ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಹಾವಳಿ – ಅಮೆರಿಕ ಪ್ರತಿ ದಾಳಿಗೆ 3 ಬೋಟ್‌ಗಳು ಮುಳುಗಡೆ, 10 ಬಂಡುಕೋರರು ಸಾವು

ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಹಾವಳಿ – ಅಮೆರಿಕ ಪ್ರತಿ ದಾಳಿಗೆ 3 ಬೋಟ್‌ಗಳು ಮುಳುಗಡೆ, 10 ಬಂಡುಕೋರರು ಸಾವು

ಸುಯೆಜ್ ಕಾಲುವೆಯಿಂದ ಕೆಂಪು ಸಮುದ್ರದ ಮಾರ್ಗವಾಗಿ ಅರಬ್ಬಿ ಸಮುದ್ರಕ್ಕೆ ಬರುವ ಹಡಗುಗಳ ಮೇಲೆ ಉಗ್ರರ ದಾಳಿ ಘಟನೆಗಳ ತೀವ್ರವಾಗುತ್ತಿವೆ. ಅದರಲ್ಲೂ ಕೆಂಪು ಸಮುದ್ರದ ಯೆಮನ್ ದೇಶದ ಗಡಿ ಹಾಗೂ ಈಡನ್ ಕೊಲ್ಲಿಯಲ್ಲಿ ಹಡಗುಗಳ ಮೇಲೆ ಕ್ಷಿಪಣಿ ದಾಳಿ ಹಾಗೂ ಡ್ರೋನ್ ದಾಳಿಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಹಡಗಿನ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ.

ಹೌದು, ಇರಾನ್‌ನ ಬೆಂಬಲಿತ ಹೌತಿ ಉಗ್ರಗಾಮಿಗಳು ಭಾನುವಾರ ಕೆಂಪು ಸಮುದ್ರದಲ್ಲಿ ಮರ್ಸ್ಕ್‌ ಕಂಟೈನರ್‌ ಹಡಗಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ ವೈಮಾನಿಕ ಪಡೆ ಪ್ರತಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂರು ಬೋಟುಗಳು ಮುಳುಗಡೆಯಾಗಿದೆ. ಹತ್ತು ಉಗ್ರರು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್‌ಗಳಿಗೆ ಬಿಬಿಎಂಪಿಯಿಂದ ಖಡಕ್‌ ಎಚ್ಚರಿಕೆ – ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ!

ಈ ನೌಕಾಯುದ್ಧವು ಭಾನುವಾರ ನಸುಕಿನ ವೇಳೆ ಸಂಭವಿಸಿರುವುದಾಗಿ ವರದಿ ತಿಳಿಸಿದೆ. ಸಿಂಗಾಪುರ್‌ ಧ್ವಜ ಹೊಂದಿದ್ದ ಮರ್ಸ್ಕ್‌ ಹ್ಯಾಂಗ್‌ ಝೂ ಹಡಗಿನ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಲು ಮುಂದಾಗಿದ್ದಾರೆ ಈ ಸಂದರ್ಭದಲ್ಲಿ ಅಮೆರಿಕದ ಭದ್ರತಾ ಪಡೆಗೆ ದಾಳಿ ಕುರಿತು ಸಂದೇಶ ದೊರಕಿದ್ದು, ತಕ್ಷಣವೇ ಅಮೆರಿಕದ ಭದ್ರತಾ ಪಡೆ ವೈಮಾನಿಕ ದಾಳಿ ಮೂಲಕ ಬಂಡುಕೋರರ ದಾಳಿಯನ್ನು ವಿಫಲಗೊಳಿಸಿರುವುದಾಗಿ ತಿಳಿಸಿದೆ.

“ನಮ್ಮ ಎಚ್ಚರಿಕೆಯ ಸಂದೇಶವನ್ನು ಪಡೆಯಲು ಹಡಗಿನ ಕ್ಯಾಪ್ಟನ್‌ ನಿರಾಕರಿಸಿದ್ದರಿಂದ ದಾಳಿ ನಡೆಸಲು ಮುಂದಾಗಿರುವುದಾಗಿ ಹೌತಿ ವಕ್ತಾರ ತಿಳಿಸಿದ್ದು, ಅಮೆರಿಕ ವೈಮಾನಿಕ ಪಡೆ ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಹೌತಿ ಬಂಡುಕೋರರು ಸಾವಿಗೀಡಾಗಿರುವುದಾಗಿ” ವರದಿ ವಿವರಿಸಿದೆ.

Shwetha M