ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಮುಂದಾದ ಅಭಿಮಾನಿಗಳು
ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟನೆ?

ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಮುಂದಾದ ಅಭಿಮಾನಿಗಳುಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟನೆ?

ಕೊಪ್ಪಳ : ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಮಾಜಿ ಸಚಿವ ಶಿವರಾಜ ತಂಗಡಗಿ ಬೆಂಬಲಿಗರು ಸಿದ್ಧತೆ ನಡೆಸುತ್ತಿದ್ದಾರೆ.  ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಮಾತನಾಡಿದ ಮಾಜಿ ಸಚಿವ ಶಿವರಾಜ ತಂಗಡಗಿ ನನ್ನ ಬೆಂಬಲಿಗರು ಮತ್ತು ಸಿದ್ದರಾಮಯ್ಯ ಅವರ ಅಭಿಮಾನಿಗಳು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎಂದಿದ್ದಾರೆ. ಸಿದ್ದು ಬಯೋಪಿಕ್ ಗೆ ಎಲ್ಲಾ ಓಕೆ ಆದರೆ, ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಸಿದ್ದರಾಮಯ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :  ಡಿಸೆಂಬರ್ 11ರಂದು ನೆರವೇರಲಿದೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ? 

ಮಾಜಿ ಸಚಿವ ಶಿವರಾಜ ತಂಗಡಗಿಯವರ ಬೆಂಬಲಿಗರು ಸಿದ್ದು ಬಯೋಪಿಕ್ ಮಾಡಲು ಮುಂದಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯನವರು ಒಪ್ಪಿಗೆ ಕೊಟ್ರೆ ಡಿಸೆಂಬರ್ ತಿಂಗಳಲ್ಲೆ ಸಿದ್ದು ಬಯೋಪಿಕ್ ಗೆ ಚಾಲನೆ ನೀಡುತ್ತೇವೆ. ನನ್ನ ಕನಕಗಿರಿ ಕ್ಷೇತ್ರದಲ್ಲೆ ಚಿತ್ರದ ಮುಹೂರ್ತ ಕಾರ್ಯಕ್ರಮ ಇಟ್ಟುಕೊಳ್ಳುತ್ತೇವೆ ಎಂದು ಶಿವರಾಜ ತಂಗಡಗಿಯವರು ಹೇಳಿದ್ದಾರೆ.  ಸಿದ್ದು ಅಭಿಮಾನಿಗಳು ಚಿತ್ರ ಮಾಡೋಕೆ ಹೊರಟಿದ್ದಾರೆ. ಈಗಾಗಲೇ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ್ದೆವೆ. ಅವರು ಸಮಯ ಕೇಳಿದ್ದಾರೆ. ಒಂದೊಮ್ಮೆ ಒಪ್ಪಿಗೆ ಕೊಟ್ರೆ ಸಿನಿಮಾ ಮಾಡುತ್ತೇವೆ. ಕೇವಲ ಕನ್ನಡ ಭಾಷೆಯಷ್ಟೆ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ ಮಾಡ್ತೀವಿ. ಎಷ್ಟು ಕೋಟಿ ಖರ್ಚಾದ್ರು ಚಿಂತೆಯಿಲ್ಲ. ಅವರ ಜೀವನ ಚರಿತ್ರೆ ಜನರಿಗೆ ತಿಳಿಸೋ ಉದ್ದೇಶ. ಅವರ ಬಾಲ್ಯ ಜೀವನ, ರಾಜಕೀಯ ಜೀವನ, ಸಿಎಂ ಆಗಿ ಮಾಡಿದ ಆಡಳಿತ, ಅವರ ಅನ್ನಭಾಗ್ಯ ಯೋಜನೆ ಮಹತ್ವ ಸೇರಿ ಎಲ್ಲಾ ಮಹತ್ವಕಾಂಕ್ಷಿ ಯೋಜನೆಯ ಬಗ್ಗೆ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತೇವೆ.

ಬಡ ಕುಟುಂಬದಲ್ಲಿ ಹುಟ್ಟಿ, ರಾಜ್ಯದ ಸಿಎಂ ಆದವರು ಸಿದ್ದರಾಮಯ್ಯ. ಅವರ ಜೀವನ ಚರಿತ್ರೆ ಸಿನಿಮಾ ಮಾಡೋದೇ ಹೆಮ್ಮೆಯ ವಿಚಾರ ಅಂತಿದ್ದಾರೆ ಅಭಿಮಾನಿಗಳು.

suddiyaana