ಮಕ್ಕಳ ಬೆಳವಣಿಗೆಗೆ ಕಂಟಕವಾಗುತ್ತಿದೆ ಬೇಬಿ ವಾಕರ್!

ಮಕ್ಕಳ ಬೆಳವಣಿಗೆಗೆ ಕಂಟಕವಾಗುತ್ತಿದೆ ಬೇಬಿ ವಾಕರ್!

ಸಣ್ಣ ಮಕ್ಕಳು ನಡೆಯಲು ಪ್ರಾರಂಭಿಸ್ತಾ ಇದ್ದಾರೆ ಅನ್ನೋವಾಗ  ನಡೆಯಲು ಸಹಾಯ ಆಗ್ಲೀ ಅಂತಾ ಪೋಷಕರು ಬೇಬಿ ವಾಕರ್ ಅನ್ನು ಮನೆಗೆ ತರ್ತಾರೆ. ಈ ಬೇಬಿ ವಾಕರ್ ಎಷ್ಟು ಸೇಫ್ ಅನ್ನೋ ಪ್ರಶ್ನೆ ಈಗ ನಮ್ಮನ್ನ ಕಾಡ್ತಾ ಇದೆ. ಯಾಕಂದ್ರೆ  ಇದನ್ನ ಕೆನಡಾದಲ್ಲಿ ಬ್ಯಾನ್ ಮಾಡಲಾಗಿದೆ.

ಮನೆಯಲ್ಲಿ ಸಣ್ಣ ಮಕ್ಕಳಿದ್ರೆ ಅವರಿಗೆ ಬೇಬಿ ವಾಕರ್‌ ಅನ್ನು ತರುತ್ತಾರೆ. ಅನೇಕರು ಇದನ್ನೇ ಗಿಫ್ಟ್‌ ಕೊಡುತ್ತಾರೆ. ಆದರೆ ಈ ಬೇಬಿ ವಾಕರ್ ಮಗುವಿನ ಸಹಜ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಮಕ್ಕಳು ಸ್ವಂತವಾಗಿ ಹೆಜ್ಜೆ ಇಡಲು ಕಲಿಯುವ ಬದಲು ಇದನ್ನೇ ಅವಲಂಬಿಸುತ್ತಾರೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಬಿಳಿ ಕುಂಬಳಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು – ರಸ ಸೇವನೆಯಿಂದಲೂ ಹತ್ತಾರು ಲಾಭ

ಇನ್ನು ಬೇಬಿ ವಾಕರ್ ಮಗುವಿನ ಜೀವಕ್ಕೆ ಅಪಾಯಕಾರಿ ಆಗಬಹುದು. ಯಾಕಂದ್ರೆ ಈ ವಾಕರ್ ಗಳಿಂದಾಗಿಯೇ ಅದೆಷ್ಟೋ ಮಕ್ಕಳು ಗಾಯಗೊಂಡಿದ್ದಾರೆ. ಮಕ್ಕಳು ತಮ್ಮ ದೇಹವನ್ನು ಸ್ವಲ್ಪ ಅಲುಗಾಡಿಸಿದರೂ ವಾಕರ್‌ ಮುಂದೆಕ್ಕೆ ಚಲಿಸಲು ಆರಂಭಿಸಲುತ್ತದೆ. ಇದರ ಸ್ಪೀಡ್‌ನಷ್ಟು ಬೇಗ ಮಕ್ಕಳಿಗೆ ಹೆಜ್ಜೆ ಇಡಲು ಸಾಧ್ಯ ಆಗೋದಿಲ್ಲ. ಹೀಗಾಗಿ ಮಕ್ಕಳ ಕಾಲಿಗೂ ಪೆಟ್ಟಾಗುವ ಸಾಧ್ಯತೆ ಇದೆ. ಇನ್ನು ವಾಕರ್ ನಲ್ಲಿ ಇದ್ದಾಗಲೇ ಮ್ಕಕಳು ಮೆಟ್ಟಿಲಿನಿಂದ ಇಳಿಯುವ ಪ್ರಯತ್ನ ಮಾಡುತ್ತಾರೆ.  ಬೇರೆ ಯಾವುದಾದರೂ  ವಸ್ತುಗಳನ್ನು ಎಳೆದಾಗ ಮಕ್ಕಳು ಉರುಳಿ ಬೀಳುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳ ತಲೆ, ಕತ್ತಿನ ಭಾಗಗಳಿಗೆ ಗಂಭೀರ ಗಾಯಗಳಾಗುವ ಸಾದ್ಯತೆ ಇದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.

Shwetha M