ಸಿಕ್ಸ್‌ಪ್ಯಾಕ್ ಲುಕ್‌ನಲ್ಲಿ ಅರ್ಜುನ್ ತೆಂಡೂಲ್ಕರ್ – ಸೋಶಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ತೆಂಡೂಲ್ಕರ್ ಹವಾ

ಸಿಕ್ಸ್‌ಪ್ಯಾಕ್ ಲುಕ್‌ನಲ್ಲಿ ಅರ್ಜುನ್ ತೆಂಡೂಲ್ಕರ್ – ಸೋಶಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ತೆಂಡೂಲ್ಕರ್ ಹವಾ

ಟೀಮ್ ಇಂಡಿಯಾ ಆಟಗಾರರು ಕ್ರಿಕೆಟ್ ಜೊತೆ ಫಿಟ್‌ನೆಸ್ ಕಡೆಗೂ ಜಾಸ್ತಿ ಗಮನ ಕೊಡುತ್ತಾರೆ. ಅದರಲ್ಲೂ ನಾಚಿಕೆ ಸ್ವಭಾವದ ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ. ಐಪಿಎಲ್ ಬಳಿಕ ಕಾಣಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್  ತಮ್ಮ ಸಿಕ್ಸ್‌ಪ್ಯಾಕ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಜೆರ್ಸಿಯಲ್ಲಿ ಯುವ ಪಡೆ ಮಿರಮಿರ ಮಿಂಚಿಂಗ್ – ಟೀಮ್ ಇಂಡಿಯಾ ಕ್ರಿಕೆಟಿಗರಿಂದ ಫೋಟೋಗೆ ಪೋಸ್

ಟೀಮ್ ಇಂಡಿಯಾದ ಆಟಗಾರರನ್ನು ನೋಡಿ ಯುವ ಆಟಗಾರರು ಕೂಡಾ ಫಿಟ್‌ನೆಸ್ ಬಗ್ಗೆ ಜಾಸ್ತಿ ಗಮನ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಿಕ್ಸ್‌ಪ್ಯಾಕ್ ದೇಹದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ತುಂಬಾ ಅಪರೂಪವೆಂಬಂತೆ ಜ್ಯೂನಿಯರ್ ತೆಂಡೂಲ್ಕರ್ ಈಗ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಲೈಕ್ ಮಾಡುತ್ತಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ನಡೆದ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗೋವಾ ಪರ ಆಟವಾಡಿದ್ದ ಅರ್ಜುನ್ ತೆಂಡೂಲ್ಕರ್ 20 ದಿನಗಳ ಶಿಬಿರಕ್ಕೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿದ್ದರು. 130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಎಡಗೈ ವೇಗಿ ಈಗಾಗಲೇ ರಣಜಿಯಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ತಂಡವನ್ನ ಮುನ್ನಡೆಸಲಿದ್ದಾರೆ.

suddiyaana