‘ನೀವು ನಿಜವಾಗಿಯೂ ದೇವರ ಮಗು’ – ವಿರಾಟ್ ಕೊಹ್ಲಿಗೆ ಮುತ್ತಿನ ಸರಮಾಲೆ ನೀಡಿದ ಬಳಿಕ ಪತ್ನಿ ಅನುಷ್ಕಾ ಶರ್ಮಾರ ಹೆಮ್ಮೆಯ ಮಾತು..!

‘ನೀವು ನಿಜವಾಗಿಯೂ ದೇವರ ಮಗು’ – ವಿರಾಟ್ ಕೊಹ್ಲಿಗೆ ಮುತ್ತಿನ ಸರಮಾಲೆ ನೀಡಿದ ಬಳಿಕ ಪತ್ನಿ ಅನುಷ್ಕಾ ಶರ್ಮಾರ ಹೆಮ್ಮೆಯ ಮಾತು..!

ಸೆಮಿಫೈನಲ್ ಪಂದ್ಯ ನೋಡಿದ ಭಾರತೀಯರು ನಿಜಕ್ಕೂ ಹೆಮ್ಮೆ ಪಟ್ಟುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿಯ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಇದರ ಮಧ್ಯೆ ಕೊಹ್ಲಿ ಪತ್ನಿ

ಅನುಷ್ಕಾ ಶರ್ಮಾ ತನ್ನ ಮುದ್ದಿನ ಗಂಡನಿಗೆ ಮುತ್ತಿನ ಸರಮಾಲೆಯನ್ನು ರವಾನಿಸಿದ್ದು ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ.

ಇದನ್ನೂ ಓದಿ: ಶತಕಗಳ ಅರ್ಧಶತಕ ಸಿಡಿಸಿದ ಕಿಂಗ್ ಕೊಹ್ಲಿ – ಕ್ರಿಕೆಟ್ ದೇವರ ಮೂರು ದಾಖಲೆಗಳನ್ನು ಮುರಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಶತಕಗಳ ಅರ್ಧಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕ್ಷಣವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಮೊದಲು ಕಿಂಗ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಟೇಡಿಯಂನಿಂದಲೇ ಶಿರಬಾಗಿ ನಮಸ್ಕರಿದರು. ಪ್ರತಿಯಾಗಿ ಸಚಿನ್ ತೆಂಡೂಲ್ಕರ್ ಅವರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ತೋರಿದರು. ಈ ಸಂದರ್ಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಸಂಭ್ರಮ ಹೇಳತೀರದಾಗಿತ್ತು. ಅನುಷ್ಕಾ ಶರ್ಮಾ, ಕೊಹ್ಲಿಯತ್ತ ನೋಡುತ್ತಲೇ ಮುತ್ತಿನ ಸುರಿಮಳೆ ಸುರಿಸಿದರು. ಕೊಹ್ಲಿ ಸಹ ಮುದ್ದಿನ ಮಡದಿ ಅನುಷ್ಕಾಗೆ ಗಾಳಿಯಲ್ಲಿ ಮುತ್ತು ತೇಲಿಸಿ ತಮ್ಮ ಪ್ರೀತಿ ಹಂಚಿಕೊಂಡರು. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ಅನುಷ್ಕಾ ಶರ್ಮಾ ಕೂಡಾ ತನ್ನ ಗಂಡನ ಸಾಧನೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಕೊಂಡಾಡಿದ್ದಾರೆ.

‘ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್!. ನನಗೆ ನಿಮ್ಮ ಪ್ರೀತಿಯ ಆಶೀರ್ವಾದ ಸಿಕ್ಕಿರುವ ಜೊತೆಗೆ ವಿರಾಟ್ ಕೊಹ್ಲಿಯ ಪ್ರೀತಿ ಕೂಡ ದೊರೆತಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಮುಂಬರುವ ದಿನಗಳಲ್ಲಿ ವಿರಾಟ್ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಗಳಿಸಿ, ಬೆಳವಣಿಗೆ ಹೊಂದಲಿ. ನೀವು ನಿಜವಾಗಿಯೂ ದೇವರ ಮಗು” ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಸೌರವ್ ಗಂಗೂಲಿ ಕೂಡ ಕೊಹ್ಲಿ ದಾಖಲೆ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಯಾರಾದರೂ ಮುರಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರಿಸಿದ್ದು, ‘ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರೆ ಈ ಸಾಧನೆಯನ್ನು ಹಿಂದಿಕ್ಕಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಮತ್ತು ವಿರಾಟ್ ಕೊಹ್ಲಿ ತಮ್ಮ ಸಾಧನೆಯ ಪಯಣ ಇನ್ನು ಮುಗಿದಿಲ್ಲ’ ಎಂದಿದ್ದಾರೆ.

Sulekha