ಪೆನ್‌ ಹಿಡಿದು ಶಾಲೆಗೆ ಬರುವ ಬದಲು ಗನ್‌ ಹಿಡಿದುಕೊಂಡು ಬಂದ ವಿದ್ಯಾರ್ಥಿ! – ಸಣ್ಣ ವಯಸ್ಸಿಗೆ ಇಷ್ಟೊಂದು ದ್ವೇಷನಾ?

ಪೆನ್‌ ಹಿಡಿದು ಶಾಲೆಗೆ ಬರುವ ಬದಲು ಗನ್‌ ಹಿಡಿದುಕೊಂಡು ಬಂದ ವಿದ್ಯಾರ್ಥಿ! – ಸಣ್ಣ ವಯಸ್ಸಿಗೆ ಇಷ್ಟೊಂದು ದ್ವೇಷನಾ?

ಶಾಲೆ ಅಂದಾಗ ವಿದ್ಯಾರ್ಥಿಗಳ ಮಧ್ಯೆ ಜಗಳ ನಡೆಯುವುದು ಕಾಮನ್.‌ ಒಮ್ಮೆ ಜಗಳವಾಡಿ, ಮತ್ತೆ ಒಂದಾಗುತ್ತಾರೆ. ಆದ್ರೆ ಇಲ್ಲೊಂದು ಕಡೆ ಸಿನಿಮೀಯ ರೀತಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಗಳ ನಡೆದಿದ್ದು, ಬಾಲಕನೋರ್ವ ಶಾಲೆಗೆ ಪೆನ್‌ ಹಿಡಿದುಕೊಂಡು ಬರುವ ಬದಲು ಗನ್‌ ಹಿಡಿದುಕೊಂಡು ಬಂದಿದ್ದಾನೆ.

ಅಚ್ಚರಿಯಾದ್ರೂ ಸತ್ಯ. ಈ ಘಟನೆ ರಾಯಚೂರು ನಗರದ ಶ್ರೀಮಲ್ ರಿಖಬ್ ಚಂದ್ ಸುಖಾಣಿ ಪ್ರೌಢ ಶಾಲೆಯಲ್ಲಿ ನಡೆದಿದೆ. 7 ಮತ್ತು 9 ನೇ ತರಗತಿ ವಿದ್ಯಾರ್ಥಿ ನಡುವೆ ಗಲಾಟೆ ನಡೆದಿದೆ. ಇದೀಗ ಬಾಲಿವುಡ್​​ ಅನಿಮಲ್​ ಸಿನಿಮಾದಂತೆ ಶಾಲೆಗೆ ವಿದ್ಯಾರ್ಥಿಯೋರ್ವ ಗನ್​, ಚಾಕು ತೆಗೆದುಕೊಂಡು ಬಂದಿದ್ದಾನೆ. ವಿದ್ಯಾರ್ಥಿಯ ನಡೆ ಕಂಡು ಶಾಲೆಯ ಶಿಕ್ಷಕರು ಬೆಚ್ಚಿಬಿದ್ದಾರೆ. ಇದೀಗ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಹಾವಳಿ – ಅಮೆರಿಕ ಪ್ರತಿ ದಾಳಿಗೆ 3 ಬೋಟ್‌ಗಳು ಮುಳುಗಡೆ, 10 ಬಂಡುಕೋರರು ಸಾವು

7ನೇ ತರಗತಿಯ ವಿದ್ಯಾರ್ಥಿ ಶಾಲೆಗೆ ಗನ್, ಚಾಕು ಹಾಗೂ ಮಾರಾಕಾಸ್ತ್ರಗಳನ್ನು ಹೊತ್ತೊಯ್ದಿದ್ದಾನೆ. ವಿದ್ಯಾರ್ಥಿ ಮಾರಕಾಸ್ತ್ರ ತೆಗೆದುಕೊಂಡು ಬಂದಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಾಯಚೂರು ನಗರದ ವೆಸ್ಟ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಬಾಲಕನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​ ಸಿನಿಮಾದಲ್ಲೂ ವಿದ್ಯಾರ್ಥಿ ತನ್ನ ಅಕ್ಕನನ್ನು ಚುಡಾಯಿಸಿದ್ದಕ್ಕೆ ಶಾಲೆಗೆ ಗನ್​ ತೆಗೆದುಕೊಂಡು ಹೋಗಿದ್ದನು. ಅದರಂತೆಯೇ ಇದೀಗ ರಾಯಚೂರಿನಲ್ಲಿ ಇಂತಹ ದೃಶ್ಯ ಬೆಳಕಿಗೆ ಬಂದಿದೆ. ಸದ್ಯ ಸಿನಿಮಾದಿಂದ ಪ್ರೇರಿಪಿತನಾಗಿ ಶಾಲೆಗೆ ಗನ್​ ತೆಗೆದುಕೊಂಡು ಹೋಗಿದ್ದಾನಾ? ಎಂಬ ಅನುಮಾನ ಊರವರನ್ನು ಕಾಡಿದೆ.

Shwetha M