ಪಾಂಡ್ಯ ಫ್ಯಾಮಿಲಿಯಲ್ಲಿ ಬಿರುಕು! ಅಣ್ಣ ತಮ್ಮನ ದೂರ ಮಾಡಿದ್ಲಾ ಮಹಿಕಾ?
ಹಾರ್ದಿಕ್ ಚೆಲ್ಲಾಟಕ್ಕೆ ಕೈನಾಲ್ ಕಣ್ಣೀರು!?

ಜೀವಕ್ಕೆ ಜೀವದಂತಿದ್ದ ಅಣ್ಣತಮ್ಮರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ದೂರ ಆಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ನಿಮ್ಗೆಲ್ಲಾ ಗೊತ್ತಿರೋ ಹಾಗೇ ಕೆಲ ದಿನಗಳ ಹಿಂದೆ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ತುಂಬಾ ಕ್ಲೋಸ್ ಇದ್ದರು. ಇಬ್ಬರು ಜೊತೆಯಲ್ಲೇ ಇರುತ್ತಿದ್ದರು. ಜೊತೆಯಲ್ಲೇ ಆಡುತ್ತಿದ್ದರು.. ಆದ್ರೆ ಈಗ ಇವರಿಬ್ಬರ ಸಂಬಂಧ ಹಳಸಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದ್ದಕ್ಕೆ ಕಾರಣವಾಗಿದ್ದು, ಹಾರ್ದಿಕ್ ಪಾಂಡ್ಯರ ಹೊಸ ಗರ್ಲ್ಫ್ರೆಂಡ್ ಮಹಿಕಾ ಶರ್ಮಾ ಹಚ್ಚಿದ ಬೆಂಕಿಯಂತೆ.
ವಿಶ್ವಕಪ್ ಮುಂಚೆ ಮತ್ತು ವಿಶ್ವಕಪ್ ನಂತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತೀರೋ ಒಬ್ಬನೇ ಒಬ್ಬ ವ್ಯಕ್ತಿ ಅಂದ್ರೆ ಅಂದು ಹಾರ್ದಿಕ್ ಪಾಂಡ್ಯ.. ಅದು ತನ್ನ ಹೊಸ ಗರ್ಲ್ಫ್ರೆಂಡ್ ಮಹಿಕಾ ಶರ್ಮಾ ಕಾರಣಕ್ಕೆ.. ವಿಶ್ವಕಪ್ ಗೆದ್ದ ದಿನ ಮಹಿಕಾ ಜೊತೆ ಹಾರ್ದಿಕ್ ತುಂಟಾಟ ಆಡುತ್ತಾ ಮುತ್ತಾಟ ಆಡುತ್ತಾ ಕ್ಯಾಮರಾ ಇದೇ, ಲಕ್ಷಾಂತರ ಜನ ನಮ್ಮನ್ನ ನೋಡುತ್ತಿದ್ದಾರೆ ಅನ್ನೋದ್ದನ್ನೂ ಕ್ಯಾರೇ ಮಾಡದೆ ಮೈದಾನದಲ್ಲೇ ಜಾಲಿಜಾಲಿಯಾಗಿದ್ರು. ಇದರ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಈಗ ವಿಷ್ಯ ಏನಪ್ಪ ಅಂದ್ರೆ ಕೃನಾಲ್ ಪಾಂಡ್ಯರಿಂದ ಹಾರ್ದಿಕ್ ಪಾಂಡ್ಯ ದೂರ ಆಗಿದ್ದಾರೆ ಅನ್ನೋದು..
ಹೌದು..ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬೆಳವಣಿಗೆಗೆ ಹಾರ್ದಿಕ್ ಅವರ ಹೊಸ ಗರ್ಲ್ ಫ್ರೆಂಡ್ ಮಾಡೆಲ್ ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ. ಟೀಂ ಇಂಡಿಯಾ ಮೊನ್ನೆ ಟಿ20 ವಿಶ್ವಕಪ್ ಗೆದ್ದಾಗ ಅಹಮದಾಬಾದ್ನಲ್ಲಿ ನಡೆದ ಭರ್ಜರಿ ಸೆಲೆಬ್ರೇಷನ್ನಲ್ಲಿ ಕೃನಾಲ್ ಪಾಂಡ್ಯ ಆಗ್ಲಿ ಅವರ ಹೆಂಡತಿ ಆಗ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಾಣಿಸೋದು ಬಿಡಿ, ಹಾರ್ದಿಕ್ ಪಾಂಡ್ಯ ಅವರ ಸಾಧನೆಯನ್ನು ಅಭಿನಂದಿಸಿ ಕೃನಾಲ್ ಸಹ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿಲ್ಲ. ಇವೆಲ್ಲವೂ ಇದೀಗ ಅಣ್ಣ-ತಮ್ಮ ದೂರವಾಗಿದ್ದಾರೆ ಎಂಬ ವದಂತಿಗೆ ವದಂತಿಗೆ ರೆಕ್ಕೆ ಪುಕ್ಕ ಕಟ್ಟಿವೆ.
ಹಾರ್ದಿಕ್ -ಕೃನಾಲ್ ದೂರ ಆಗೋಕೆ ಮಹಿಕಾ ಕಾರಣ!?
ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ದೂರವಾಗಲು ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ. ಮಹಿಕಾ ಹಾರ್ದಿಕ್ ಲೈಫ್ಗೆ ಎಂಟ್ರಿ ಕೊಟ್ಟ ಬಳಿಕವಷ್ಟೇ ಅಣ್ತಂಮ್ಮದಿರುವ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ಪಾಂಡ್ಯ ಬ್ರದರ್ಸ್ ದೂರವಾಗಲು ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ನತಾಶಾರಿಂದ ದೂರ ಆದ ಮೇಲೆ ಮಾಡೆಲ್ ಮತ್ತು ನಟಿ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. 2025ರ ಅಕ್ಟೋಬರ್ನಲ್ಲಿ ಹಾರ್ದಿಕ್ ಈ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ಮಹಿಕಾ ಮೈದಾನದಲ್ಲಿ ಹಾರ್ದಿಕ್ ಅವರಿಗೆ ಬೆಂಬಲವಾಗಿ ನಿಂತಿದ್ದರು. ಮೈದಾನದಲ್ಲಿ ಕಿಸ್ ಕೊಡ್ತಾ ಫುಲ್ ಜಾಲಿ ಜಾಲಿಯಾಗಿದ್ರು. ಆದ್ರೆ ಈ ಸಂಬಂಧ ಪಂಡ್ಯಾ ಕುಟುಂಬದ ಸದಸ್ಯರಲ್ಲಿ, ವಿಶೇಷವಾಗಿ ಕೃನಾಲ್ ಮತ್ತು ಅವರ ಹೆಂಡತಿ ಪಂಖುರಿ ಶರ್ಮಾರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ.
ಇನ್ನೂಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಮತ್ತು ಅವರ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿ ಈಗಲೂ ಆತ್ಮೀಯವಾಗಿದ್ದಾರಂತೆ. ಆದ್ರೆ ಮಹಿಕಾ ಜೊತೆ ಹಾರ್ದಿಕ್ ಸಂಬಂಧ ಇವರಿಗೆ ಇಷ್ಟ ಆಗಿಲ್ಲ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ದೂರ ಆಗುವುದ್ದಕ್ಕೆ ಕಾರಣ ಎನ್ನಲಾಗ್ತಿದೆ. ಒಟ್ನಲ್ಲಿ ಅಣ್ಣ ತಮ್ಮ ದೂರ ಆಗಿದ್ದ ಬಗ್ಗೆ ಇವರ ಫ್ಯಾಮಿಲಿ ಎಲ್ಲೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆಗುತ್ತಿರೋ ಬೆಳವಣಿ ಆಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಚರ್ಚೆ ಶುರುವಾಗಿದೆ. ಈ ಊಹಪೋಹ ಎಲ್ಲಾ ಸುಳ್ಳಾಗಿ ಪಾಂಡ್ಯ ಬ್ರದರ್ಸ್ ಚೆನ್ನಾಗಿರಲಿ ಅನ್ನೋದು ಅಭಿಮಾನಿಗಳ ಆಶಯ.

ನೋಡಿರಿ

