ಮಲೈಕಾ ಅರೋರಾ ಜೊತೆ ರಿಲೇಷನ್ ಶಿಪ್ – 12 ವರ್ಷ ಅಂತರವಿದ್ದರೂ ಮದುವೆ ಬಗ್ಗೆ ಅರ್ಜುನ್ ಕಪೂರ್ ಪ್ಲ್ಯಾನ್ ಏನು?

ಬಾಲಿವುಡ್ ಜೋಡಿಗಳಾದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಗ್ಗೆ ಆಗಾಗ್ಗೆ ಗಾಸಿಪ್ ಹರಿದಾಡುತ್ತಲೆ ಇದೆ. ವಯಸ್ಸಿನ ಅಂತರವಿದ್ದರೂ ಈ ಜೋಡಿ ಮಾತ್ರ ಯಾರಿಗೂ ಡೋಂಟ್ ಕೇರ್ ಮಾಡದೇ ತಮ್ಮ ಪಾಡಿಗೆ ಲೈಫ್ ಎಂಜಾಯ್ ಮಾಡ್ತಾ ಇದ್ದಾರೆ. ಹಾಗಿದ್ದರೂ ಕೂಡಾ ಈ ಜೋಡಿ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಲೆ ಇದೆ. ಇದೀಗ ಅರ್ಜುನ್ ಕಪೂರ್, ಮಲೈಕಾ ಅರೋರಾ ಜೊತೆಗಿನ ಮದುವೆಯ ಪ್ಲ್ಯಾನ್, ಜನರಿಂದ ಎದುರಾಗುವ ಟ್ರೋಲ್ ಮುಂತಾದ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
ಇದನ್ನೂ ಓದಿ: ‘ಆಕಾಶ ಗಡಿಯ ದಾಟಿ ತಂದಾನು ಬೆಳಕು ಕೋಟಿ’ – ಅಭಿಮಾನಿಗಳ ಮನಗೆದ್ದ ಸಲಾರ್ ಸಾಂಗ್
ನಟ ಅರ್ಜುನ್ ಕಪೂರ್ ಅವರು ಸಿನಿಮಾಗಳ ಕಾರಣದಿಂದ ಸುದ್ದಿ ಆಗಿದ್ದಾರೋ ಇಲ್ಲವೋ.. ಮಲೈಕಾ ಅರೋರಾ ಜೊತೆಗಿನ ರಿಲೇಷನ್ ಶಿಪ್ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಲೇ ಇದ್ದಾರೆ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರ ಇದೆ. ಆದರೆ, ಹೋದಲ್ಲಿ ಬಂದಲ್ಲಿ ಇವರಿಬ್ಬರ ಕೆಮೆಸ್ಟ್ರಿ ಕಂಡವರ ಕಣ್ಣು ಕುಕ್ಕುತ್ತಲೇ ಇದೆ. ಇವರಿಬ್ಬರು ಮದುವೆ ಆಗುತ್ತಾರೋ ಇಲ್ಲವೋ ಎಂಬುದು ಅನೇಕರ ಪ್ರಶ್ನೆ. ಯಾಕೆಂದರೆ, ಒಂದಷ್ಟು ವರ್ಷಗಳಿಂದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಸುತ್ತಾಡುತ್ತಿದ್ದಾರೆಯೇ ಹೊರತು ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಈಗ ಕರಣ್ ಜೋಹರ್ ಅವರು ಆ ವಿಚಾರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಅರ್ಜುನ್ ಕಪೂರ್ ಉತ್ತರ ನೀಡಿದ್ದಾರೆ.
‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಹೊಸ ಎಪಿಸೋಡ್‌ನಲ್ಲಿ ಅರ್ಜುನ್ ಕಪೂರ್ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ಕರಣ್ ಜೋಹರ್ ಅವರು ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ನಮ್ಮ ರಿಲೇಷನ್ ಶಿಪ್ ಆ ಹಂತಕ್ಕೆ ಬಂದಾಗ ನಾವು ಒಟ್ಟಿಗೆ ಆ ಬಗ್ಗೆ ಮಾತನಾಡುತ್ತೇವೆ. ಸದ್ಯಕ್ಕೆ ನಾನು ಖುಷಿಯಾಗಿದ್ದೇನೆ. ಮದುವೆ ಬಗ್ಗೆ ಮಾತನಾಡಲು ನನಗೆ ಈಗ ಇಷ್ಟ ಇಲ್ಲ. ಅದರ ಬಗ್ಗೆ ನಾನೊಬ್ಬನೇ ಮಾತನಾಡುವುದು ನ್ಯಾಯವಲ್ಲ’ ಎಂದು ಅವರು ಹೇಳಿದ್ದಾರೆ. ಮಲೈಕಾ ಅರೋರಾ ಅವರಿಗೆ 50 ವರ್ಷ ವಯಸ್ಸು. ಅರ್ಜುನ್ ಕಪೂರ್ ವಯಸ್ಸು 38 ವರ್ಷ. ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಆಗಾಗ ಟ್ರೋಲ್ ಮಾಡಲಾಗುತ್ತದೆ. ಆ ಬಗ್ಗೆಯೂ ಅರ್ಜುನ್ ಕಪೂರ್ ಮಾತನಾಡಿದ್ದಾರೆ. ಮೊದಲೆಲ್ಲ ಇದರಿಂದ ಕಿರಿಕಿರಿ ಆಗುತ್ತಿತ್ತು. ಟ್ರೋಲ್ಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಆದರೆ ಈಗ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿರುವುದಾಗಿ ಅರ್ಜುನ್ ಕಪೂರ್ ತಿಳಿಸಿದ್ದಾರೆ.
ಮಲೈಕಾ ಅರೋರಾ ಅವರು ಫಿಟ್‌ನೆಸ್‌ಗೆ ಹೆಚ್ಚು ಮಹತ್ವ ನೀಡುತ್ತಾರೆ. 50ನೇ ವಯಸ್ಸಿನಲ್ಲಿ ಕೂಡ ಅವರು ಹದಿಹರೆಯದವರೂ ನಾಚುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.