LSGಗೆ ಅರ್ಜುನ್ ತೆಂಡೂಲ್ಕರ್? – ಮುಂಬೈನಲ್ಲಿ ಚಾನ್ಸ್ ಸಿಗದೆ ಸಿಟ್ಟಿಗೆದ್ರಾ?
ಕ್ರಿಕೆಟ್ ದೇವರ ಪುತ್ರ ಎಡವಿದ್ದೆಲ್ಲಿ?

LSGಗೆ ಅರ್ಜುನ್ ತೆಂಡೂಲ್ಕರ್? – ಮುಂಬೈನಲ್ಲಿ ಚಾನ್ಸ್ ಸಿಗದೆ ಸಿಟ್ಟಿಗೆದ್ರಾ?ಕ್ರಿಕೆಟ್ ದೇವರ ಪುತ್ರ ಎಡವಿದ್ದೆಲ್ಲಿ?

ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಲೆಜೆಂಡರಿ ಕ್ರಿಕೆಟರ್. ಜಸ್ಟ್ 16 ವರ್ಷಕ್ಕೆಲ್ಲಾ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ್ದ ಸಚಿನ್ 25 ವರ್ಷಕ್ಕೆಲ್ಲಾ ಕ್ರಿಕೆಟ್ ಜಗತ್ತಿನ ಮನೆ ಮಾತಾಗಿದ್ರು. ದಾಖಲೆಗಳ ಸರದಾರನಾಗಿ ಮೆರೆಯೋಕೆ ಶುರು ಮಾಡಿದ್ರು. ಌಂಡ್ ಟೀಂ ಇಂಡಿಯಾದ ಖಾಯಂ ಪ್ಳೇಯರ್ ಆಗಿದ್ರು. ಸಕ್ಸಸ್ ಅನ್ನೋದು ಹೆಜ್ಜೆ ಹೆಜ್ಜೆಗೂ ಸಚಿನ್ ಕೈ ಹಿಡ್ದಿತ್ತು. ಆದ್ರೆ ಅದೇ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಇಂದಿಗೂ ಕೂಡ ಕ್ರಿಕೆಟ್​ನಲ್ಲಿ ಸರ್ವೈವ್ ಆಗೋಕೆ ಹೆಣಗಾಡ್ತಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಳೋಕೆ ಆಗ್ತಿಲ್ಲ. ಐಪಿಎಲ್​ನಲ್ಲಂತೂ ಮುಂಬೈ ತಂಡದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ ಆಟಗಾರ. ಆದ್ರೀಗ ಅದೇ ಅರ್ಜುನ್ ದಿಟ್ಟ ಹೆಜ್ಜೆ ಇಟ್ಟಂತಿದೆ.

ಇದನ್ನೂ ಓದಿ : ರವೀಂದ್ರ ಜಡೇಜಾ ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ – ಜಡ್ಡು ಷರತ್ತಿಗೆ ಒಪ್ಪಿದ RR

ಲಕ್ನೋ ತಂಡ ಸೇರ್ತಾರಾ ಅರ್ಜುನ್ ತೆಂಡೂಲ್ಕರ್?

2026ರ ಐಪಿಎಲ್​ಗೆ ಸಾಕಷ್ಟು ಫ್ರಾಂಚೈಸಿಗಳ ನಡುವೆ ಒಳಗೊಳಗೆ ಟ್ರೇಡ್ ಡೀಲ್​ಗಳು ನಡೀತಿವೆ. ಅದ್ರಲ್ಲೂ ಮುಂಬೈ ಮತ್ತು ಲಕ್ನೋ ನಡುವೆಯೇ ನಡೆಯುತ್ತಿರೋ ಸುದ್ದಿ ಇದೆ. ಆ ಪ್ರಕಾರ ಭಾರತದ ಅನುಭವಿ ವೇಗಿ ಶಾರ್ದೂಲ್ ಠಾಕೂರ್ ಅವರನ್ನು ಲಕ್ನೋ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಟ್ರೇಡ್ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ. ಹಾಗೇ ಮುಂಬೈನ ಯುವ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರನ್ನು ಲಕ್ನೋ ತಂಡಕ್ಕೆ ಟ್ರೇಡ್ ಮಾಡಬಹುದು ಅನ್ನೋ ಟಾಕ್ ನಡೀತಿದೆ. ಟ್ರೇಡ್ ವಿಂಡೋ ಮೂಲಕ ಆಟಗಾರನನ್ನು ಅಷ್ಟೇ ಮೊತ್ತಕ್ಕೆ ಖರೀದಿ ಮಾಡೋ ಸಾಧ್ಯತೆ ಇದೆ. ಅಂದರೆ ಮುಂಬೈ ಇಂಡಿಯನ್ಸ್ ಅರ್ಜುನ್ ಅವ್ರಿಗೆ 30 ಲಕ್ಷ ನಿಡ್ತಿದೆ.  ಇತ್ತ ಲಕ್ನೋ ಸೂಪರ್ ಜೈಂಟ್ಸ್ ಶಾರ್ದೂಲ್ ಠಾಕೂರ್ ಅವರನ್ನು ಮೊಹ್ಸಿನ್ ಖಾನ್ ಬದಲಿಗೆ 2 ಕೋಟಿಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡಿತ್ತು. ಆದ್ದರಿಂದ, ಎರಡೂ ತಂಡಗಳು ಅಷ್ಟೇ ಹಣವನ್ನು ನೀಡಿ ಈ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಚಾನ್ಸ್ ಸಿಗದೆ ಮುಂಬೈ ಬಿಡ್ತಿದ್ದಾರಾ ಅರ್ಜುನ್?

ಕಳೆದ ಕೆಲ ಆವೃತ್ತಿಗಳಿಂದ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡದ ಭಾಗವಾಗಿದ್ದಾರೆ. ಆದ್ರೆ ಕಳೆದ ಸೀಸನ್​ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಅದಕ್ಕೂ ಮೊದಲು, ಅವರು 2023 ರಲ್ಲಿ ಪಾದಾರ್ಪಣೆ ಮಾಡಿ ನಾಲ್ಕು ಪಂದ್ಯಗಳನ್ನು ಆಡಿದ್ದರು. 2024 ರಲ್ಲಿ, ಅವರಿಗೆ ಕೇವಲ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿತು. ಇಲ್ಲಿಯವರೆಗೆ ಅವರು ಐಪಿಎಲ್‌ನಲ್ಲಿ ಐದು ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಬ್ಯಾಟ್ಸ್‌ಮನ್ ಆಗಿ 13 ರನ್‌ ಬಾರಿಸಿದ್ದಾರೆ. ಹೀಗಾಗಿ ಮುಂಬೈ ತಂಡ ಬಿಡೋಕೆ ನಿರ್ಧಾರ ಮಾಡಿದ್ದಾರೆ. ಬಹುಶಃ ಅರ್ಜುನ್ ಲಕ್ನೋ ತಂಡಕ್ಕೆ ಹೋದರೆ ಅಲ್ಲಾದ್ರೂ ಹೆಚ್ಚಿನ ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಕೊಂಡು ಹುಟ್ಟಿದ ಹುಡುಗ. ಅರ್ಜುನ್ ದೊಡ್ಡ ಕ್ರಿಕೆಟರ್ ಆಗ್ಬೇಕು ಅನ್ನೋದು ಸಚಿನ್ ಮಹದಾಸೆ ಆಗಿತ್ತು. ಹೀಗಾಗಿ ಅವನ ಬೆನ್ನಿಗೆ ನಿಂತಿದ್ರು. ಕ್ರಿಕೆಟ್​ ಕಡೆಯೇ ಫೋಕಸ್ ಮಾಡುವಂತೆ ಮಾಡಿದ್ರು. ಎಷ್ಟೋ ಪಂದ್ಯಗಳಲ್ಲಿ, ಟೂರ್ನಿಗಳಲ್ಲಿ ಸಚಿನ್ ಪುತ್ರ ಅನ್ನೋ ಕಾರಣಕ್ಕಾಗಿಯೇ ಅವಕಾಶಗಳು ಸಿಕ್ಕಿದ್ದೂ ಇದೆ. ಆದ್ರೆ ಅರ್ಜುನ್ ಕಡೆಯಿಂದ ಮಾತ್ರ ಆ ಮಟ್ಟಿಗಿನ ಪ್ರದರ್ಶನ ಬಂದಿಲ್ಲ. ಯಾಕಂದ್ರೆ ಅರ್ಜುನ್ ಸಾಮಾನ್ಯ ಗ್ರೌಂಡ್​ಗಳಲ್ಲಿ ಆಡ್ಲೇ ಇಲ್ಲ. ಕ್ರಿಕೆಟ್ ಬಗ್ಗೆ ಆ ಮಟ್ಟಿಗಿನ ಹಸಿವೂ ಆತನಲ್ಲಿ ಕಂಡಿಲ್ಲ. ಅಪ್ಪನ ಹಾದಿಯಲ್ಲಿ ಸಾಗ್ಬೇಕು ಅನ್ನೋ ದೃಷ್ಟಿಯಿಂದ ಒಂಥರಾ ಪ್ಯಾಷನ್ ಆಗಿ ಕ್ರಿಕೆಟ್ ಆಡ್ತಿದ್ದಾರೆ ಅನ್ಸುತ್ತೆ. ಅಟ್​ಲೀಸ್ಟ್ ಮುಂಬೈ ಬಿಟ್ಟು ಬೇರೆ ತಂಡಗಳ ಪರನಾದ್ರೂ ಆಡಿ ಸೈ ಎನಿಸಿಕೊಳ್ಬೇಕು. ಅದ್ರ ಜೊತೆಗೆ ಐಪಿಎಲ್​ನಲ್ಲಿ ಚಾನ್ಸ್​ಗಳೂ ಸಿಗಲಿಲ್ಲ. ಇನ್ನು ಪರ್ಸನಲ್ ಲೈಫ್ ಬಗ್ಗೆ ನೋಡೋದಾದ್ರೆ ಎಂಗೇಜ್​ಮೆಂಟ್ ಕೂಡ ಮಾಡ್ಕೊಂಡಿದ್ದಾರೆ. ಌಂಡ್ ನೆಕ್ಸ್​ಟ್ ಇಯರ್ ಮದುವೆ ಕೂಡ ಇದೆ. ಅಕ್ಕನಿಗಿಂತ ಮೊದಲೇ ದಾಂಪತ್ಯಕ್ಕೆ ಕಾಲಿಡ್ತಿದ್ದಾರೆ. ಲೈಫಲ್ಲಿ ಏನೇ ಅಚೀವ್​ಮೆಂಟ್ ಮಾಡ್ಬೇಕು ಅಂದ್ರೂ ಎರಡು ರೀತಿಯ ಚಾನ್ಸ್ ಸಿಗುತ್ತೆ. ನಂಬರ್ 1 ನಾವು ಆಯ್ಕೆ ಮಾಡಿಕೊಂಡ ದಾರಿಯಲ್ಲಿ ನಾವೇ ಸಾಧಿಸಿ ಸಕ್ಸಸ್ ಆಗೋದು. ಌಂಡ್ ಸೆಕೆಂಡ್ ಒನ್ ಫ್ಯಾಮಿಲಿ ಬ್ಯಾಕ್​ಗ್ರೌಂಡ್ ಮೂಲಕ ಸಕ್ಸೀಡ್ ಆಗೋದು. ಸದ್ಯಕ್ಕೆ ಅರ್ಜುನ್​ಗೆ ಸೆಕೆಂಡ್ ಆಪ್ಶನ್ ಸಿಕ್ಕಿದೆ. ಆದ್ರೆ ಅಪ್ಪನ ಹೆಸರು ಮಗನ ಪರ್ಫಾಮೆನ್ಸ್​ನಲ್ಲಿ ಕಾಣ್ತಿಲ್ಲ ಅನ್ನೋದೇ ಸತ್ಯ.

Shantha Kumari