ಉಪ್ಪಿನಕಾಯಿ ಪ್ರಿಯರಿಗೆ ಗುಡ್‌ ನ್ಯೂಸ್ – ಬೆಂಗಳೂರಿನಲ್ಲಿ ನಡೆಯಲಿದೆ ‘ಅಪ್ಪೆಮಿಡಿ’ ಮೇಳ

ಉಪ್ಪಿನಕಾಯಿ ಪ್ರಿಯರಿಗೆ ಗುಡ್‌ ನ್ಯೂಸ್ – ಬೆಂಗಳೂರಿನಲ್ಲಿ ನಡೆಯಲಿದೆ ‘ಅಪ್ಪೆಮಿಡಿ’ ಮೇಳ

ಉಪ್ಪಿನಕಾಯಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಉಪ್ಪಿನಕಾಯಿ ಅಂದ ಕೂಡಲೇ ಬಾಯಲ್ಲಿ ನೀರೂರುವುದು ಗ್ಯಾರಂಟಿ. ಹೀಗಿರುವಾಗ ಅಪ್ಪೆಮಿಡಿ ಮಾವಿನಕಾಯಿ ಬಗ್ಗೆ ಹೇಳಬೇಕಾ. ಹೆಚ್ಚೆನವರಿಗೆ ಅಪ್ಪಿಮಿಡಿ ಮಾವಿನಕಾಯಿ ಫೆವರೇಟ್ ಆಗಿರುತ್ತದೆ. ಇಂತಹ ನೂರಾರು ಅಪ್ಪೆಮಿಡಿ ತಳಿಗಳನ್ನು ಒಂದೇ ಕಡೆ ನೋಡುವ, ಖರೀದಿಸುವ ಅವಕಾಶ ಈಗ ಬೆಂಗಳೂರಿಗರಿಗೂ ಸಿಗಲಿದೆ. ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್ಆರ್) ಮೊಟ್ಟ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳವನ್ನು ಏಪ್ರಿಲ್ 12 ಮತ್ತು 13ರಂದು ಆಯೋಜಿಸಿದೆ.

ಇದನ್ನೂ ಓದಿ:  ರಾಮನ ಭಂಟ ಹನುಮ ಜಯಂತಿ ಸಂಭ್ರಮ – ಭಜರಂಗಿಯ ಇತಿಹಾಸ & ಮಹತ್ವ ಏನು ಗೊತ್ತಾ..!?

‘ಅಪ್ಪೆಮಿಡಿ’ ಮೇಳದಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಅಪ್ಪೆಮಿಡಿಗಳನ್ನು ಮಾರಾಟ ಮಾಡಲಾಗುವುದು. ಅಲ್ಲದೆ, ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸಿಗಳು ಸಹ ಈ ಮೇಳದಲ್ಲಿ ಸಿಗಲಿವೆ. 100 ತಳಿಗಳ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ಪ್ರದರ್ಶಿಸಲಾಗುತ್ತದೆ. ಅಪ್ಪೆಮಿಡಿ ಕರ್ನಾಟಕದ ಸಾಂಪ್ರದಾಯಿಕ ಉಪ್ಪಿನಕಾಯಿ ತಳಿಯಾಗಿದೆ. ಇದಕ್ಕೆ ಜಿಐ ಮಾನ್ಯತೆ ಕೂಡ ಸಿಕ್ಕಿದೆ. ಕರ್ನಾಟಕದಲ್ಲಿ ಮಲೆನಾಡು ಮತ್ತಿತರ ಪ್ರದೇಶಗಳಲ್ಲಿ ಅಪ್ಪೆಮಿಡಿ ತಳಿಗಳಿವೆ. ಸರಿಸುಮಾರು 250ಕ್ಕೂ ಹೆಚ್ಚು ತಳಿಗಳಿವೆ. ಈ ಪೈಕಿ ಐಐಎಚ್ಆರ್ನಿಂದ 100 ಅಪ್ಪೆಮಿಡಿ ತಳಿಗಳನ್ನು ಸಂಗ್ರಹಿಸಲಾಗಿದ್ದು, ಈ ತಳಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು. ಎಂಟಿಆರ್ ಸೇರಿದಂತೆ ನಾನಾ ಸಂಸ್ಥೆಗಳು ಮಳಿಗೆಗಳನ್ನು ತೆರೆಯಲಿದ್ದು, ಅವು ತಯಾರಿಸುವ ಉಪ್ಪಿನಕಾಯಿಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಾಗುವುದು ಎಂದು ಐಐಎಚ್ಆರ್ ನಿರ್ದೇಶಕ ಸಂಜಯ್ಕುಮಾರ್ ಸಿಂಗ್ ಹೇಳಿದ್ದಾರೆ. ಮೇಳದಲ್ಲಿ ಬೆಳೆಗಾರರಿಗೆ ‘ಅಪ್ಪೆಮಿಡಿ’ ಬಗ್ಗೆ ಸಮಗ್ರವಾಗಿ ತಿಳಿಸಲಾಗುವುದು ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ ಡಾ. ಶಂಕರನ್ ತಿಳಿಸಿದ್ದಾರೆ.

suddiyaana