ಅಪ್ಪು ಹುಟ್ಟುಹಬ್ಬಕ್ಕೆ ದಿನವಿಡೀ ಕಾರ್ಯಕ್ರಮ – ಹೇಗಿದೆ ಗೊತ್ತಾ ‘ಪವರ್ ಸ್ಟಾರ್’ ಬರ್ತಡೇ..? 

ಅಪ್ಪು ಹುಟ್ಟುಹಬ್ಬಕ್ಕೆ ದಿನವಿಡೀ ಕಾರ್ಯಕ್ರಮ – ಹೇಗಿದೆ ಗೊತ್ತಾ ‘ಪವರ್ ಸ್ಟಾರ್’ ಬರ್ತಡೇ..? 

ಸ್ಯಾಂಡಲ್​ವುಡ್​ನ ‘ರಾಜಕುಮಾರ’ ಪುನೀತ್ ರಾಜ್​ಕುಮಾರ್ ಅವರ 48ನೇ ಹುಟ್ಟುಹಬ್ಬ ಇವತ್ತು. ಅಪ್ಪು ಇಲ್ಲದ ನೋವಿನಲ್ಲೇ ರಾಜ್ಯಾದ್ಯಂತ ಅಭಿಮಾನಿಗಳು ಬರ್ತಡೇ ಸೆಲೆಬ್ರೇಟ್ ಮಾಡ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದಲೇ ಹಲವು ಕಾರ್ಯಕ್ರಮಗಳು ಶುರುವಾಗಿದ್ದು, ಸಂಜೆ 6ರ ತನಕ ನಾನಾ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ನಾನಾ ಕಡೆಗಳಲ್ಲಿ ಅಭಿಮಾನಿಗಳು ಹಲವು ರೀತಿಯಲ್ಲಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ : ಸಿನಿಮಾಗಳ ಜೊತೆ ಜೊತೆಗೆ ಸಮಾಜಸೇವೆ – ‘ಅಭಿ’ಮಾನಿಗಳ ‘ಅಪ್ಪು’ ಬೆಳೆದ ಹಾದಿಯೇ ರೋಚಕ..!

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಬೆಳಗ್ಗೆ ಎಂಟು ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯ್ತು. ಬೆಳಗ್ಗೆ 10 ರಿಂದ ಅನ್ನ ಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ಅಪ್ಪು ಹಿಟ್ ಹಾಡುಗಳ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಮತ್ತೊಂದೆಡೆ ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ, ಅನ್ನ ಸಂತರ್ಪಣೆ, ಅನಾಥಾಶ್ರಮದಲ್ಲಿ ಹುಟ್ಟು ಹಬ್ಬ ಸೇರಿದಂತೆ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡದಲ್ಲಿ ಅಪ್ಪು ಹೆಸರಿನಲ್ಲೇ ಚಂದ್ರಶೇಖರ್ ಮಾಡಲಗೇರಿ ಮತ್ತು ತಂಡ ಚಿತ್ರೋತ್ಸವವನ್ನು (Film Festival) ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಅಪ್ಪು ಹೆಸರಿನಲ್ಲೇ ಈ ಚಿತ್ರೋತ್ಸವ ನಡೆಯಲಿದೆ. ಅಪ್ಪು ಹೆಸರಿನಲ್ಲಿ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಂತೂ ಅಪ್ಪು ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಪುನೀತ್ ಹುಟ್ಟು ಹಬ್ಬದ ದಿನದಂದೇ ಆರ್.ಚಂದ್ರು ನಿರ್ದೇಶನದ ಉಪೇಂದ್ರ, ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಕಬ್ಜ ಚಿತ್ರ ರಿಲೀಸ್ ಆಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲೂ ಅಪ್ಪು ಕಟೌಟ್ ಹಾಕಲಾಗಿದೆ. ಈ ಮೂಲಕ ಕರುನಾಡಿನುದ್ದಕ್ಕೂ ಅಪ್ಪುರನ್ನ ಸ್ಮರಿಸಲಾಗುತ್ತಿದೆ.

suddiyaana