ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಎಡವುತ್ತಿದ್ದಾರಾ?

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಎಡವುತ್ತಿದ್ದಾರಾ?

ಸೌತ್ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ನಿಜಕ್ಕೂ ಟಫ್​ ಟಾಸ್ಕ್​ನ್ನ ಎದುರಿಸ್ತಾ ಇದೆ. ಮೊದಲು ಬ್ಯಾಟಿಂಗ್​ ಮಾಡಿ 245ಕ್ಕೆ ಭಾರತ ಆಲೌಟ್ ಆಗಿತ್ತು. ಆದ್ರೆ ಬೌಲಿಂಗ್​ನಲ್ಲಿ ಟೀಂ ಇಂಡಿಯಾದ ಪರ್ಫಾಮೆನ್ಸ್ ಕೂಡಾ ನಿರೀಕ್ಷೆಗೆ ತಕ್ಕಂತೆ ಇಲ್ಲ.

ಇದನ್ನೂ ಓದಿ: ಕೈಗ್ ಹಾಕಲೋ ಎಂದ ಕೆ.ಎಲ್ ರಾಹುಲ್ – ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ತಾಕೀತು

ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.. ಬೌಲಿಂಗ್ ಅಂತಾ ಬಂದಾಗ ಟೀಂ ಇಂಡಿಯಾ ಡಿಪೆಂಡ್ ಆಗಿರೋದೆ ಇವ್ರಿಬ್ರನ್ನ. ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಗೆಲ್ಲಬೇಕಿದ್ರೆ ಈ ಇಬ್ಬರೂ ಬೌಲರ್ಸ್​ ಕ್ಲಿಕ್ ಆಗಲೇಬೇಕು. ಫುಲ್​ ಪೇಸ್​​ ಬೌಲರ್ಸ್​​ಗಳಿಗೆ ಫೇವರ್ ಆಗಿಯೇ ಇರೋ ಪಿಚ್ ಆಗಿರೋ ಕಾರಣ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೇಲೆಯೇ ಹೆಚ್ಚು ಜವಾಬ್ದಾರಿ ಇದೆ. ಆರಂಭದಲ್ಲಿ ಬುಮ್ರಾ ಬೌಲಿಂಗ್ ಎಫೆಕ್ಟಿವ್ ಆಗಿಯೇ ಇತ್ತು. ಆದ್ರೆ ಮ್ಯಾಚ್​​ನ ಸೆಕೆಂಡ್ ಸೆಕ್ಷನ್ ವೇಳೆ ಬುಮ್ರಾ ಬೌಲಿಂಗ್​​ಗೂ ಆಫ್ರಿಕಾ ಬ್ಯಾಟ್ಸ್​​ಮನ್​ಗಳು ಚಚ್ಚಿದ್ರು. ಭಾರತೀಯ ಬೌಲರ್ಸ್​​ಗಳ ನಿದ್ದೆಗೆಡಿಸಿರೋದು ಓಪನರ್ ಡೀನ್ ಎಲ್ಗರ್. ಡೀನ್ ಎಲ್ಗರ್ ಸದ್ಯ ಟೆಸ್ಟ್​​ ಕ್ರಿಕೆಟ್​​ನ ವನ್​ ಆಫ್ ದಿ ಬೆಸ್ಟ್ ಬ್ಯಾಟ್ಸ್​ಮನ್. ಆ್ಯಕ್ಚುವಲಿ ಟೀಂ ಇಂಡಿಯಾದ ಮೇನ್ ಟಾರ್ಗೆಟ್ ಆಗಿರಬೇಕಾಗಿದ್ದಿದ್ದೇ ಡೀನ್ ಎಲ್ಗರ್. ಡೀನ್ ಎಲ್ಗರ್​ರನ್ನ ಔಟ್ ಮಾಡಿದ್ರಷ್ಟೇ ಟೆಸ್ಟ್​​ನಲ್ಲಿ ಮೇಲುಗೈ ಸಾಧಿಸಬಹುದು. ಆದರೆ, ಓಪನಿಂಗ್ ಬಂದಿದ್ದ ಎಲ್ಗರ್ ಎರಡನೇ ದಿನದಾಟದ ಕೊನೆವರೆಗೂ ಔಟ್ ಆಗಲೇ ಇಲ್ಲ. 211 ಬಾಲ್​ಗಳನ್ನ ಫೇಸ್​ ಮಾಡಿ 140 ರನ್​ ಗಳಿಸಿ ನಾಟ್​​ಔಟ್ ಆಗಿದ್ರು. ಸೆಕೆಂಡ್ ಡೇನಂದು. 23 ಬೌಂಡರಿ ಹೊಡೆದ್ರಷ್ಟೇ ಹೊರತು ಒಂದೇ ಒಂದು ಸಿಕ್ಸರ್ ಕೂಡ ಬಾರಿಸಿಲ್ಲ. ಲೆಗ್​ಸೈಡ್, ಆಫ್​ಸೈಡ್ ಹೀಗೆ ಡೀನ್​ ಎಲ್ಗರ್ ಭಾರತೀಯ ಬೌಲರ್ಸ್​​ಗಳಿಗೆ ಚಚ್ತಾನೆ ಇದ್ರು. ಡೀನ್ ಎಲ್ಗರ್ ಎಂಥಾ ಟೆಸ್ಟ್​ ಪ್ಲೇಯರ್​​ ಅನ್ನೋದು ಇಲ್ಲೇ ಗೊತ್ತಾಗುತ್ತೆ. ಓನ್ಲಿ ಗ್ರೌಂಡ್ ಶಾಟ್ಸ್.. ಪಕ್ಕಾ ಟೆಸ್ಟ್ ಕ್ರಿಕೆಟರ್. ಸೌತ್​ ಆಫ್ರಿಕಾ ಪಾಲಿನ ಅನ್​ಸಂಗ್ ಹೀರೋ ಅಂದ್ರೆ ಅದು ಡೀನ್ ಎಲ್ಗರ್. ಇನ್ನು ಡೇವಿಡ್ ಬೆಡಿಂಗ್​ಹ್ಯಾಮ್ ಕೂಡ ಅಷ್ಟೇ 56 ರನ್​ ಗಳಿಸಿ ಡೀನ್ ಎಲ್ಗರ್​ಗೆ ಒಂದಷ್ಟು ಸಾಥ್ ಕೊಟ್ರು. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿಧ್ ಕೃಷ್ಣ ಇಬ್ಬರೂ ಕೂಡ ಅಷ್ಟೊಂದು ಎಫೆಕ್ಟಿವ್ ಆಗಿ ಬೌಲಿಂಗ್ ಮಾಡಿಲ್ಲ. ಮೊಹಮ್ಮದ್ ಸಿರಾಜ್​ 15 ಓವರ್​ಗಳಲ್ಲಿ 63 ರನ್ ಹೊಡೆಸಿಕೊಂಡಿದ್ದಾರೆ. ಇನ್ನು ಗೋಲ್ಡನ್ ಆರ್ಮ್ ಬೌಲರ್ ಶಾರ್ದುಲ್ ಠಾಕೂರ್ ಕೂಡ ಅಷ್ಟೇ, 12 ಓವರ್​​ಗಳಲ್ಲಿ 57 ರನ್​ ಆಫ್ರಿಕನ್ನರಿಗೆ ದಾನ ಮಾಡಿದ್ರು. ಒಂದೇ ಒಂದು ವಿಕೆಟ್ ಕೂಡ ತೆಗೆದಿಲ್ಲ ನಮ್ಮ ಗೋಲ್ಡನ್ ಆರ್ಮ್ ಬೌಲರ್.

Sulekha