ಚಳಿಗಾಲದಲ್ಲಿ ನೆಲಗಡಲೆ ತಿನ್ನಬಹುದಾ? – ಶೇಂಗಾ ಎಷ್ಟು ತಿಂದ್ರೆ ಒಳ್ಳೆಯದು?

ಬಾದಾಮಿ ಬೀಜಗಳಷ್ಟೇ ಪೋಷಕಾಂಶಗಳನ್ನು ನೆಲಗಡಲೆ ಅಥವಾ ಶೇಂಗಾ ಬೀಜ ಹೊಂದಿದೆ. ಅದಕ್ಕೆ ಶೇಂಗಾವನ್ನು ಬಡವರ ಬಾದಾಮಿ ಅಂತಾರೆ. ನಿಯಮಿತವಾಗಿ ಶೇಂಗಾ ಬೀಜ ತಿನ್ನೋದು ಆರೋಗ್ಯಕ್ಕೆ ಒಳ್ಳೆದಾ? ಕೆಟ್ಟದಾ ಅಂತಾ ಅನೇಕರಿಗೆ ಗೊಂದಲ ಇದೆ. ಈ ಕುರಿತ ಮಾಹಿತಿ ಇಲ್ಲಿದೆ.
ನೆಲಗಡಲೆಯಲ್ಲಿ ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಕೊಬ್ಬಿನ ಅಂಶ, ಪ್ರೋಟೀನ್, ಪೊಟ್ಯಾಶಿಯಮ್, ನಾರಿನಾಂಶ, ವಿಟಮಿನ್ಸ್ ಗಳಾದ ಬಿ1, ಬಿ2, ಹಾಗೂ ಬಿ6, ಕಾರ್ಬೋಹೈಡ್ರೇಟ್ ಹಾಗೂ ಕ್ಯಾಲ್ಸಿಯಂ ಅಂಶಗಳು ಯಥೇಚ್ಛವಾಗಿ ಸಿಗುತ್ತದೆ. ಜೀರ್ಣಕ್ರಿಯೆ ಪ್ರಕ್ರಿಯೆಯು ಚೆನ್ನಾಗಿ ನಡೆಯಬೇಕು ಎಂದರೆ, ನಾವು ಸೇವಿಸುಂತಹ ಆಹಾರದಲ್ಲಿ ನಾರಿನ ಅಂಶ ಹೆಚ್ಚಿರಬೇಕು. ನೆಲಗಡಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಇದೆ . ಹೀಗಾಗಿ ಶೇಂಗಾ ಬೀಜ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು.
ಇದನ್ನೂ ಓದಿ: ನಿಮ್ಗೆ ಯಾವಾಗ್ಲೂ ಖಾರ ತಿನ್ಬೇಕು ಅನ್ಸುತ್ತಾ? – ಖಾರ ತಿನ್ನುವ ಬಯಕೆ ಹುಟ್ಟಲು ಇದೇ ಕಾರಣ!
ಇನ್ನು ಶೇಂಗಾ ಸೇವನೆ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ, ನಮ್ಮನ್ನು ದೂರವಿರಿಸುತ್ತದೆ. ಅಲ್ಲದೆ ನಾರಿ ನಾಂಶ ಹಾಗೂ ಪ್ರೋಟೀನ್ ಗಳು ಇರವುದರಿಂದ ಟೈಪ್-2 ಮಧುಮೇಹಿಗಳಿಗೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ನೆಲಗಡಲೆ ನೆರವಾಗುತ್ತದೆ. ಜೊತೆಗೆ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗುವ ಒಳ್ಳೆಯ ಕೊಬ್ಬಿನಾಂಶಗಳು ಕೂಡ ಶೇಂಗಾ ಬೀಜದಲ್ಲಿದೆ. ನೆಲಗಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಅನ್ನೋದ್ರಲ್ಲಿ ಅನುಮಾನವಿಲ್ಲ.
ನೆಲಗಡಲೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಅತಿಯಾಗಿ ನೆಲಗಡಲೆ ಸೇವನೆ ಮಾಡಬೇಡಿ. ಶೇಂಗಾವನ್ನು ಅತಿಯಾಗಿ ತಿಂದ್ರೆ ಆರೋಗ್ಯ ಕೆಡಬಹದು. ಹೀಗಾಗಿ ನೆಲಗಡಲೆಯನ್ನು ಉಪ್ಪಿನಲ್ಲಿ ಹುರಿದು ತಿನ್ನಿ. ಹೆಚ್ಚು ಸಮಯ ಸಂಸ್ಕರಿಸಿರುವಂತಹ ನೆಲಗಡಲೆಯನ್ನು ಸೇವನೆ ಮಾಡಬೇಡಿ. ಇದು ಅನಾರೋಗ್ಯಕ್ಕೆ ಕಾರಣವಾಗಬಹುದು.