ಬೇಗ ಮಗು ಮಾಡಿಕೊಳ್ಳಿ ಎಂದು ಅನುಶ್ರೀಗೆ ಸಲಹೆ! – ನಂಗೆ ಹೆಣ್ಣು ಪಾಪು ಇಷ್ಟ ಎಂದ ಆಂಕರ್! 

ಬೇಗ ಮಗು ಮಾಡಿಕೊಳ್ಳಿ ಎಂದು ಅನುಶ್ರೀಗೆ ಸಲಹೆ! – ನಂಗೆ ಹೆಣ್ಣು ಪಾಪು ಇಷ್ಟ ಎಂದ ಆಂಕರ್! 

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ರೋಷನ್‌ ಜೊತೆ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇದೀಗ ಮದುವೆ ಬೆನ್ನಲ್ಲೇ ಆಂಕರ್‌ ಅನುಶ್ರೀ ನಂಗೆ ಹೆಣ್ಣು ಪಾಪು ಇಷ್ಟ ಅಂತ ಹೇಳಿದ್ದಾರೆ.

ಇದನ್ನೂ ಓದಿ: ‘ಹಳ್ಳಿ ಪವರ್’ ಶೋನಲ್ಲಿ ಅಲ್ಲೋಲ ಕಲ್ಲೋಲ – ರೂಲ್ಸ್ ಬ್ರೇಕ್, ಸ್ಪರ್ಧಿಗಳ ನಿರ್ಗಮನ, ಅಕುಲ್ ಬಾಲಾಜಿ ಮಾಡಿದ್ದೇನು?

ಹೌದು ಆಂಕರ್‌ ಅನುಶ್ರೀ ಆ.28 ರಂದು ರೋಷನ್‌ ಜೊತೆ ಸಪ್ತಪದಿ ತುಳಿದಿದ್ದಾರೆ. ವಿವಾಹದ ಬಳಿಕ ನಿರೂಪಣೆಗೆ ಗುಡ್‌ಬೈ ಹೇಳ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದ್ರೆ ಅನುಶ್ರೀ ನಾನು ನಾಡಿದ್ದು ಡ್ಯೂಟಿಗೆ ಜಾಯಿನ್‌ ಆಗ್ತೇನೆ ಅಂತಾ ಹೇಳೋ ಮೂಲಕ ಎಲ್ಲಾ ವದಂತಿಗೂ ಬ್ರೇಕ್‌ ಹಾಕಿದ್ರು. ಮದುವೆಯಾದ ಒಂದು ವಾರಕ್ಕೆ, ಅನುಶ್ರೀ ಡ್ಯೂಟಿಗೆ ಜಾಯಿನ್‌ ಆಗಿದ್ದಾರೆ. ಇದೀಗ ಅನುಶ್ರೀ ಮಗು ಬಗ್ಗೆ ಮಾತನಾಡಿದ್ದಾರೆ. ಮಗು ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟವರಿಗೆ ಅನುಶ್ರೀ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಅನುಶ್ರೀ ಕೆಲಸಕ್ಕೆ ಜಾಯಿನ್‌ ಆಗ್ತಿದ್ದಂತೆ ಜೀಕನ್ನಡದ ಸಹದ್ಯೋಗಿಗಳಿಗೆ ಔತಣ ಕೂಟ ಏರ್ಪಡಿಸಿದ್ರು. ಇದ್ರಲ್ಲಿ ನಾವು ನಮ್ಮವರು ಶೋನಲ್ಲಿ ಸ್ಪರ್ಧಿ ಭಾಗಿಯಾಗಿದ್ರು. ಈ ವೇಳೆ  ಸಮೀರ್ ಆಚಾರ್ಯ-ಶ್ರಾವಣಿ ಮಗಳನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿದರು. ಆಗ ಶ್ರಾವಣಿ ಅನುಶ್ರೀ ಬಳಿ ಬೇಗ ಮಗು ಮಾಡಿಕೊಳ್ಳಿ.. ಆದಷ್ಟು ಬೇಗ ಇಂಥದ್ದೊಂದು ಮಗು ಬರಲಿ.. ಎಂದಿದ್ದಾರೆ. ಇದಕ್ಕೆ ಹು.. ಎಂದು ರಾಗ ಎಳೆದ ಅನುಶ್ರೀ,  ನಂಗೆ ಹೆಣ್ಣು ಪಾಪು ಇಷ್ಟ ಎಂದರು. ತಡ ಮಾಡಂಗಿಲ್ಲ ಎಂದು ಶ್ರಾವಣಿ ಸಲಹೆ ನೀಡಿದರು. ಇದಕ್ಕೆ ಅನುಶ್ರೀ ಓಕೆ ಎಂದಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮಗು ಮಾಡಿಕೊಂಡರೆ ಅವರು ಆ್ಯಂಕರಿಂಗ್​ಗೆ ಕೆಲ ವರ್ಷ ಬ್ರೇಕ್ ಹಾಕಬೇಕಾಗುತ್ತದೆ ಎಂದಿದ್ದಾರೆ.

Shwetha M