ಸ್ಫೋಟಗೊಂಡಿದ್ದ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಸಾಗರದಿಂದ ಹೊರತೆಗೆದ ಯುಎಸ್‌ ಕೋಸ್ಟ್‌ ಗಾರ್ಡ್‌

ಸ್ಫೋಟಗೊಂಡಿದ್ದ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಸಾಗರದಿಂದ ಹೊರತೆಗೆದ ಯುಎಸ್‌ ಕೋಸ್ಟ್‌ ಗಾರ್ಡ್‌

ವಾಷಿಂಗ್ಟನ್: ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ದುರಂತ ಅಂತ್ಯ ಕಂಡಿದ್ದಾರೆ. ಸ್ಪೋಟಗೊಂಡು ಛಿದ್ರವಾಗಿದ್ದ ಜಲಾಂತರ್ಗಾಮಿ ನೌಕೆಯ  ಅವಶೇಷಗಳನ್ನು ಸಾಗರದಿಂದ ಹೊರಕ್ಕೆ ತೆಗೆಯಲಾಗಿದೆ ಎಂದು ಯುಎಸ್‌ ಕೋಸ್ಟ್‌ ಗಾರ್ಡ್‌ ತಿಳಿಸಿದೆ.

ಇದನ್ನೂ ಓದಿ: ಆಧಾರ್​-ಪ್ಯಾನ್​ ಲಿಂಕ್​ ಮಾಡಲು ಒಂದೇ ದಿನ ಬಾಕಿ – ಕಾರ್ಡ್‌ ನಿಷ್ಕ್ರೀಯವಾಗುವುದಕ್ಕೂ ಮುನ್ನ ಲಿಂಕ್ ಮಾಡಿ

ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆಂದು ಐವರು ಬಿಲಿಯನೇರ್‌ಗಳು ತೆರಳಿದ್ದರು. ಜೂನ್‌ 18 ಈ ಜಲಾಂತರ್ಗಾಮಿ ನೌಕೆ ನೀರಿನ ಸೆಳೆತಕ್ಕೆ ಸಿಲುಕಿ ಸ್ಟೋಟಗೊಂಡಿತ್ತು. ಇದೀಗ ಉತ್ತರ ಅಟ್ಲಾಂಟಿಕ್‌ ನ ಮೇಲ್ಮೈಯಿಂದ 12,000 ಅಡಿ (3,658 ಮೀಟರ್‌ಗಳು) ಗಿಂತ ಹೆಚ್ಚು ಸಮುದ್ರದ ತಳದಿಂದ ಸ್ಪೋಟಗೊಂಡಿದ್ದ ಅವಶೇಷಗಳನ್ನು ಮೇಲಕ್ಕೆ ಎತ್ತಲಾಗಿದೆ. ಸಂಗ್ರಹಿಸಲಾದ ಟೈಟಾನ್‌ ನ ಅವಶೇಷಗಳನ್ನು  ನ್ಯೂಫೌಂಡ್‌ ಲ್ಯಾಂಡ್‌ ನ ಸೇಂಟ್ ಜಾನ್ಸ್‌ ಗೆ ತರಲಾಗಿದೆ ಎಂದು ಯುಎಸ್‌ ಕೋಸ್ಟ್‌ ಗಾರ್ಡ್‌ ಹೇಳಿದೆ.

ಹಡಗಿನಲ್ಲಿ ಬ್ರಿಟಿಷ್ ಪರಿಶೋಧಕ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಜಲಾಂತರ್ಗಾಮಿ ತಜ್ಞ ಪೌಲ್-ಹೆನ್ರಿ ನರ್ಜಿಯೋಲೆಟ್, ಪಾಕಿಸ್ತಾನಿ-ಬ್ರಿಟಿಷ್ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಮತ್ತು ಸಬ್‌ ಮರ್ಸಿಬಲ್ ನ ಆಪರೇಟರ್ ಓಷನ್‌ ಗೇಟ್ ಎಕ್ಸ್‌ ಪೆಡಿಶನ್ಸ್‌ ನ ಸಿಇಒ ಸ್ಟಾಕ್‌ಟನ್ ರಶ್ ಇದ್ದರು.

suddiyaana