ಸಚಿನ್ ಪುತ್ರನ ಮದುವೆ ಇನ್ನಿಂಗ್ಸ್.. – ಅರ್ಜುನ್‌ಗಿಂತ ಸಾನಿಯಾ ದೊಡ್ಡವರು!
ಅಕ್ಕನಿಗಿಂತ ಮೊದ್ಲು ತಮ್ಮನ ಮದ್ವೆ ಯಾಕೆ?

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಲ್ಯದ ಗೆಳತಿ ಜೊತೆ ಏಳು ಹೆಜ್ಜೆ ಇಡಲು ಅರ್ಜುನ್ ರೆಡಿ ಆಗಿದ್ದಾರೆ. ಈಗಾಗಲೇ ಮದುವೆಯ ಶಾಸ್ತ್ರಗಳು ಶುರುವಾಗಿದೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ಗೆ ನಟಿ ಗುಡ್‌ಬೈ! – ನೀಲು ಪಾತ್ರಕ್ಕೆ ಹೊಸ ನಟಿ ಎಂಟ್ರಿ!
ಕ್ರಿಕೆಟ್ ದೇವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಬ್ಯಾಚುಲರ್ ಲೈಫ್ ಗೆ ಗುಡ್‌ಬೈ ಹೇಳಲು ರೆಡಿಯಾಗಿದ್ದಾರೆ. ಬಾಲ್ಯದ ಗೆಳತಿಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸದ್ದಿಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮಾರ್ಚ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಗೆ ಕೌಂಟ್‌ಡೌನ್ ಶುರುವಾಗ್ತಿದ್ದಂತೆ ಫ್ಯಾನ್ಸ್ ಕ್ರಿಕೆಟ್ ದೇವರ ಸೊಸೆ ಹಿನ್ನೆಲೆ ಏನು ಅಂತ ಸರ್ಚ್ ಮಾಡ್ತಿದ್ದಾರೆ.
ಅಂದ್ಹಾಗೆ, ಸಾನಿಯಾ ಚಂದೋಕ್ ಹಾಗೂ ಅರ್ಜುನ್ ತೆಂಡೂಲ್ಕರ್ ಬಾಲ್ಯದ ಸ್ನೇಹಿತರು. ಅರ್ಜುನ್‌ಗಿಂತ ಸಾನಿಯಾ ಒಂದು ವರ್ಷ ದೊಡ್ಡವರು. ಹಲವು ವರ್ಷಗಳಿಂದ ಇವರಿಬ್ಬರು ಸ್ನೇಹಿತರಾಗಿದ್ರು. ದಿನಕಳೆದಂತೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ. ಅರ್ಜುನ್ ಸಾನಿಯಾ ಪ್ರೀತಿಗೆ ಎರಡೂ ಕುಟುಂಬದಿಂದ ಗ್ರೀನ್ ಸಿಗ್ನಲ್ ಸಿಗ್ತಿದ್ದಂತೆ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ರು. ಕಳೆದ ಆಗಸ್ಟ್‌ನಲ್ಲಿ ಮುಂಬೈನಲ್ಲಿ ಸಾನಿಯಾ ಹಾಗೂ ಅರ್ಜುನ್ ರಿಂಗ್ ಬದಲಾಯಿಸಿಕೊಂಡಿದ್ರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇನ್ನು ಸಾನಿಯಾ ಚಂದೋಕ್ ಹಿನ್ನೆಲೆ ಏನು ಅಂತ ನೋಡೋದಾದ್ರೆ, ಸಾನಿಯಾ ಖ್ಯಾತ ಬ್ಯುಸಿನಸ್ಮನ್ ರವಿ ಘಾಯ್ ಅವರ ಮೊಮ್ಮಗಳು. ರವಿ ಘಾಯ್ ಅವರ ಗ್ರಾವಿಸ್ ಗ್ರೂಪ್ hospitality ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಈ ಕಂಪನಿಯ ಕಳೆದೊಂದು ವರ್ಷದ ರೆವಿನ್ಯೂನೇ ಬರೋಬ್ಬರಿ 624 ಕೋಟಿ ಎಂದು ವರದಿಯಾಗಿದೆ. ಹೋಟೆಲ್, ಐಸ್ಕ್ರೀಮ್ ಸೇರಿದಂತೆ ಹಲವು ಉದ್ದಿಮೆಗಳಲ್ಲಿ ಸಾನಿಯಾ ಕುಟುಂಬದವರು ಹೂಡಿಕೆ ಮಾಡಿದ್ದಾರೆ. ಇನ್ನು ಸಾನಿಯಾ ಚಂದೋಕ್ ಕೂಡ ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮುಂಬೈನಲ್ಲಿ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ನಡೆಸ್ತಿದ್ದು, ಇದಕ್ಕೆ ಸಾನಿಯಾನೇ ಡೈರೆಕ್ಟರ್ ಆಗಿದ್ದಾರೆ.
ಇನ್ನು ಅರ್ಜುನ್ ತೆಂಡೂಲ್ಕರ್ ಅಕ್ಕ ಸಾರಾ ತೆಂಡೂಲ್ಕರ್‌ಗಿಂತ ಚಿಕ್ಕವರು. ಅಕ್ಕನ ಮದುವೆ ಮೊದಲು ಮಾಡೋದು ಬಿಟ್ಟು ತಮ್ಮನ ಮದುವೆ ಮೊದಲು ಮಾಡ್ತಿರೋದು ಯಾಕೆ ಎಂಬ ಪ್ರಶ್ನೆ ಅನೇಕರನ್ನ ಕಾಡ್ತಿದೆ. ಈಗಾಗ್ಲೇ ಸಾರಾ ಹೆಸರು ಶುಭ್ಮನ್ ಗಿಲ್, ಸಿದ್ಧಾರ್ಥ್ ಚತುರ್ವೇದಿ ಸೇರಿದಂತೆ ಹಲವರ ಜೊತೆಗೆ ತಳುಕುಹಾಕಿಕೊಳ್ತಿದೆ. ಹೀಗಿದ್ರೂ ಸಾರಾಗೂ ಮುನ್ನ ಅರ್ಜುನ್ ವಿವಾಹ ಮಾಡಲು ಸಚಿನ್ ಮುಂದಾಗಿದ್ದಾರೆ. ಇದಕ್ಕೂ ಕಾರಣವಿದೆ. ಸಾರಾ ತೆಂಡುಲ್ಕರ್ಗೆ ಇಷ್ಟು ಬೇಗ ಮದುವೆಯಾಗಲು ಇಷ್ಟವಿಲ್ಲವಂತೆ. ಸಚಿನ್ ತೆಂಡುಲ್ಕರ್ ಫೌಂಡೇಶನ್ನ ಡೈರೆಕ್ಟರ್ ಆಗಿರೋ ಸಾರಾಗೆ ಸಾಮಾಜಿಕ ಕೆಲಸ ಮಾಡಬೇಕು ಅನ್ನೋ ಕಾಳಜಿಯನ್ನೂ ಹೊಂದಿದ್ದಾರೆ. ಆಸ್ಟ್ರೇಲಿಯನ್ ಟೂರಿಸಮ್ನ ಅಂಬಾಸಿಡರ್ ಆಗಿ ಕೂಡ ಸಾರಾ ಆಯ್ಕೆಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರೆಯಬೇಕು ಅನ್ನೋದು ಸಾರಾ ಆಸೆಯಂತೆ. ಹೀಗಾಗಿ ಇಷ್ಟು ಬೇಗ ಮದುವೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ ಸಾರಾ. ಹೀಗಾಗಿ ಅರ್ಜುನ್ ಅಕ್ಕನಿಗಿಂತ ಮುನ್ನವೇ ಮದುವೆಯಾಗುತ್ತಿದ್ದಾರೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಅರ್ಜುನ್ ಹಾಗೂ ಸಾನಿಯಾ ಜೀವನ ಪರ್ಯಂತ ಖುಷಿ ಖುಷಿಯಾಗಿ ಬಾಳಲಿ ಅನ್ನೋದೇ ಫ್ಯಾನ್ಸ್ ಆಶಯ.

ನೋಡಿರಿ

