ಮೊದಲೆರೆಡು ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ ವಿರಾಟ್ ಕೊಹ್ಲಿ ಪತ್ನಿ– ಭಾರತ-ಪಾಕ್ ಪಂದ್ಯ ನೋಡಲು ಬಂದ ಅನುಷ್ಕಾ ಶರ್ಮಾ

ಮೊದಲೆರೆಡು ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ ವಿರಾಟ್ ಕೊಹ್ಲಿ ಪತ್ನಿ– ಭಾರತ-ಪಾಕ್ ಪಂದ್ಯ ನೋಡಲು ಬಂದ ಅನುಷ್ಕಾ ಶರ್ಮಾ

ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳನ್ನಾಡಿದೆ. ಎರಡೂ ಪಂದ್ಯದಲ್ಲೂ ಭರ್ಜರಿ ಜಯಭೇರಿ ಸಾಧಿಸಿದೆ. ಆದರೆ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎಲ್ಲೂ ಕಾಣಿಸಿಯೇ ಕೊಂಡಿರಲಿಲ್ಲ. ಅನುಷ್ಕಾ ಪ್ರೆಗ್ನೆಂಟ್ ಎನ್ನುವ ಕಾರಣಕ್ಕೆ ಪಂದ್ಯ ವೀಕ್ಷಣೆಗೆ ಬರುತ್ತಿಲ್ಲ ಎಂದು ಅನೇಕರು ಊಹಿಸಿದ್ದರು. ಆದರೆ, ಈ ಬಾರಿ ಎಲ್ಲರ ಲೆಕ್ಕಾಚಾರವನ್ನು ಅನುಷ್ಕಾ ಶರ್ಮಾ ಸುಳ್ಳು ಮಾಡಿದ್ದಾರೆ.

ಇದನ್ನೂ ಓದಿ: ರೋಚಕ ಹಣಾಹಣಿಗೆ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜು – ಭಾರತ-ಪಾಕ್ ಪಂದ್ಯಕ್ಕೆ ಪೊಲೀಸ್ ಬಿಗಿಬಂದೋಬಸ್ತ್

ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ವೀಕ್ಷಿಸಲು ಸಾಕಷ್ಟು ಸೆಲೆಬ್ರಿಟಿಗಳು ತೆರಳುತ್ತಿದ್ದಾರೆ. ಈಗಾಗಲೇ ಈ ಭಾಗದ ಹೋಟೆಲ್ ರೂಂಗಳು ಬುಕ್ ಆಗಿವೆ. ಈ ಮ್ಯಾಚ್ ವೀಕ್ಷಿಸಲು ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಬಂದಿದ್ದಾರೆ. ಅನುಷ್ಕಾ ಶರ್ಮಾ ಅಹಮದಾಬಾದ್‌ಗೆ ಬಂದಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅನುಷ್ಕಾ ಶರ್ಮಾ ಜೊತೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಈ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಇವರು ಪಂದ್ಯಕ್ಕೂ ಮೊದಲು ನಡೆಯಲಿರುವ ಮ್ಯೂಸಿಕಲ್ ಸೆರಮನಿಯಲ್ಲೂ ಪಾಲ್ಗೊಳ್ಳಲಿದ್ದಾರೆ.

Sulekha