಚಾರಕ್ಕೆ ಮುಕ್ತವಾಗಿದೆ ಎಂದು ವರದಿಯಾಗಿದೆ.

Shwetha M