ನೀವು ಹೆಚ್ಚು ಖಾರ ತಿಂತೀರಾ? – ಆಗಾಗ ಖಾರ ತಿನ್ನುವ ಬಯಕೆ ಶುರುವಾಗೋದೇಕೆ?

ನೀವು ಹೆಚ್ಚು ಖಾರ ತಿಂತೀರಾ? – ಆಗಾಗ ಖಾರ ತಿನ್ನುವ ಬಯಕೆ ಶುರುವಾಗೋದೇಕೆ?

ಕೆಲವರಿಗೆ ಸಿಹಿ, ಇನ್ನು ಕೆಲವರಿಗೆ ಖಾರ, ಮತ್ತಷ್ಟು ಜನಕ್ಕೆ ಹುಳಿ ಹೀಗೆ ನಾನಾ ತರದ ಆಹಾರ ಇಷ್ಟವಿರುತ್ತದೆ. ಅದರಲ್ಲೂ  ಶೀತ, ಜ್ವರದಿಂದ ಬಳಲುತ್ತಿರುವಾಗ ಖಾರ ತಿನ್ನಲು ಹಂಬಲಿಸುತ್ತಾರೆ. ಇಂತಹ ಆಹಾರವನ್ನು ಪ್ರತಿನಿತ್ಯ ತಿಂದ್ರೆ ಅಜೀರ್ಣ, ಅಸಿಡಿಟಿ ಆಗಬಹುದು.. ಆದ್ರೆ ಕೆಲವೊಬ್ಬರು ಯಾವಾಗ ನೋಡಿದ್ರೂ ಖಾರಾನೇ ತಿನ್ತಾರೆ.  ಯಾವಾಗ್ಲೂ ಖಾರ ತಿನ್ಬೇಕು ಅಂತನಿಸೋದಕ್ಕೆ ಕಾರಣಗಳೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗ್ರಾಮಕ್ಕೆ ಕಳ್ಳರು ನುಗ್ಗಿದ್ದಾರೆಂದು ಗೂಗಲ್‌ ಮ್ಯಾಪ್‌ ತಂಡದ ಸದಸ್ಯರಿಗೆ ಥಳಿಸಿದ ಹಳ್ಳಿ ಜನ! – ಆಮೇಲೆ ಏನಾಯ್ತು ಗೊತ್ತಾ?

ಸಾಮಾನ್ಯವಾಗಿ ಗರ್ಭಿಣಿಯರಿಗೆ ವಿವಿಧ ರೀತಿಯ ಆಹಾರ ಬಯಕೆ ಸಾಮಾನ್ಯ.  ಬಹಳಷ್ಟು ಗರ್ಭಿಣಿಯರು ಸಿಹಿತಿಂಡಿಗಳು, ಚಾಕೊಲೇಟ್‌ಗಳು ಮತ್ತು ಖಾರದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಈ ಕಡುಬಯಕೆಗಳು ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಬರುತ್ತವೆ.  ಇನ್ನು ಹವಾಮಾನ ತಂಪಾಗಿರುವಾಗ, ಬಹಳಷ್ಟು ಜನರು ಖಾರ ತಿನ್ನಲು ಹಂಬಲಿಸುತ್ತಾರೆ. ಖಾರ ದೇಹದಲ್ಲಿ ಉಷ್ಣತೆಯ ಭಾವನೆಯನ್ನು ಉತ್ತೇಜಿಸುತ್ತದೆ, ಅಲ್ಲದೆ ಶೀತ ತಡೆಯಲು ಸಹಾಯ ಮಾಡುತ್ತದೆ.

ಇನ್ನು ಖಿನ್ನತೆಗೆ ಒಳಗಾದಾಗಲೂ ಖಾರ ತಿನ್ನಲು  ಹಂಬಲಿಸಬಹುದು. ಇದು ಖಿನ್ನತೆ-ಶಮನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಹೆಚ್ಚು ಖಾರ ತಿಂತೇನೆ ಅಂತಾ ತಲೆಕೆಡಿಸಿಕೊಳ್ಳ, ಹಿತಮಿತವಾಗಿ ತಿಂದ್ರೆ ಸಾಕು.

Shwetha M