ಕರ್ನಾಟಕವನ್ನು ಕಾಡಿದ ಮರಿ ತೆಂಡೂಲ್ಕರ್ – ಗೋವಾ ಪರ 3 ವಿಕೆಟ್ ಕಿತ್ತ ಅರ್ಜುನ್ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ರಣಜಿ ಟೂರ್ನಿಯಲ್ಲಿ ಗೋವಾ ಪರ ಆಡುತ್ತಿದ್ದಾರೆ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿ:ಭರ್ಜರಿ ಶತಕ ಸಿಡಿಸಿದ ಕರುಣ್ ನಾಯರ್ – ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಗ್ರೇಟ್ ಕಮ್‌ಬ್ಯಾಕ್
ಕರ್ನಾಟಕದ ವಿರುದ್ಧ ಅರ್ಜುನ್ ತೆಂಡೂಲ್ಕರ್ 3 ವಿಕೆಟ್ ಕಬಳಿಸಿ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಇದು ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದೆ. ಅರ್ಜುನ್ ತೆಂಡೂಲ್ಕರ್ 2025-26 ರ ರಣಜಿ ಟ್ರೋಫಿಯಲ್ಲಿ ಗೋವಾ ಪರ ಆಡುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಅವರ ಬೌಲಿಂಗ್ ಪ್ರದರ್ಶನ ಚೆನ್ನಾಗಿರಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ಲಯ ಕಂಡುಕೊಂಡ ಅರ್ಜುನ್ ಒಂದೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅಕ್ಟೋಬರ್ 25 ರಿಂದ ಗೋವಾ ಮತ್ತು ಕರ್ನಾಟಕ ನಡುವೆ ರಣಜಿ ಟ್ರೋಫಿ ಪಂದ್ಯ ಆರಂಭವಾಗಿದೆ. ಗೋವಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಕರ್ನಾಟಕದ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಅರ್ಜುನ್ ತೆಂಡೂಲ್ಕರ್ ಉತ್ತಮ ಆರಂಭ ಒದಗಿಸಿಕೊಟ್ಟರು. 13 ನೇ ಓವರ್‌ನಲ್ಲಿ ಆರಂಭಿಕ ನಿಕ್ಕಿನ್ ಜೋಸ್ ಅವರನ್ನು ಔಟ್ ಮಾಡಿದರು. ನಂತರ, ತಮ್ಮ ಮುಂದಿನ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೃಷ್ಣ ಶ್ರೀಜಿತ್ ಅವರನ್ನು ಔಟ್ ಮಾಡಿದರು. ಅಲ್ಲಿಗೆ ನಿಲ್ಲದ ಅರ್ಜುನ್ ತೆಂಡೂಲ್ಕರ್, ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಅವರನ್ನು ಔಟ್ ಮಾಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು 29 ಓವರ್‌ಗಳನ್ನು ಬೌಲ್ ಮಾಡಿ 100 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಈ ಇನ್ನಿಂಗ್ಸ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆದರು.
ರಣಜಿ ಪಂದ್ಯ ಅರ್ಜುನ್ ತೆಂಡೂಲ್ಕರ್‌ಗೆ ಮಹತ್ವದ್ದಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಗೆ ಅವಕಾಶ ಸಿಗಲಿದೆಯಾ ಎಂಬ ನಿರೀಕ್ಷೆಯಲ್ಲಿದ್ದಾರೆ ಮರಿ ತೆಂಡೂಲ್ಕರ್.

ನೋಡಿರಿ

