ಅರ್ಜೆಂಟೀನಾ – ಕ್ರೊವೇಷ್ಯಾ ಸೆಮಿಫೈನಲ್‌ಗೆ ಶುರುವಾಯ್ತು ಕೌಂಟ್ ಡೌನ್

ಅರ್ಜೆಂಟೀನಾ – ಕ್ರೊವೇಷ್ಯಾ ಸೆಮಿಫೈನಲ್‌ಗೆ ಶುರುವಾಯ್ತು ಕೌಂಟ್ ಡೌನ್

ಕತಾರ್  : ಫಿಫಾ ವಿಶ್ವಕಪ್ ಈಗ ಸೆಮಿ ಕದನದ ಹಂತ ತಲುಪಿದೆ. ಡಿಸೆಂಬರ್ 13ರಂದು ತಡರಾತ್ರಿ ದಕ್ಷಿಣ ಅಮೆರಿಕಾದ ಪುಟ್ಪಾಲ್ ದೈತ್ಯ ತಂಡಗಳಲ್ಲಿ ಒಂದಾದ ಅರ್ಜೆಂಟೀನಾ , 2018ರ ರನ್ನರ್ ಅಪ್ ಕ್ರೊವೇಷ್ಯಾ ತಂಡವನ್ನು ಎದುರಿಸಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ. ತಡರಾತ್ರಿ 12.30ಕ್ಕೆ ಹೈವೋಲ್ಟೇಜ್ ಸೆಮೆಫೈನಲ್ ಸೆಣಸಾಟ ನೋಡಲು ಫುಟ್ಬಾಲ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:  ‘ಪ್ರೀತಿಯ ಕ್ರಿಕೆಟ್.. ನನಗೆ ಇನ್ನೊಂದು ಅವಕಾಶ ಕೊಡು’ – ಕರುಣ್ ನಾಯರ್ ಟ್ವೀಟ್ ವೈರಲ್

ಲುಸೈಲ್ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಈ ಹೈವೋಲ್ಟೇಜ್ ಕದನ ನಡೆಯಲಿದೆ. ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಜೊತೆಗೆ 1986ರ ಬಳಿಕ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದಿಲ್ಲ. ಇದೀಗ ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ಪ್ರಶಸ್ತಿ ತಂದುಕೊಡುತ್ತಾರಾ ಅಂತಾ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇಷ್ಟೇ ಅಲ್ಲದೇ, ಈ ಬಾರಿಯ ವಿಶ್ವಕಪ್, ಲಿಯೋನಿಲ್ ಮೆಸ್ಸಿಗೆ ಕೊನೇ ವಿಶ್ವಕಪ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೆಸ್ಸಿ ಪಾಲಿಗಂತೂ ಇದು ಪ್ರತಿಷ್ಠೆಯ ಕದನವಾಗಿದೆ. ನೆದರ್ಲೆಂಡ್ಸ್ ವಿರುದ್ಧ 4-3 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿರುವ ಅರ್ಜೆಂಟೀನಾ ತಂಡ, ತಾನಾಡಿರುವ ಐದು ವಿಶ್ವಕಪ್‌ ಗಳ ಸೆಮಿ ಫೈನಲ್‌ನಲ್ಲಿ ಇದುವರೆಗ ಒಂದೇ ಒಂದು ಸೋಲು ಕಂಡಿಲ್ಲ. ಐದೂ ಬಾರಿ ಕೂಡ ಫೈನಲ್‌ಗೇರುವ ಮೂಲಕ ದಾಖಲೆ ಬರೆದಿದೆ.

ಇತ್ತ ಕ್ವಾರ್ಟರ್ ಫೈನಲ್‌ನಲ್ಲಿ ಪ್ರಬಲ ತಂಡ ಬ್ರೆಜಿಲ್‌ನ್ನ ಸೋಲಿಸಿ ಹುಮ್ಮಸ್ಸಲ್ಲಿರುವ ಕ್ರೊವೇಷ್ಯಾ ಈ ಬಾರಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಅರ್ಜೆಂಟೀನಾಕ್ಕೆ ಮೆಸ್ಸಿ ಇದ್ದಂತೆ, ಕ್ರೊವೇಷ್ಯಾಕ್ಕೆ ಲೂಕಾ ಮೊಡ್ರಿಕ್ ಆಧಾರವಾಗಿದ್ದಾರೆ. ಲೂಕಾ ಮೊಡ್ರಿಕ್ ಹೆಚ್ಚಿನ ಗೋಲು ಗಳಿಸದಿದ್ದರೂ, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ.

suddiyaana