ಮುಂಬೈನಲ್ಲಿ ಆ್ಯಪಲ್ ಸ್ಟೋರ್! – ಶೀಘ್ರವೇ Apple BKC ಓಪನ್!

ಮುಂಬೈನಲ್ಲಿ ಆ್ಯಪಲ್ ಸ್ಟೋರ್! – ಶೀಘ್ರವೇ Apple BKC ಓಪನ್!

ಆ್ಯಪಲ್ ಕಂಪನಿಯ ಐಫೋನ್​ಗೆ ಭಾರತ ಕೂಡ ಅತೀ ದೊಡ್ಡ ಮಾರ್ಕೆಟ್. ಕೋಟ್ಯಾಂತರ ಮಂದಿ ನಮ್ಮ ದೇಶದಲ್ಲಿ ಐಫೋನ್ ಬಳಕೆ ಮಾಡ್ತಾರೆ. ಹೊಸ ಮಾಡೆಲ್​ ರಿಲೀಸ್ ಆದರೆ ಸಾಕು ಮುಗಿಬಿದ್ದು ಖರೀದಿಸ್ತಾರೆ. ಕೇವಲ ಐಫೊನ್ ಅಷ್ಟೇ ಅಲ್ಲ, ಆ್ಯಪಲ್ ಕಂಪನಿಯ ಕಂಪ್ಯೂಟರ್​​ಗೂ ಭಾರಿ ಡಿಮ್ಯಾಂಡ್​ ಇದೆ. ಇಷ್ಟಾದರೂ ಕೂಡ ಇದುವರೆಗೂ ನಮ್ಮ ದೇಶದಲ್ಲಿ ಒಂದೇ ಆ್ಯಪಲ್ ಸ್ಟೋರ್ ಇರಲಿಲ್ಲ. ಆದ್ರೀಗ ಆ್ಯಪಲ್ ಸ್ಟೋರ್ ಓಪನ್ ಆಗೋ ಟೈಮ್ ಬಂದಿದೆ.

ಇದನ್ನೂ ಓದಿ: ಒಂದೇ ಬಾರಿಗೆ 64 ಮೊಬೈಲ್ ಗಳಲ್ಲಿ ಗೇಮ್ –  74 ವರ್ಷದ ಅಜ್ಜನಿಗೆ ಇದೆಂಥಾ ಚಟ?

ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ಮೊಟ್ಟ ಮೊದಲ ಆ್ಯಪಲ್ ಸ್ಟೋರ್ ಓಪನ್ ಆಗಲಿದೆ. ಆ್ಯಪಲ್ ಬಿಕೆಸಿ ಅಂತಾ ಸ್ಟೋರ್​​ಗೆ ಹೆಸರಲಿಡಲಾಗಿದ್ದು, ಬಂದ್ರಾದಲ್ಲಿರುವ ಜಿಯೋ ವರ್ಲ್ಡ್​ ಡ್ರೈವ್ ಮಾಲ್​ ಕ್ಯಾಂಪಸ್​​ನ ಒಳಭಾಗದಲ್ಲಿ ಆ್ಯಪಲ್​ ಸ್ಟೋರ್​ ನಿರ್ಮಾಣವಾಗಿದೆ. ಸದ್ಯ ಸ್ಟೋರ್​​ನ ಡಿಸೈನನ್ನ ಅಷ್ಟೇ ಆ್ಯಪಲ್ ರಿಲೀಸ್ ಮಾಡಿದ್ದು, ಏಪ್ರಿಲ್ ತಿಂಗಳಾಂತ್ಯದ ಒಳಗೆ ಓಪನ್ ಆಗುವ ನಿರೀಕ್ಷೆ ಇದೆ.

suddiyaana