ರವೀಂದ್ರನಾಥ್ ಟ್ಯಾಗೋರ್ ಜೀವನಾಧಾರಿತ ಸಿನಿಮಾದಲ್ಲಿ ಅನುಪಮ್ ಖೇರ್ – ನಟನ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ

ರವೀಂದ್ರನಾಥ್ ಟ್ಯಾಗೋರ್ ಜೀವನಾಧಾರಿತ ಸಿನಿಮಾದಲ್ಲಿ ಅನುಪಮ್ ಖೇರ್ – ನಟನ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಬಾಲಿವುಡ್ ನಟ ಅನುಪಮ್ ಖೇರ್ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ. ಯಾವುದೇ ಪಾತ್ರ ಇರಲಿ ಆ ಪಾತ್ರಕ್ಕೆ ಜೀವ ತುಂಬಬಲ್ಲ ನಟ. ಇದೀಗ ನಟ ಅನುಪಮ್ ಖೇರ್ ಗುರುದೇವ ರವೀಂದ್ರನಾಥ್ ಟ್ಯಾಗೋರ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅನುಪಮ್ ಖೇರ್ ಹೊಸ ಲುಕ್ ರಿಲೀಸ್ ಆಗಿದೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಲಾರ್ ಟೀಸರ್ – ಟ್ರೇಲರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಚಿತ್ರತಂಡ

‘ದಿ ಕಾಶ್ಮೀರ್ ಫೈಲ್ಸ್’  ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅನುಪಮ್ ಖೇರ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’  ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದರು. ಈಗ ಅನುಪಮ್ ಖೇರ್ ಅವರಿಗೆ 68 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ತುಂಬ ಆಕ್ಟೀವ್ ಆಗಿದ್ದಾರೆ. ರವೀಂದ್ರನಾಥ್ ಟ್ಯಾಗೋರ್ ಪಾತ್ರದಲ್ಲಿ ಅನುಪಮ್ ಖೇರ್ ಅಭಿನಯಿಸುತ್ತಿದ್ದಾರೆ. ಇದು ಅವರು ನಟಿಸುತ್ತಿರುವ 583ನೇ ಸಿನಿಮಾ . ಬೆಂಗಾಲಿ ಕವಿ, ಲೇಖಕ, ತತ್ವಜಾನಿ ರವೀಂದ್ರನಾಥ್ ಟ್ಯಾಗೋರ್ ಅವರ ಪಾತ್ರವನ್ನು ಮಾಡುವುದು ಎಂದರೆ ಸುಲಭದ ಮಾತಲ್ಲ. ಆ ಪಾತ್ರಕ್ಕಾಗಿ ಅನುಪಮ್ ಖೇರ್ ಆಯ್ಕೆ ಆಗಿದ್ದಾರೆ. ಈಗ ಅವರ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಅನುಪಮ್ ಖೇರ್ ಫಸ್ಟ್ ಲುಕ್ ಪೋಸ್ಟರ್ ನೋಡಿದ ಅಭಿಮಾನಿಗಳು ಕೂಡಾ ಸಖತ್ ಖುಷಿಯಾಗಿದ್ದಾರೆ.

2019ರಲ್ಲಿ ಬಿಡುಗಡೆಯಾದ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರಕ್ಕೆ ಅನುಪಮ್ ಖೇರ್ ಬಣ್ಣ ಹಚ್ಚಿದ್ದರು. ಈಗ ಮತ್ತೊಂದು ರಿಯಲ್ ಲೈಫ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ನನ್ನ 538ನೇ ಸಿನಿಮಾದಲ್ಲಿ ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ ಪಾತ್ರ ಮಾಡಲು ಖುಷಿ ಆಗುತ್ತಿದೆ. ಸಮಯ ಬಂದಾಗ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ. ತೆರೆಮೇಲೆ ಇಂಥ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ’ ಎಂದು ಅನುಪಮ್ ಖೇರ್ ಅವರು ಪೋಸ್ಟ್ ಮಾಡಿದ್ದಾರೆ.

suddiyaana