ಬಾಲಿವುಡ್​ ನಟ ಅರ್ಜುನ್ ಕಪೂರ್‌ರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ

ಬಾಲಿವುಡ್​ ನಟ ಅರ್ಜುನ್ ಕಪೂರ್‌ರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ

ಬಾಲಿವುಡ್ ಸೂಪರ್ ಸ್ಟಾರ್ ಅರ್ಜುನ್ ಕಪೂರ್ ಅವರು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು. ಕಳೆದ ಮೂರು ದಿನಗಳಿಂದ ಕುಕ್ಕೆ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಅವರು ಭಾನುವಾರ ಸರ್ಪ ಸಂಸ್ಕಾರ ಸೇವೆ ಸಲ್ಲಿಸಿದ್ದು, ಸೋಮವಾರ ಆಶ್ಲೇಷ ಬಲಿ ಪೂಜೆಯಲ್ಲಿ ಭಾಗವಹಿಸಿದರು.

ಶನಿವಾರವೇ ಕ್ಷೇತ್ರಕ್ಕೆ ಆಗಮಿಸಿದ್ದ ನಟ ಅರ್ಜುನ್ ಕಪೂರ್, ವೈಯಕ್ತಿಕ ಕಾರಣಗಳು ಹಾಗೂ ಕಂಕಣ ಭಾಗ್ಯಕ್ಕಾಗಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಸೇವೆ ಸಲ್ಲಿಸಿದ್ದಾಗಿ ಮೂಲಗಳು ತಿಳಿಸಿವೆ. ಕ್ಷೇತ್ರಕ್ಕೆ ಅವರ ಆಗಮನವು ಭಕ್ತರು ಹಾಗೂ ಪ್ರವಾಸಿಗರ ಗಮನ ಸೆಳೆಯಿತು.

ಸುಬ್ರಹ್ಮಣ್ಯಕ್ಕೆ ಈಗಾಗಲೇ ಹಲವು ತಾರೆಯರು ಭೇಟಿ ಕೊಟ್ಟು ಗಮನ ಸೆಳೆದಿದ್ದಾರೆ. ಬಾಲಿವುಡ್​ನ ಬಹುಬೇಡಿಕೆ ನಟಿ ಕತ್ರಿನಾ ಕೈಫ್​ ಕಳೆದ ವರ್ಷ ಭೇಟಿ ಕೊಟ್ಟು ಸರ್ಪಸಂಸ್ಕಾರ ಸೇವೆಯಲ್ಲಿ ಭಾಗಿಯಾಗಿದ್ದರು. ಆದಿ ಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಕೆಲ ಪುರೋಹಿತರು ಮತ್ತು ತಮ್ಮ ಜೊತೆಗೆ ಬಂದ ಕೆಲ ನಿಕಟವರ್ತಿಗಳ ಜೊತೆ ಮಾತ್ರ ಕಾಣಿಸಿಕೊಂಡ ಕತ್ರಿನಾ, ಜನರಿಗೆ ಮತ್ತು ಕ್ಯಾಮರಾಗಳ ಕಣ್ಣಿಗೆ ಬೀಳದಂತೆ ಜಾಗೃತೆ ವಹಿಸಿದ್ದರು.

Kishor KV

Leave a Reply

Your email address will not be published. Required fields are marked *