ಮಧ್ಯರಾತ್ರಿ ಪದೇ ಪದೇ ಬಾಯಾರಿಕೆಯಾಗುತ್ತದೆಯೇ? – ಇದಕ್ಕೆ ಕಾರಣ ಗೊತ್ತಾ?
ಮಲಗುವ ಮುನ್ನ ಸಾಕಷ್ಟು ನೀರು ಕುಡಿದರೂ ಕೂಡ ಹಲವರಿಗೆ ಮಧ್ಯರಾತ್ರಿಯಲ್ಲಿ ಪದೇ ಪದೇ ಬಾಯಾರಿಕೆ ಆಗ್ತಾ ಇರುತ್ತೆ. ಗಂಟಲು ಒಣಗಿದಂತೆ ಆಗುತ್ತೆ. ಎಷ್ಟು ನೀರು ಕುಡಿದ್ರೂ ಸಾಕಾಗಲ್ಲ. ಬಾಯಾರಿಕೆಯಿಂದ ಪದೇ ಪದೆ ಎಚ್ಚರಗೊಂಡ್ರೆ ನಿದ್ರೆಗೆ ಭಂಗವು ಉಂಟಾಗುತ್ತದೆ. ಇದು ಕೆಲವರಿಗೆ ನಿತ್ಯವು ಸಂಭವಿಸುತ್ತದೆ. ಇದರಿಂದ ನಿದ್ರೆಯ ಕೊರತೆ ಉಂಟಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಇದನ್ನೂ ಓದಿ: ದಿನಕ್ಕೆ 10 ಸಾವಿರ ಹೆಜ್ಜೆ ನಡೆಯಲೇಬೇಕಾ? – ವಾಕಿಂಗ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಅನೇಕರು ಎಣ್ಣೆ ಮತ್ತು ಮಸಾಲೆಯುಕ್ತ ಆಹಾರ ಸೇವಿಸಿದ್ರೆ ಒಣ ಗಂಟಲಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ರಾತ್ರಿ ಬಾಯಾರಿಕೆ ಉಂಟಾಗುತ್ತದೆ. ಇನ್ನು ಅನೇಕ ಜನರು ಮಲಗಿರುವಾಗ ತಮ್ಮ ಬಾಯಿಯ ಮೂಲಕವೇ ಉಸಿರಾಡುತ್ತಾರೆ. ಇದರ ಪರಿಣಾಮ ಬಾಯಿ ಸುಲಭವಾಗಿ ಒಣಗುತ್ತದೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಆಗಾಗ ಎಚ್ಚರವಾಗುತ್ತೆ ನೀರು ಕುಡಿಬೇಕು ಅನ್ಸುತ್ತೆ.
ರಾತ್ರಿ ನಿದ್ರೆಯ ಸಮಯದಲ್ಲಿ ಗಂಟಲು ಒಣಗಲು ಒಂದು ಪ್ರಮುಖ ಕಾರಣವೆಂದರೆ ನಿರ್ಜಲೀಕರಣ ಅಥವಾ ಅಜೀರ್ಣ. ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಗಂಟಲು ಒಣಗುತ್ತದೆ. ನಿರ್ಜಲೀಕರಣವು ತೀವ್ರವಾಗಿದ್ದರೆ, ಅದು ಸಾವಿಗೂ ಕಾರಣವಾಗಬಹುದು. ಬಾಯಿ ಒಣಗುವುದನ್ನು ಜೆರೊಸ್ಟೊಮಿಯಾ ಅಂತಾ ಕರೆಯುತ್ತಾರೆ. ಇದರಿಂದ ಬಾಯಿಯಲ್ಲಿ ಜೊಲ್ಲು ಸುರಿಸುವುದು ಕಡಿಮೆಯಾಗುತ್ತದೆ. ಇದು ಸೆಪ್ಸಿಸ್ನಂತಹ ಗಂಭೀರ ಕಾಯಿಲೆಗಳ ಲಕ್ಷಣವಾಗಿದ್ದು, ಇದರಿಂದಾಗಿ ನೀವು ಮಧ್ಯರಾತ್ರಿಯಲ್ಲಿ ಪದೇ ಪದೆ ಬಾಯಾರಿಕೆ ಅಗುತ್ತೆ. ಹೀಗಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.