ಸಿನಿಮಾದಲ್ಲಿ ನಟಿಸದಿದ್ರೂ ಅನುಷ್ಕಾ ಶರ್ಮಾ ಆಸ್ತಿ ಡಬಲ್..! – ವಿರಾಟ್ ಕೊಹ್ಲಿ ಪತ್ನಿ ಆಸ್ತಿ 300 ಕೋಟಿ ರೂಪಾಯಿ!
ಕಳೆದ ಐದು ವರ್ಷಗಳಿಂದ ಒಂದೇ ಒಂದು ಚಿತ್ರ ಮಾಡದ ಬಾಲಿವುಡ್ನ ಯಶಸ್ವಿ ನಟಿ ಅನುಷ್ಕಾ ಶರ್ಮಾ. ಇನ್ನೂ ಟಾಪ್ ಸೆಲೆಬ್ರಿಟಿಯಾಗಿ ಕ್ರೇಜ್ ಉಳಿಸಿಕೊಂಡಿದ್ದಾರೆ. ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾರೆ. ಆಕೆಯ ಬಳಿ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರುಗಳು, ಮನೆಗಳೂ ಇವೆ. ಆಕೆಯ ಆಸ್ತಿ ಮೌಲ್ಯವು ಯಾರನ್ನಾದರೂ ಆಶ್ಚರ್ಯಗೊಳಿಸುವುದು ಖಂಡಿತ. ಮದುವೆಯ ನಂತರ ಅನುಷ್ಕಾ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಅವರು ಒಂದೇ ಒಂದು ಚಿತ್ರವನ್ನೂ ಮಾಡಿಲ್ಲ. ಆದರೆ, ಆಕೆಯ ಗಳಿಕೆ ಮಾತ್ರ ಹೆಚ್ಚಾಗ್ತಲೇ ಇದೆ. ಅನುಷ್ಕಾ ಶರ್ಮಾ ಅವರ ಆಸ್ತಿ ಮೌಲ್ಯ ರೂ.250 ಕೋಟಿಯಿಂದ ರೂ.300 ಕೋಟಿಗಳಷ್ಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ ಫ್ಲಾಪ್ ಶೋ – ಪ್ರಮುಖ ಬ್ಯಾಟರ್ಗಳೇ ಕೈಕೊಟ್ಟರೆ ಮುಂದೇನು?
ಅನುಷ್ಕಾ ಶರ್ಮಾ ಒಂದು ಚಿತ್ರಕ್ಕೆ 10 ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಇದಲ್ಲದೆ, ಬ್ರಾಂಡ್ ಎಂಡಾರ್ಸ್ಮೆಂಟ್ಗಳಿಂದಲೂ ದೊಡ್ಡ ಮಟ್ಟದ ಹಣ ಗಳಿಸುತ್ತಾರೆ. ಒಂದು ಜಾಹೀರಾತಿಗೆ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೇ ತನ್ನದೇ ಆದ ನಿರ್ಮಾಣ ಸಂಸ್ಥೆ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಅನ್ನು ಕೂಡ ಹೊಂದಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್ ನಡಿಯಲ್ಲಿ ‘ಎನ್ಹೆಚ್ 10’, ‘ಫಿಲ್ಲೌರಿ’ ಮತ್ತು ‘ಪರಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದಲ್ಲದೇ ಅನುಷ್ಕಾ ಹಲವು ಖ್ಯಾತ ಕಂಪನಿಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್ ಕೊಹ್ಲಿ ಜೊತೆಗೆ ಮುಂಬೈನಲ್ಲಿ 34 ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಗುರ್ಗಾಂವ್ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.
ಅಲಿಬಾಗ್ನಲ್ಲಿ 19 ಕೋಟಿ ರೂಪಾಯಿಗಳ ಫಾರ್ಮ್ಹೌಸ್ ಅನ್ನ ಕೂಡ ಖರೀದಿಸಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರ ಹಿಂದಿನ ಮನೆ ಸೇರಿದಂತೆ ಇತರ ಐಷಾರಾಮಿ ಆಸ್ತಿಗಳನ್ನು ಖರೀದಿಸಿದ್ದಾರೆ. ಅದು ಈಗ ಉನ್ನತ ದರ್ಜೆಯ ರೆಸ್ಟೋರೆಂಟ್ ಆಗಿದೆ. ಇನ್ನು Audi R8, Audi A8 L, Audi Q8, Audi Q7, Audi RS 5, Audi S5, ರೇಂಜ್ ರೋವರ್ ವೋಗ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ಬೆಂಟ್ಲಿ ಕಾಂಟಿನೆಂಟಲ್ GT ಯಂತಹ ಐಷಾರಾಮಿ ಕಾರು ಹೊಂದಿದ್ದಾರಂತೆ.
ಸದ್ಯ, ಅನುಷ್ಕಾ ಶರ್ಮಾ ‘ಚಕ್ಡಾ ಎಕ್ಸ್ಪ್ರೆಸ್’ ಮೂಲಕ ಸಿನಿಮಾಗೆ ರೀ ಎಂಟ್ರಿ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಇದೊಂದು ಬಯೋಪಿಕ್ ಸಿನಿಮಾವಾಗಿದ್ದು, ಮಹಿಳಾ ಕ್ರಿಕೆಟ್ ಐಕಾನ್ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾರೆ. ಅನುಷ್ಕಾ ಶರ್ಮಾ ಅವರ ಚಿತ್ರ ‘ಚಕ್ಡಾ ಎಕ್ಸ್ಪ್ರೆಸ್’ ಈ ವರ್ಷದ ಕೊನೆಯಲ್ಲಿ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆ.