ತುಂಬಾ ಹೊತ್ತು ನಿದ್ರೆ ಮಾಡ್ತೀರಾ? – ಅತಿಯಾಗಿ ನಿದ್ದೆ ಮಾಡಿದ್ರೆ ಈ ಸಮಸ್ಯೆ ಕಾಡುತ್ತೆ!

ತುಂಬಾ ಹೊತ್ತು ನಿದ್ರೆ ಮಾಡ್ತೀರಾ? – ಅತಿಯಾಗಿ ನಿದ್ದೆ ಮಾಡಿದ್ರೆ ಈ ಸಮಸ್ಯೆ ಕಾಡುತ್ತೆ!

ಒಳ್ಳೆ ನಿದ್ರೆ ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ. ಆದ್ರೆ ಕುಂಬಕರ್ಣನ ರೀತಿ ಅತಿಯಾಗಿ ನಿದ್ರೆ ಮಾಡಿದ್ರೆ ಅದರಿಂದ ಕೂಡ ಆರೋಗ್ಯಕ್ಕೆ ತೊಂದರೆ ಆಗುತ್ತಂತೆ. ಹೆಚ್ಚು ನಿದ್ದೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡಬಹುದು ಅನ್ನೊ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಊಟ ಮಾಡುವಾಗ ಗಂಟಲಲ್ಲಿ ಸಿಲುಕಿದ ಅನ್ನದ ಅಗುಳು! – ದುರಂತ ಅಂತ್ಯ ಕಂಡ ಯುವಕ!

ಕಡಿಮೆ ನಿದ್ರೆಯಿಂದ ನಿಮ್ಮ ಆರೋಗ್ಯಕ್ಕೆ ಹೇಗೆ ತೊಂದರೆ‌ಮಾಡುತ್ತೋ , ಹಾಗೆಯೇ ಹೆಚ್ಚು ನಿದ್ರೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ನಿದ್ದೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೇ ಪಾರ್ಶ್ವವಾಯು ಸಮಸ್ಯೆ ಕೂಡ ಕಾಡಬಹುದು.

ಇನ್ನು ಹೆಚ್ಚು ಹೊತ್ತು ನಿದ್ರೆ ಮಾಡುವುದು ಕೆಲವರ ಮೂಡ್ ಮೇಲೆ ಪರಿಣಾಮ ಬೀಳುತ್ತೆ. ಹೆಚ್ಚು ನಿದ್ರೆ ಮಾಡುವುದರಿಂದ ವ್ಯಕ್ತಿಯ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಇದರಿಂದಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ನಿದ್ರೆ ಮತ್ತು ಬೊಜ್ಜು ನಡುವೆ ನೇರ ಸಂಬಂಧವಿದೆ. ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದ್ರೆ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಕಾಯಿಲೆಗಳು ಬಾಧಿಸುತ್ತವೆ. ಆದ್ದರಿಂದ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದ್ರೆ ಇಂದೇ ಆ ಅಭ್ಯಾಸವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ.

Shwetha M