ಲಂಡನ್ ಬಿಟ್ಟ ಅನುಷ್ಕಾ ಶರ್ಮಾ? – ಸಿನಿಮಾಗೆ ಮರಳ್ತಾರಾ ಕೊಹ್ಲಿ ಪತ್ನಿ?
ಭಾರತಕ್ಕೆ ಬರೋದು ಯಾವಾಗ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸದ್ಯ ಲಂಡನ್ ನಲ್ಲೇ ಇದ್ದಾರೆ.. ಮಕ್ಕಳೊಂದಿಗೆ ಟೈಮ್ ಸ್ಪೆಂಡ್ ಮಾಡ್ತಾ ಇದ್ದಾರೆ. ಕೊಹ್ಲಿ ದಂಪತಿ ಲಂಡನ್ ಹೋಗಿ ಸುಮಾರು ಒಂದು ವರ್ಷವೇ ಕಳೀತು.. ಹೀಗಾಗಿ ವಿರುಷ್ಕಾ ದಂಪತಿ ಲಂಡನ್‌ನಲ್ಲೇ ಸೆಟಲ್ ಆಗಲಿದ್ದಾರೆ ಎನ್ನಲಾಗಿತ್ತು. ಈ ದಂಪತಿ ಇನ್ನು ಸದ್ಯಕ್ಕೆ ಭಾರತಕ್ಕೆ ಬರೋದು ಡೌಟ್ ಅಂತಾ ಹೇಳಲಾಗ್ತಿತ್ತು.. ಇದೀಗ ವಿರುಷ್ಕ ಜೋಡಿ ಭಾರತಕ್ಕೆ ಬರೋ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.. ಹೌದು, ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಮುಂಬೈಗೆ ಬರಲಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಅನುಷ್ಕಾ ಶರ್ಮಾ ಮುಂಬೈನಲ್ಲೇ ಸೆಟಲ್ ಆಗಲಿದ್ದಾರಾ? ಮತ್ತೆ ಮಕ್ಕಳನ್ನ ಕರೆದುಕೊಂಡು ಲಂಡನ್‌ಗೆ ಹೋಗ್ತಾರಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: MI ಕ್ಯಾಪ್ಟನ್ಸಿಯಲ್ಲಿ ನಾಲ್ವರ ಭವಿಷ್ಯ – ರೋಹಿತ್ Vs ಪಾಂಡ್ಯ.. ನಾಯಕನ್ಯಾರು?
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ವಿದೇಶದಲ್ಲೇ ನೆಲೆಸಲಿದ್ದಾರೆ ಎಂದು ಸುದ್ದಿಯಾಗ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಇದಕ್ಕೆ ಪುಷ್ಠಿ ನೀಡುವಂತಹ ಸಾಕಷ್ಟು ಘಟನೆಗಳು ನಡೆದಿವೆ.. ಕಳೆದ ಒಂದು ವರ್ಷಗಳಿಂದ ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಲಂಡನ್‌ಲ್ಲೇ ನೆಲೆಸಿದ್ರು.. ಕೊಹ್ಲಿ ಕೂಡ ಟೂರ್ನಿ ಇದ್ದಾಗ ಭಾರತಕ್ಕೆ ಬರ್ತಾ ಇದ್ರು.. ಪಂದ್ಯ ಮುಗಿದ ಕೂಡಲೇ ಮತ್ತೆ ವಿದೇಶಕ್ಕೆ ಹಾರ್ತಿದ್ರು.. ಇನ್ನು ವಿರಾಟ್ ಎರಡನೇ ಮಗ ಲಂಡನ್‌ನಲ್ಲೇ ಹುಟ್ಟಿದ್ದು.. ಅವರ ಕೆಲವು ಬ್ಯುಸಿನೆಸ್ ಕೂಡ ಅಲ್ಲಿದೆ.. ಈ ಎಲ್ಲಾ ಕಾರಣದಿಂದಾಗಿ ವಿರುಷ್ಕಾ ಕುಟುಂಬ ಅಲ್ಲಿಯೇ ನೆಲೆಸಲಿದೆ ಎಂದು ಹೇಳಲಾಗ್ತಿತ್ತು.. ಅದ್ರೀಗ ಅನುಷ್ಕಾ ಶರ್ಮಾ ಮಕ್ಕಳೊಂದಿಗೆ ಕೊನೆಗೂ ಭಾರತಕ್ಕೆ ಬರಲಿದ್ದಾರಂತೆ.
ಹೌದು, ಅಕಾಯ್ ಹುಟ್ಟಿದ ಮೇಲೆ ಅನುಷ್ಕಾ ಶರ್ಮಾ ಒಂದು ಬಾರಿ ಮಾತ್ರ ಭಾರತಕ್ಕೆ ಬಂದಿದ್ರು.. ಅದು ಕೂಡ ಐಪಿಎಲ್ ವೇಳೆ.. ಮಗುವನ್ನ ಭಾರತಕ್ಕೆ ಕರೆತಂದಿದ್ರು ಕೂಡ.. ಆದ್ರೆ ಕೆಲವೇ ದಿನ ಇಲ್ಲಿ ಉಳಿದಿದ್ದ ಅನುಷ್ಕಾ ಶರ್ಮಾ ಮತ್ತೆ ಲಂಡನ್‌ಗೆ ತೆರಳಿದ್ರು.. ಅದಾದ ಮೇಲೆ ಮಗನ ಆರೈಕೆಗೆಂದೇ ಟೈಮ್ ಕೊಟ್ರು.. ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಗೂ ಅನುಷ್ಕಾ ಶರ್ಮಾ ಕೊಹ್ಲಿ ಜತೆ ಹೋಗಿರ್ಲಿಲ್ಲ..
ಇದೀಗ ಮಕ್ಕಳೊಂದಿಗೆ ಅನುಷ್ಕಾ ಮತ್ತೆ ಭಾರತಕ್ಕೆ ಬಂದು ಮುಂಬೈಯಲ್ಲಿ ನೆಲೆಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬತೆ ಅನುಷ್ಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆರೋಗ್ಯಕರ ಆಹಾರ ಮತ್ತು ತಿಂಡಿಗಳ ಬ್ರ್ಯಾಂಡ್‌ನ ಪ್ರಚಾರದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಂಡ ನೆಟ್ಟಿಗರು ಇದು ಅನುಷ್ಕಾ ಮತ್ತೆ ಮುಂಬೈಗೆ ಬರುವ ಸುಳಿವು ಎಂದು ಹೇಳಿದ್ದಾರೆ.
ಇನ್ನು ಅನುಷ್ಕಾ ಶರ್ಮಾ ಭಾರತಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಹೊರ ಬೀಳ್ತಿದ್ದಂತೆ, ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಅನುಷ್ಕಾ ಶರ್ಮಾ ಹಲವು ವರ್ಷಗಳಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ಆದರೆ, 2018ರಿಂದ ಬೆಳ್ಳಿತೆರೆಯಿಂದ ನಾಪತ್ತೆಯಾಗಿದ್ದಾರೆ. 2018ರ ಬಳಿಕ ಅನುಷ್ಕಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಮನೆ, ಮಕ್ಕಳು, ಸಂಸಾರ ಅಂತ ಬ್ಯುಸಿ ಆಗಿದ್ದಾರೆ. ಇದೀಗ ಆರೋಗ್ಯಕರ ಆಹಾರ ಮತ್ತು ತಿಂಡಿಗಳ ಬ್ರ್ಯಾಂಡ್‌ನ ಪ್ರಚಾರದ ವೀಡಿಯೊವನ್ನು ಪೋಸ್ಟ್ ಮಾಡಿದನ್ನು ನೋಡಿ ಫ್ಯಾನ್ಸ್ ಅನುಷ್ಕಾ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಊಹೆ ಮಾಡ್ತಿದ್ದಾರೆ. ಇನ್ನು ಕೆಲವರು ವಿರುಷ್ಕಾ ದಂಪತಿ ದೇಶ, ವಿದೇಶಗಲ್ಲಿ ಉದ್ಯಮ ಹೊಂದಿದ್ದಾರೆ. ಹೀಗಾಗಿ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳೋದು ಡೌಟ್ ಅಂತಾ ಕಾಮೆಂಟ್ ಮಾಡ್ತಾ ಇದ್ದಾರೆ. ಆದ್ರೆ ಈ ಬಗ್ಗೆ ಅನುಷ್ಕಾ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇನ್ನು ಅನುಷ್ಕಾ ಶರ್ಮಾ 2018 ರಿಂದ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ಅಂದ್ರೂ ಆಕೆಯ ಆದಾಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ. ಹೌದು, ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಹಲವು ಉದ್ಯಮವನ್ನ ಹೊಂದಿದ್ದಾರೆ. ವರದಿ ಪ್ರಕಾರ, ಈ ದಂಪತಿ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದಿಷ್ಟೇ ಅಲ್ಲದೇ ಭಾರತದಲ್ಲೂ ಕೂಡ ಹಲವು ಉದ್ಯಮಗಳನ್ನು ಹೊಂದಿದ್ದಾರೆ. ಇದ್ರ ಮೂಲಕವೇ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡ್ತಾ ಇದ್ದಾರೆ.
ಒಟ್ಟಿನಲ್ಲಿ ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಅಂತೂ ಖುಷಿಯಾಗಿದ್ದಾರೆ. ಆದ್ರೆ ಅನಷ್ಕಾ ಶರ್ಮಾ ಮುಂಬೈನಲ್ಲೇ ಸೆಟಲ್ ಆಗ್ತಾ ಅಥವಾ ಮತ್ತೆ ಲಂಡನ್ ಗೆ ಹೋಗ್ತಾರಾ ಅಂತಾ ಕಾದು ನೋಡ್ಬೇಕಿದೆ.