ಕನ್ನಡದ ನಟಿ ಶ್ರೀಲೀಲಾ & ಕ್ರಿಕೆಟರ್ ತಿಲಕ್ ವರ್ಮಾ ಕದ್ದುಮುಚ್ಚಿ ಡೇಟಿಂಗ್ – ಲವ್ ಸೀಕ್ರೆಟ್ ಬಿಚ್ಚಿಟ್ಟ ನಟಿ ತಾಯಿ!

ಕ್ರಿಕೆಟರ್ಸ್ ಮತ್ತು ನಟಿಯರು ಲವ್ ನಲ್ಲಿ ಬೀಳೋದು, ಡೇಟಿಂಗ್ ಮಾಡೋದು, ಮದುವೆ ಆಗೋದು ಕಾಮನ್ ಆಗೋಗಿದೆ. ಹೀಗೆ ಕ್ರಿಕೆಟ್ ಲೋಕದಲ್ಲಿ ಇಂತದ್ದೇ ಮತ್ತೊಂದು ಸುದ್ದಿ ಹರಿದಾಡ್ತಿದೆ. ಅದೂ ಕೂಡ ಕನ್ನಡದ ನಟಿ ಶ್ರೀಲೀಲಾ ಮತ್ತು ಟೀಂ ಇಂಡಿಯಾ ಆಟಗಾರ ತಿಲಕ್ ವರ್ಮಾ ಇಬ್ಬರು ಪ್ರೀತಿ ಮಾಡುತ್ತಿದ್ದು ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ಈ ಸಂಬಂಧ ಶ್ರೀಲೀಲಾ ತಾಯಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : SRH ವಿರುದ್ಧ ಅಖಾಡಕ್ಕೆ ಇಳಿಯುತ್ತಾರಾ ತಲಾ – ಚೆನ್ನೈನಲ್ಲಿಂದು ಎಂ.ಎಸ್ ಧೋನಿಗೆ ವಿದಾಯ ಪಂದ್ಯ?
ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಸುದ್ದಿಯೇ. ಸಣ್ಣಪುಟ್ಟ ವಿಚಾರಗಳೂ ರೆಕ್ಕೆ ಪುಕ್ಕ ಬಂದು ಬೇಡದೇ ಇರುವಂಥ ತಿರುವು ಪಡೆಯುತ್ತವೆ. ಯುವಕ, ಯುವತಿ ಒಂದೇ ಜಾಗದಲ್ಲಿ ಕಾಣಿಸಿಕೊಂಡರೆ ಸಾಕು, ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸುದ್ದಿ ಹರಿದಾಡುತ್ತದೆ. ಈಹ ಸ್ಟಾರ್ ನಟಿ ಶ್ರೀಲೀಲಾ ವಿಚಾರದಲ್ಲೂ ಇದೇ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ತಿಲಕ್ ವರ್ಮ ಹಾಗೂ ಶ್ರೀಲೀಲಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಆದರೆ, ಈಗ ಈ ಎಲ್ಲಾ ಸುದ್ದಿಗಳಿಗೆ ಶ್ರೀಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಅವರು ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಶ್ರೀಲೀಲಾ ಮತ್ತು ತಿಲಕ್ ವರ್ಮ ಇಬ್ಬರೂ ಪ್ರತ್ಯೇಕವಾಗಿ ತಿರುಮಲಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಶ್ರೀಲೀಲಾ ಅವರ ತಾಯಿ ವಿಐಪಿ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಶ್ರೀಲೀಲಾ ತಂಡದ ಸದಸ್ಯರೊಬ್ಬರು ತಿಲಕ್ ಹೆಸರಿನ ಜರ್ಸಿ ಧರಿಸಿದ್ದರು. ಈ ವಿಚಾರಗಳನ್ನೇ ಇಟ್ಟುಕೊಂಡು ನೆಟ್ಟಿಗರು ಇವರಿಬ್ಬರ ನಡುವೆ ಪ್ರೀತಿ ಬೆಳೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದ್ದಾರೆ. ಇದರ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ, ‘ಈ ಎಲ್ಲಾ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ. ಇದರಲ್ಲಿ ಸತ್ಯಾಂಶವಿಲ್ಲ. ಶ್ರೀಲೀಲಾ ಮತ್ತು ತಿಲಕ್ ವರ್ಮ ಇದುವರೆಗೆ ಭೇಟಿಯೂ ಆಗಿಲ್ಲ, ಮಾತನಾಡಿಯೂ ಇಲ್ಲ. ಜನರು ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡು ತಮಗೆ ಬೇಕಾದ ಹಾಗೆ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ, ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಸ್ವರ್ಣಲತಾ ಅವರು ಈ ಬಗ್ಗೆಯೂ ಮಾತನಾಡಿದ್ದಾರೆ. ಸದ್ಯಕ್ಕೆ ಸಿನಿಮಾ ಮತ್ತು ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾಳೆ. ಜೂನ್‌ನಲ್ಲಿ ನಡೆಯಲಿರುವ ನೀಟ್ ಪಿಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಅವಳಿಗೆ ವೈಯಕ್ತಿಕ ಜೀವನ, ಮದುವೆ ಅಂತೆಲ್ಲಾ ಯೋಚಿಸಲು ಇನ್ನೂ 5-6 ವರ್ಷಗಳ ಸಮಯವಿದೆ. ಸದ್ಯಕ್ಕಂತೂ ಅವಳ ಗಮನ ಪೂರ್ತಿ ಓದು ಮತ್ತು ಸಿನಿಮಾಗಳ ಮೇಲಷ್ಟೇ ಇದೆ ಎಂದಿದ್ದಾರೆ. ಅಷ್ಟಕ್ಕೂ ಶ್ರೀಲೀಲಾ ಹೆಸರು ಹೀಗೆ ಥಳಕು ಹಾಕಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆಯೂ ಇವರ ಹೆಸರು ಕೇಳಿಬಂದಿತ್ತು. ‘ತು ಮೇರಿ ಜಿಂದಗಿ ಹೈ’ ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ. ಈಸಲ ಆಧಾರವೇ ಇಲ್ಲದೆ ತಿಲಕ್ ಜೊತೆ ಅವರ ಹೆಸರು ಥಳಕು ಹಾಕಿಕೊಂಡಿದೆ.

ನೋಡಿರಿ

