ನಿಮ್ಮ ಮಕ್ಕಳನ್ನ ಬೇರೆ ಮಕ್ಕಳಿಗೆ ಹೋಲಿಸುವುದನ್ನು ನಿಲ್ಲಿಸಿ – ಓದು ಓದು ಎಂದು ಮಕ್ಕಳಿಗೆ ಒತ್ತಡ ಹೇರುವುದು ಡೇಂಜರ್
ಚೆನ್ನಾಗಿ ಓದು, ಎಲ್ಲದ್ರಲ್ಲೂ ನೀನೇ ಫಸ್ಟ್ ಬರಬೇಕು ಅಂತಾ ನಿಮ್ಮ ಮಕ್ಕಳನ್ನ ಬೈತೀರಾ..? ಇದು ಎಷ್ಟು ಡೇಂಜರಸ್ ಅನ್ನೋದು ನಿಮಗೆ ಗೊತ್ತಿದ್ಯಾ..? ಮಕ್ಕಳು ಎಷ್ಟೇ ಆಕ್ಟಿವ್ ಆಗಿದ್ರೂ ಪೋಷಕರಿಗೆ ಸಾಕಾಗೋದಿಲ್ಲ. ಬೇರೆ ಮಕ್ಕಳನ್ನ ಕಂಪೇರ್ ಮಾಡಿ ತಮ್ಮ ಮಕ್ಕಳಿಗೆ ಬೈತಾರೆ. ಆದರೆ ಇದು ನಿಜಕ್ಕೂ ತುಂಬಾನೇ ಅಪಾಯಕಾರಿ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ನಿಮ್ಮ ಕನ್ನಡಿ ನಿಮಗೆ ಸುಳ್ಳು ಹೇಳುತ್ತಾ? – ನಿಮ್ಮ ಸೌಂದರ್ಯದ ರಹಸ್ಯ ಗೊತ್ತಿದೆಯೇ?
ತಜ್ಞರ ಪ್ರಕಾರ ಪೋಷಕರ ಈ ವರ್ತನೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅರಿಝೋನಾ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಓದು ಹಾಗೂ ಇತರ ಚಟುವಟಿಕೆಯಲ್ಲಿ ಫಸ್ಟ್ ಬರುವಂತೆ ಒತ್ತಡ ಹೇರೋದ್ರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆಗ ಮಕ್ಕಳು ಖಿನ್ನತೆ, ಆತಂಕ, ಆತ್ಮ ವಿಶ್ವಾಸದ ಕೊರತೆ, ನಡವಳಿಕೆಯ ಸಮಸ್ಯೆ ಜೊತೆಗೆ ಓದಿನ ವಿಚಾರದಲ್ಲಿ ನಿರಾಸಕ್ತಿ ಹೊಂದುತ್ತಾರೆ. ಬೇರೆ ಮಕ್ಕಳಿಗೆ ಹೋಲಿಕೆ ಮಾಡೋದ್ರಿಂದ ಅವ್ರಲ್ಲಿ ಕೀಳರಿಮೆ ಉಂಟಾಗುತ್ತದೆ. ಇದ್ರಿಂದ ಅವರ ಮನೋಸ್ಥೈರ್ಯ ದುರ್ಬಲವಾಗುತ್ತದೆ. ಹೀಗಾಗಿ ಪೋಷಕರು ಫೋಸ್ಟ್ ಮಾಡದೆ ಮಕ್ಕಳ ಜೊತೆ ಟೈಂ ಸ್ಪೆಂಡ್ ಮಾಡುವ ಮೂಲಕ ಅವರ ಕಲಿಕೆಗೆ ಸಹಕರಿಸಬೇಕು.