ನಿಮಗೆ ವಿಪರೀತ ಬಾಯಾರಿಕೆ ಆಗುತ್ತದೆಯಾ?  – ಈ ರೋಗದ ಲಕ್ಷಣವಿರಬಹುದು ಎಚ್ಚರ!

ನಿಮಗೆ ವಿಪರೀತ ಬಾಯಾರಿಕೆ ಆಗುತ್ತದೆಯಾ?  – ಈ ರೋಗದ ಲಕ್ಷಣವಿರಬಹುದು ಎಚ್ಚರ!

ಬಾಯಾರಿಕೆ ಆಗುವುದು ಕಾಮನ್. ನೀರು ಕುಡಿದ ಕೂಡ್ಲೆ ನಿಲ್ಲುತ್ತೆ. ಆದ್ರೆ ಕೆಲವರಿಗೆ ಎಷ್ಟು ನೀರು ಕುಡಿದ್ರೂ ಸಾಕಾಗಲ್ಲ. ಪದೇ ಪದೇ ನೀರು ಕುಡಿಲೇ ಬೇಕು ಅನ್ಸುತ್ತೆ. ನಿಮಗೂ ಹೀಗೆ ಆಗ್ತಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ. ಯಾಕಂದ್ರೆ ಇದು ಪ್ರಿ-ಡಯಾಬಿಟಿಸ್ ಲಕ್ಷಣ  ಆಗಿರಬಹುದು. ಅಂದ್ರೆ  ಮಧುಮೇಹ ಶುರುವಾಗುತ್ತಿರುವ ಲಕ್ಷಣ ಎಂದರ್ಥ.

ಮಧುಮೇಹಕ್ಕೂ ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ, ನಮ್ಮ ದೇಹವು ಹೆಚ್ಚುವರಿ ಸಕ್ಕರೆಯನ್ನು ಮೂತ್ರದ ಮೂಲಕ ಹೊರಹಾಕಲು ಪ್ರಯತ್ನಿಸುತ್ತದೆ. ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ರೋಗಿಯು ನಿರ್ಜಲೀಕರಣವನ್ನು ಅನುಭವಿಸುತ್ತಾನೆ. ಇದರಿಂದ ಆತನಿಗೆ ಬಾಯಾರಿಕೆ ಹೆಚ್ಚಾಗುತ್ತದೆ. ರಕ್ತದಲ್ಲಿ ಹೆಚ್ಚು ನೀರನ್ನು ಉಳಿಸಿಕೊಳ್ಳಲು ದೇಹದ ಪ್ರಯತ್ನದ ಪರಿಣಾಮವಾಗಿ ರೋಗಿಯು ಬಾಯಾರಿಕೆಯನ್ನು ಅನುಭವಿಸುತ್ತಾನೆ. ಹೀಗಾಗಿ, ಅತಿಯಾದ ಬಾಯಾರಿಕೆ ಆಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಪ್ರಿ-ಡಯಾಬಿಟಿಸ್‌ಗೆ ಚಿಕಿತ್ಸೆ ನೀಡದಿದ್ದರೆ, ಅದು ಟೈಪ್ 2 ಮಧುಮೇಹವಾಗಿ ಪರಿವರ್ತನೆ ಆಗಬಹುದು.  ಹೀಗಾಗಿ, ನಿರಂತರವಾಗಿ ಬಾಯಾರಿಕೆ ಹೆಚ್ಚಾಗುತ್ತಿದ್ದರೆ ವೈದ್ಯರ ಬಳಿ ಚೆಕ್ ಮಾಡಿಸಿಕೊಳ್ಳೋದು ಉತ್ತಮ.

ಇದನ್ನೂ ಓದಿ: ನಿಮ್ಮ‌ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ನೋಡಿದ್ರಾ? –  ಕಳ್ಳರಿಗೂ ಬುದ್ದಿ ಕಲಿಸುತ್ತೆ ನಿಮ್ಮ‌ ಮೊಬೈಲ್!

ಇನ್ನು ಯಾವ ಸಮಯದಲ್ಲಿ ನಿಮಗೆ ನಿಮ್ಮ ದೇಹದಲ್ಲಿ ಹೆಚ್ಚು ಆರೋಗ್ಯಕರವಾದ ಕೆಂಪು ರಕ್ತ ಕಣಗಳು ಇರುವುದಿಲ್ಲವೋ, ಅಂತಹ ಸಂದರ್ಭವನ್ನು ‘ ಅನಿಮಿಯಾ ‘ ಎಂದು ಕರೆಯ ಬಹುದು. ಕೆಲವರಿಗೆ ಹುಟ್ಟುತ್ತಲೇ ಅನಿಮಿಯ ಸಮಸ್ಯೆ ಇದ್ದರೆ ಇನ್ನು ಕೆಲವರಿಗೆ ನಂತರದ ದಿನಗಳಲ್ಲಿ ಅವರ ಜೀವನ ಶೈಲಿಗೆ ಮತ್ತು ಆಹಾರ ಪದ್ಧತಿಗೆ ತಕ್ಕಂತೆ ಕೆಂಪು ರಕ್ತ ಕಣಗಳ ಸಂತತಿ ಇರುತ್ತದೆ. ಮಹಿಳೆಯರಿಗೆ ವಿಪರೀತ ರಕ್ತ ಸ್ರಾವದಿಂದ ಅನಿಮಿಯ ಉಂಟಾಗುವ ಸಾಧ್ಯತೆ ಬರಬಹುದು. ಬೇರೆ ಬಗ್ಗೆ ಕಾಯಿಲೆಗಳನ್ನು ಹೊಂದಿದವರಿಗೆ ಅಥವಾ ತಮ್ಮ ಆಹಾರದಲ್ಲಿ ಅಗತ್ಯ ಪ್ರಮಾಣದ ಪೋಷಕಾಂಶಗಳು ಇಲ್ಲದಿದ್ದರೆ ಅಂತಹ ವ್ಯಕ್ತಿಗಳಿಗೆ ಅನಿಮಿಯ ಸಮಸ್ಯೆ ಬರುವುದು ಖಂಡಿತ. ಅನಿಮಿಯ ಹೊಂದಿದ ಆರಂಭಿಕ ದಿನಗಳಲ್ಲಿ ಆರೋಗ್ಯಕ್ಕೆ ಯಾವುದೇ ತೊಂದರೆ ಆಗದಿದ್ದರೂ ನಂತರದ ದಿನಗಳಲ್ಲಿ ಬಾಯಿ ಒಣಗುವುದರ ಜೊತೆಗೆ ಈ ಕೆಳಗಿನ ಕೆಲವೊಂದು ಇನ್ನಿತರ ರೋಗ ಲಕ್ಷಣಗಳು ಕಂಡು ಬರುತ್ತವೆ.

ನಮ್ಮ ದೇಹದಲ್ಲಿ ನೀರಿನ ಅಂಶದ ಕೊರತೆ ಉಂಟಾದ ಸಂದರ್ಭವನ್ನು ನಿರ್ಜಲೀಕರಣ ಎಂದು ಕರೆಯುತ್ತೇವೆ. ನಿರ್ಜಲೀಕರಣ ಎದುರಾದ ಸಂದರ್ಭದಲ್ಲಿ ನಮ್ಮ ದೇಹ ತನ್ನ ಪ್ರತಿ ದಿನದ ಕಾರ್ಯ ಚಟುವಟಿಕೆಗಳನ್ನು ಸರಿಯಾಗಿ ಮಾಡಲು ಸಾಧ್ಯ ಆಗುವುದಿಲ್ಲ. ಯಾವುದೇ ವ್ಯಕ್ತಿಗೆ ನಿರ್ಜಲಿಕರಣ ಇದ್ದಕ್ಕಿದ್ದಂತೆ ಎದುರಾಗುವುದಿಲ್ಲ. ಅದಕ್ಕೆ ಕೆಲವು ಕಾರಣಗಳಿರುತ್ತವೆ. ಅವುಗಳೆಂದರೆ ಅತಿಯಾಗಿ ವ್ಯಾಯಾಮ ಮಾಡುವುದು, ವಿಪರೀತ ವಾಂತಿ, ಭೇದಿ, ಮೈ ಹೆಚ್ಚು ಬೆವರುವುದು ಇತ್ಯಾದಿ. ಒಬ್ಬ ವ್ಯಕ್ತಿಗೆ ದೇಹದಲ್ಲಿ ನಿರ್ಜಲೀಕರಣ ಉಂಟಾದ ಸಮಯದಲ್ಲಿ ಬಾಯಿ ಒಣಗುವುದು ಸಾಮಾನ್ಯ. ಹೀಗಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

Shwetha M