ಜೀವಮಾನವಿಡೀ ನಿದ್ದೆ ಮಾಡಲ್ಲ.. 100 ದಿನ ಆಹಾರ ಸೇವಿಸದೆ ಇರಬಲ್ಲವು ಇರುವೆ – ಈ ಜೀವಿಗಳ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ಜೀವಮಾನವಿಡೀ ನಿದ್ದೆ ಮಾಡಲ್ಲ.. 100 ದಿನ ಆಹಾರ ಸೇವಿಸದೆ ಇರಬಲ್ಲವು ಇರುವೆ – ಈ ಜೀವಿಗಳ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ನಮಗೆ ಒಂದು ರಾತ್ರಿ ನಿದ್ದೆಗೆಟ್ಟರೂ ಆರೋಗ್ಯ ಕೆಡುತ್ತೆ. ಒಂದು ಹೊತ್ತು ಊಟ ಮಾಡಿಲ್ಲ ಅಂದ್ರೂ ಸುಸ್ತಾಗುತ್ತೆ. ಆದ್ರೆ ಈ ಜೀವಿ ಜೀವನವಿಡೀ ನಿದ್ರೆ ಮಾಡದೆಯೇ ಬದುಕುತ್ತದೆ. ಆಹಾರ ಸೇವಿಸದೇ ನೂರು ದಿನ ಇರುತ್ತದೆ.  ವಿಶ್ವದಲ್ಲಿರುವ ಕೆಲವೊಂದು ಅದ್ಭುತಗಳು ನಮಗೆ ಅಚ್ಚರಿ ಉಂಟು ಮಾಡುತ್ತವೆ. ಅವುಗಳಲ್ಲಿ ಇರುವೆಯೂ ಒಂದು.

ಇರುವೆಗಳು ಆಹಾರ ಇಲ್ಲದೆ 100 ದಿನ ಬದುಕಬಲ್ಲವು. ಅಲ್ಲದೆ ‌ಎಲ್ಲಾ ಜೀವಿಗಳಿಗೆ ಅತ್ಯವಶ್ಯಕ ಅಂದ್ರೆ ಅದು ನಿದ್ದೆ. ಆದ್ರೆ, ಇರುವೆಗಳು ತಮ್ಮ ಜೀವನವಿಡೀ ನಿದ್ರೆ ಮಾಡುವುದಿಲ್ಲ. ಕೇವಲ ಒಂದು ನಿಮಿಷಕ್ಕೂ ಕಡಿಮೆ ಅವಧಿಯ ಕಿರು ವಿಶ್ರಾಂತಿ ಪಡೆಯುತ್ತವೆ. ಒಂದು ಚಿಕ್ಕ ಇರುವೆಯಲ್ಲಿಯೂ ಕೂಡ ಸುಮಾರು 2.5 ಲಕ್ಷ ಮೆದುಳಿನ ಜೀವಕೋಶಗಳಿವೆ. ಈ ಜೀವಕೋಶಗಳ ಕಾರಣದಿಂದಾಗಿ, ಇರುವೆ ನಿದ್ದೆ ಮಾಡದೆ ತನ್ನ ಮೆದುಳನ್ನು ಸಕ್ರಿಯವಾಗಿರಿಸಿಕೊಳ್ಳುತ್ತದೆ. ವೈಜ್ಞಾನಿಕ ಮಾಹಿತಿಯ ಪ್ರಕಾರ ಇಡೀ ಜಗತ್ತಿನಲ್ಲಿ 10 ಸಾವಿರಕ್ಕೂ ಹೆಚ್ಚು ಜಾತಿಯ ಇರುವೆಗಳಿವೆ. ಅವುಗಳ ಗಾತ್ರ 2 ರಿಂದ 7 ಮಿಲಿಮೀಟರ್ ಮಾತ್ರ ಇರುತ್ತದೆ. ತಮ್ಮ ಗಾತ್ರಕ್ಕಿಂತ ಹೆಚ್ಚಿನ ತೂಕವನ್ನು ಎತ್ತಬಲ್ಲವು ಅನ್ನೋದು ವಿಶೇಷ.

Shantha Kumari