ಮದುವೆಯಾದ ಅರ್ಜುನ್ ಲಕ್ ಚೇಂಜ್! 6 ತಿಂಗಳಲ್ಲೇ ಆಗ್ತಾರಾ ನಂ.1 ಬ್ಯಾಟರ್?
ಮರಿ ತೆಂಡೂಲ್ಕರ್‌ಗೆ ಬಿಗ್ ಚಾಲೆಂಜ್!

ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಲೆಜೆಂಡರಿ ಕ್ರಿಕೆಟರ್. ಜಸ್ಟ್ 16 ವರ್ಷಕ್ಕೆಲ್ಲಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು, 25 ವರ್ಷಕ್ಕೆಲ್ಲಾ ಕ್ರಿಕೆಟ್ ಜಗತ್ತನ್ನ ಆಳಿದ್ರು. ದಾಖಲೆಗಳ ಸರದಾರನಾಗಿ ಕ್ರಿಕೆಟ್‌ನಲ್ಲಿ ಬಾಸ್ ಆಗಿ ಮೆರೆಯೋಕೆ ಶುರು ಮಾಡಿದ್ರು. ಸಕ್ಸಸ್ ಅನ್ನೋದು ಹೆಜ್ಜೆ ಹೆಜ್ಜೆಗೂ ಸಚಿನ್ ಕೈ ಹಿಡ್ದಿತ್ತು. ಆದ್ರೆ ಅದೇ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಇಂದಿಗೂ ಕೂಡ ಕ್ರಿಕೆಟ್‌ನಲ್ಲಿ ಸರ್ವೈವ್ ಆಗೋಕೆ ಹೆಣಗಾಡ್ತಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲೂ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಳೋಕೆ ಆಗ್ತಿಲ್ಲ. ಐಪಿಎಲ್ನಲ್ಲಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ ಆಟಗಾರ. ಆದ್ರೀಗ ಅರ್ಜುನ್ ಮದುವೆ ಆಗಿದ್ದು, ಲಕ್ ಬದಲಾಗುತ್ತಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.. ಈ ಪ್ರಶ್ನೆ ಹುಟ್ಟುವುದ್ದಕ್ಕೆ ಕಾರಣವಾಗಿದ್ದು ಅಶ್ವಿನ್ ಮೇಲೆ ಯೋಗರಾಜ್ ಸಿಂಗ್ ಹಾಕಿರೋ ಚಾಲೆಂಜ್‌ನಿಂದ.
ಅರ್ಜುನ್ ತೆಂಡೂಲ್ಕರ್ ಅಂದಾಗ ಫಟ್ ಅಂತ ನನೆಪಿಗೆ ಬರವುದು ಸಚಿನ್ ತೆಂಡೂಲ್ಕರ್ ಮಗ ಅಂತ. ಆದ್ರೆ ಅರ್ಜುನ್ ಸಾಧನೆ ನೋಡಿ ಅವರನ್ನ ಯಾರೂ ಕೂಡ ಗುರುತಿಸುತ್ತಿಲ್ಲ. ತನ್ನದೇ ಆದ ಒಂದು ಐಡೆಂಟಿಟಿಗಾಗಿ ಅರ್ಜುನ್ ಸ್ಟ್ರಗಲ್ ಪಡ್ತಾನೇ ಇದ್ದಾರೆ. ಆದ್ರೆ ಅದು ಅರ್ಜುನ್ ಕೈ ಹಿಡಿತಿಲ್ಲ.. ಅರ್ಜುನ್ಗಿಂತ ಚಿಕ್ಕವ್ರು ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿದ್ದರೇ, ಅರ್ಜುನ್ ಟೀಂ ಇಂಡಿಯಾಗೆ ಕಾಲಿಡೋಕೂ ಆಗಿಲ್ಲ. ಟೀಂ ಇಂಡಿಯಾಗೆ ಕಾಲಿಡುವುದು ಬಿಡಿ, ಐಪಿಎಲ್ನಲ್ಲೇ ತಾನು ಅನ್ನೋದ್ದನ್ನ ಅರ್ಜುನ್‌ಗೆ ಪ್ರೂವ್ ಮಾಡೋಕೆ ಆಗ್ತಿಲ್ಲ. ಈ ಸಲದ ಐಪಿಎಲ್ ಅರ್ಜುನ್‌ಗೆ ಅದೃಷ್ಟ ತರುವ ಐಪಿಎಲ್ ಆಗಬಹುದು ಅನ್ನೋಲಾಗ್ತಿದೆ. ಅಷ್ಟೇ ಅಲ್ಲ ಇಬ್ಬರು ಸ್ಟಾರ್ ಕ್ರಿಕೆಟರ್ ಕಾಳಗಕ್ಕೆ ಸಾಕ್ಷಿಯಾಗಲಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಇವರಿಗೆ ಕ್ರಿಕೆಟ್ ಜೀವನ ಯಾಕೋ ಕೈ ಹಿಡಿತಿಲ್ಲ. ಆದ್ರೆ ಮದುವೆ ಆದ ಮೇಲೆ ಅದರಲ್ಲೂ ಐಪಿಎಲ್ ವೇಳೆಯಲ್ಲಿ ಅರ್ಜುನ್ ಹೆಸರು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಅರ್ಜುನ್ ತೆಂಡೂಲ್ಕರ್‌ಗಾಗಿ ಗಡ್ಡ ಬೊಳಿಸುವಷ್ಟರ ಮಟ್ಟಿಗೆ. 6 ತಿಂಗಳಲ್ಲಿ ಅರ್ಜುನ್ ಕ್ರಿಕೆಟ್ ಬದುಕಿಗೆ ದೊಡ್ಡ ತಿರುವು ಸಿಗುತ್ತೆ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಪಘಾತ! – ತಿರುಪತಿಗೆ ಹೊರಟಿದ್ದ ಒಂದೇ ಕುಟುಂಬದ ಮೂವರು ದುರಂತ ಅಂತ್ಯ!
ಅಂದಗಾಗೇ ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರ ಅರ್ಜುನ್ ತೆಂಡೂಲ್ಕರ್‌ಗೆ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಚಾನ್ಸ್ ಸಿಗಲ್ಲ ಅಂತ ಆರ್. ಅಶ್ವಿನ್ ಹೇಳಿದ್ರು.. ಅರ್ಜುನ್ ತೆಂಡೂಲ್ಕರ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತೆ ಅಂತ ನನಗನಿಸಲ್ಲ. ಆ ಯೋಚನೆಯೇ ಬೇಡ. ಮೊಹಮ್ಮದ್ ಶಮಿ, ಮಯಾಂಕ್ ಯಾದವ್, ಅವೇಶ್ ಖಾನ್ ಅವರಂತಹ ಘಟಾನುಘಟಿ ವೇಗದ ಬೌಲರ್‌ಗಳಿರುವಾಗ ಅರ್ಜುನ್‌ಗೆ ತಂಡದಲ್ಲಿ ಜಾಗ ಸಿಗೋದು ಕಷ್ಟ ಎಂದು ಅಶ್ವಿನ್ ಹೇಳಿದ್ದರು. ಈ ಹೇಳಿಕೆಯೇ ದೊಡ್ಡ ಬಿರುಗಾಳಿಯನ್ನ ಎಬ್ಬಿಸಿದೆ.
ಆದರೆ, ಈ ಮಾತು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆಯೂ ಆಗಿರುವ ಯೋಗರಾಜ್ ಸಿಂಗ್‌ರನ್ನ ಕೆರಳಿಸಿದೆ. ಅಶ್ವಿನ್ ಯಾರೇ ಆಗಿರಲಿ, ಅವರು ಹೇಳಿದ್ದು ಶುದ್ಧ ಅಸಂಬದ್ಧ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಕನಿಷ್ಠ ಮರ್ಯಾದೆ ಇರಬೇಕು. ಟಿವಿಯಲ್ಲಿ ಕೂತುಕೊಂಡು ಅವನಿಂದ ಅದು ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ ಅಂತ ಹೇಳೋಕೆ ನೀನ್ಯಾರು? ಅವನು ಸಚಿನ್ ತೆಂಡೂಲ್ಕರ್ ಮಗ ಅನ್ನೋದು ಬೇರೆ ವಿಷಯ. ಅವನು ಬರೀ ಬೌಲರ್ ಅಲ್ಲ, ಅವನ ಬ್ಯಾಟಿಂಗ್ ಸಾಮರ್ಥ್ಯವನ್ನು ಅಶ್ವಿನ್ ಇನ್ನೂ ನೋಡಿಲ್ಲ” ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಯೋಗರಾಜ್ ಸಿಂಗ್ ಇಷ್ಟಕ್ಕೇ ನಿಲ್ಲಲಿಲ್ಲ. ಅಶ್ವಿನ್‌ಗೆ ಒಂದು ನೇರಾ ಸವಾಲು ಹಾಕಿದ್ದಾರೆ. ತಮ್ಮ ಗಡ್ಡವನ್ನ ಪಣಕ್ಕಿಟ್ಟಿದ್ದಾರೆ. ಆರು ತಿಂಗಳೊಳಗೆ ಅರ್ಜುನ್ ತಂಡೂಲ್ಕರ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗದಿದ್ದರೆ, ನಾನು ನನ್ನ ಗಡ್ಡವನ್ನು ಬೋಳಿಸಿ ಎಸೆಯುತ್ತೇನೆ ಎಂದು ಹೇಳಿದ್ದಾರೆ. ಅರ್ಜುನ್‌ರನ್ನು ಒಬ್ಬ ಸ್ಪೆಷಲಿಸ್ಟ್ ಬ್ಯಾಟರ್ ಮಾಡುವುದಾಗಿ ಯೋಗರಾಜ್ ಸಿಂಗ್ ಘೋಷಿಸಿದ್ದಾರೆ. ಅರ್ಜುನ್‌ಗೆ ಐಪಿಎಲ್‌ನಲ್ಲಿ ಚಾನ್ಸ್ ಸಿಕ್ಕಿ, ಆಗ ಒಳ್ಳೆಯ ಪ್ರದರ್ಶನವನ್ನ ತೋರಿಸಿದ್ರೆ, ಮುಂದೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿದ್ರೂ ಸಿಗಬಹುದು.

ನೋಡಿರಿ

