ಶತಕ ಸಿಡಿಸಿ ಮಿಂಚಿದ ಅರ್ಜುನ್ ತೆಂಡೂಲ್ಕರ್ ಈಗ ಬೌಲಿಂಗ್‌ನಲ್ಲೂ ಶೈನಿಂಗ್
ಮೂರು ವಿಕೆಟ್ ಪಡೆದು ಮಿಂಚಿದ ಮರಿ ತೆಂಡೂಲ್ಕರ್

ಶತಕ ಸಿಡಿಸಿ ಮಿಂಚಿದ ಅರ್ಜುನ್ ತೆಂಡೂಲ್ಕರ್ ಈಗ ಬೌಲಿಂಗ್‌ನಲ್ಲೂ ಶೈನಿಂಗ್ಮೂರು ವಿಕೆಟ್ ಪಡೆದು ಮಿಂಚಿದ ಮರಿ ತೆಂಡೂಲ್ಕರ್

ಗೋವಾ ಪರ ರಣಜಿ ಪಂದ್ಯವಾಡುತ್ತಿದ್ದ ಅರ್ಜುನ್ ತೆಂಡೂಲ್ಕರ್ ಸೆಂಚುರಿ ಬಾರಿಸಿ ಎಲ್ಲರ ಗಮನಸೆಳೆದಿದ್ದರು. ಇದೀಗ ಬೌಲಿಂಗ್‌ನಲ್ಲೂ ಕೂಡಾ ಉತ್ತಮ ಪ್ರದರ್ಶನ ತೋರಿದ್ದಾರೆ. ಕ್ರಿಕೆಟ್ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬೌಲಿಂಗ್‌ನಲ್ಲೂ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ.

ಇದನ್ನೂ ಓದಿ:  ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ – ಮೆಸ್ಸಿ ಮೇಲೆ ಅಭಿಮಾನಿಗಳ ಕಣ್ಣು

ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಅರ್ಜುನ್, ನಂತರ 23.1 ಓವರ್ ಬೌಲಿಂಗ್ ಮಾಡಿ 104 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಈ ಮೂಲಕ ರಾಜಸ್ಥಾನದ ಇನ್ನಿಂಗ್ಸ್ ನ್ನು ಮುಕ್ತಾಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲೂ ಅರ್ಜುನ್ ಪಡೆದ 3 ವಿಕೆಟ್‌ ಗಳು ಕೂಡಾ ಪ್ರಮುಖ ಆಟಗಾರರದ್ದೇ ಆಗಿದ್ದವು ಎಂಬುದು ವಿಶೇಷ. ಅರ್ಜುನ್ ತಮ್ಮ ಮೊದಲ ವಿಕೆಟ್ ರೂಪದಲ್ಲಿ ರಾಜಸ್ಥಾನದ ಆಕ್ರಮಣಕಾರಿ ಆಟಗಾರ ಮಹಿಪಾಲ್ ಲೊಮ್ರೋರೊ ವಿಕೆಟ್ ಪಡೆದರೆ, ಎರಡನೇ ವಿಕೆಟ್ ರೂಪದಲ್ಲಿ ಸಲ್ಮಾನ್ ಖಾನ್ ಅವರ ವಿಕೆಟ್ ಪಡೆದರು. ನಂತರ ಕೊನೆಯ ದಿನ 11ನೇ ಕ್ರಮಾಂಕದ ಆಟಗಾರ ಅನಿಕೇತ್ ಚೌಧರಿ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

suddiyaana