ಟೀಂ ಇಂಡಿಯಾ ಜೆರ್ಸಿಗೆ ಹೊಸ ಸ್ಪಾನ್ಸರ್ -ಪ್ರತಿ ಪಂದ್ಯಕ್ಕೆ ₹4.5 ಕೋಟಿ ನೀಡಲಿರೋ ಅಪೋಲೋ ಟಯರ್ಸ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಕ್ರಿಕೆಟ್ ತಂಡದ ಹೊಸ ಜೆರ್ಸಿ ಸ್ಪಾನ್ಸರ್ ಆಗಿ ಅಪೋಲೋ ಟೈರ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದೆ. ಈ ಒಪ್ಪಂದ 2027ರವರೆಗೆ ಮುಂದುವರಿಯುವ ದಾಖಲೆಯ ಒಪ್ಪಂದವಾಗಿದ್ದು, ಪ್ರತಿ ಪಂದ್ಯಕ್ಕೆ ₹4.5 ಕೋಟಿ ರೂಪಾಯಿಗಳನ್ನು ಸ್ಪಾನ್ಸರ್ ಮಾಡಲು ಒಪ್ಪಂದವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದು ಹಿಂದಿನ ಜೆರ್ಸಿ ಸ್ಪಾನ್ಸರ್ ಒಪ್ಪಂದಗಳಲ್ಲಿ ಅತ್ಯಂತ ಹೆಚ್ಚು ಮೊತ್ತವಾಗಿದ್ದು, ಭಾರತೀಯ ಕ್ರಿಕೆಟ್ನ ಜನಪ್ರಿಯತೆಯನ್ನು ಮತ್ತೊಮ್ಮೆ ತೋರಿಸುತ್ತದೆ. ಈ ಒಪ್ಪಂದದೊಂದಿಗೆ ಅಪೋಲೋ ಟಯರ್ಸ್ನ ಲೋಗೋ ಭಾರತ ತಂಡದ ಜೆರ್ಸಿಯಲ್ಲಿ ಪ್ರಮುಖವಾಗಿ ಕಾಣಿಸುತ್ತದೆ.
ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಕೇಸ್ – ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪಗೆ ED ಸಮನ್ಸ್
ಈ ಒಪ್ಪಂದವು 2027ರವರೆಗೆ ನಡೆಯುವುದರಿಂದ, ಅದು ಹಲವು ಮಹತ್ವದ ICC ಈವೆಂಟ್ಗಳು, ದ್ವಿಪಕ್ಷೀಯ ಸರಣಿಗಳು ಮತ್ತು ಬಹುಶಃ ಮುಂದಿನ ವಿಶ್ವಕಪ್ ಸೈಕಲ್ ಅನ್ನ ಒಳಗೊಂಡಿದೆ. ಈ ಅವಧಿಯಲ್ಲಿ 130 ಪಂದ್ಯಗಳನ್ನಾಡಲಿದ್ದು, ಪ್ರತಿ ಪಂದ್ಯಕ್ಕೆ ₹4.5 ಕೋಟಿ ರೂಪಾಯಿಗಳ ಮೊತ್ತವನ್ನ ಬಿಸಿಸಿಐಗೆ ಅಪೋಲೋ ಟಯರ್ಸ್ ಪಾವತಿಸಲಿದೆ. ಇದು ಹಿಂದಿನ ಜೆರ್ಸಿ ಸ್ಪಾನ್ಸರ್ಗಳಿಗಿಂತ ಹೆಚ್ಚು, ಇದು ಭಾರತೀಯ ಕ್ರಿಕೆಟ್ನ ಮಾರುಕಟ್ಟೆ ಮೌಲ್ಯವನ್ನು ಮತ್ತೊಮ್ಮೆ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದೆ.
ಆನ್ಲೈನ್ ಗೇಮ್ ಪ್ಲಾಟ್ಫಾರ್ಮ್ ಡ್ರೀಮ್ 11 ನಿರ್ಗಮಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈರ್ಸ್ಒ ಪ್ಪಂದ ಮಾಡಿಕೊಂಡಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಹೊಸ ಕಾನೂನಿನ ಅಡಿಯಲ್ಲಿ ರಿಯಲ್ ಹಣದ ಗೇಮಿಂಗ್ ಪ್ಲಾಟ್ಫಾರ್ಮ್ಗಳನ್ನು ಸರ್ಕಾರ ನಿಷೇಧಿಸಿದ ನಂತರ, ಡ್ರೀಮ್ 11 ಜೆರ್ಸಿ ಪ್ರಾಯೋಜಕತ್ವದಿಂದ ಹೊರನಡೆದಿತ್ತು. ಅದಾದ ಬಳಿಕ ಬಿಸಿಸಿಐ ಟೀಂ ಇಂಡಿಯಾಗೆ ಹೊಸ ಜೆರ್ಸಿ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನಿಸಿತ್ತು. ತಂಡವು ಸದ್ಯ ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ಪಂದ್ಯಾವಳಿಯಲ್ಲಿ ಜೆರ್ಸಿ ಪ್ರಾಯೋಜಕರಿಲ್ಲದೆ ಆಡುತ್ತಿದೆ. ಅಪೋಲೋ ಟೈರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವು ಶೀಘ್ರದಲ್ಲೇ ಅದನ್ನು ಘೋಷಿಸುತ್ತೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಡಿರಿ

