ತಾಜ್ ಮಹಲ್ ರಕ್ಷಣೆ ಮಾಸ್ಟರ್ ಪ್ಲ್ಯಾನ್ – ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಕೆ

ತಾಜ್ ಮಹಲ್ ರಕ್ಷಣೆ ಮಾಸ್ಟರ್ ಪ್ಲ್ಯಾನ್  – ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಕೆ

ವಿಶ್ವ ಪರಂಪರೆಯ ತಾಣ, ಆಗ್ರಾದ ತಾಜ್ ಮಹಲ್‌ನಲ್ಲಿ ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಸಲಾಗಿದೆ. ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಐತಿಹಾಸಿಕ ಸ್ಮಾರಕದ ಮುಖ್ಯ ಗುಮ್ಮಟದಿಂದ 500 ಮೀಟರ್ ಒಳಗೆ ಬರುವ ಯಾವುದೇ ವೈಮಾನಿಕ ದಾಳಿಯನ್ನು ತಟಸ್ಥಗೊಳಿಸುವ ‘ಸಾಫ್ಟ್ ಕಿಲ್’ ಸಾಮರ್ಥ್ಯ ಹೊಂದಿದೆ.

ಈ ತಿಂಗಳ ಆರಂಭದಲ್ಲಿ ಭಾರತ, ಪಾಕಿಸ್ತಾನದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ ನಾಶಪಡಿಸಿತ್ತು. ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಮಿಲಿಟರಿ ಉದ್ವಿಗ್ನತೆ ಹೆಚ್ಚಿದ ನಂತರ ಈ ಬೆಳವಣಿಗೆ ನಡೆದಿದೆ.

ಭದ್ರತಾ ಪ್ರಧಾನ ಕಚೇರಿಯಿಂದ ಪೂರೈಸಲಾದ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಪ್ರಾಯೋಗಿಕ ಪರೀಕ್ಷೆಯ ಸಮಯದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಮತ್ತು ಪರಿಣಾಮಕಾರಿ ಪತ್ತೆ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ . ಸಹಾಯಕ ಪೊಲೀಸ್ ಆಯುಕ್ತ ಸಯೀದ್ ಅರೀಬ್ ಅಹ್ಮದ್, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ದಿಕ್ಕಿನಿಂದ ಬರುವ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಇದು ಡ್ರೋನ್‌ ಇರುವ ಸ್ಥಳವನ್ನು ಪತ್ತೆಹಚ್ಚುವುದಲ್ಲದೆ, ಅದರ ಮೂಲ ಬಿಂದುವನ್ನು ಸಹ ಗುರುತಿಸುತ್ತದೆ. ಸ್ಮಾರಕದ ಸುತ್ತಲೂ 500 ಮೀಟರ್ ತ್ರಿಜ್ಯವನ್ನು ಪ್ರವೇಶಿಸುವ ಡ್ರೋನ್‌ಗಳು ಸ್ವಯಂಚಾಲಿತವಾಗಿ ತಟಸ್ಥಗೊಳ್ಳುತ್ತವೆ  ಎಂದು ಅವರು ತಿಳಿಸಿದ್ದಾರೆ.

 

 

Kishor KV