ಸ್ಟಾರ್ ಕಿಡ್ ಗಳಿಗೆ ಇವರೇ ಟೀಚರ್!  – ಸಚಿನ್, ಶಾರುಖ್ ಮಕ್ಕಳಿಗೆ ಇಂಗ್ಲಿಷ್ ಮಿಸ್
ಅಂತರಪಟ ಸಾವಿತ್ರಿ ರಿಯಲ್ ಸ್ಟೋರಿ

ಸ್ಟಾರ್ ಕಿಡ್ ಗಳಿಗೆ ಇವರೇ ಟೀಚರ್!  – ಸಚಿನ್, ಶಾರುಖ್ ಮಕ್ಕಳಿಗೆ ಇಂಗ್ಲಿಷ್ ಮಿಸ್ಅಂತರಪಟ ಸಾವಿತ್ರಿ ರಿಯಲ್ ಸ್ಟೋರಿ

ಕಲರ್ಸ್ ಕನ್ನಡಲ್ಲಿ ಪ್ರಸಾರ ಆಗ್ತಾ ಇರೋ ಅಂತರಪಟ ಸೀರಿಯಲ್ ವೀಕ್ಷಕರ ಮನಗೆದ್ದಿದೆ.. ತನ್ವಿಯಾ ಬಾಲರಾಜ್ ಹಾಗೂ ಚಂದನ್ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಸುಶಾಂತ್ ತಾಯಿ ಸೊಸೆಯನ್ನ ಕಂಡರೆ ಉರಿದುಬೀಳುತ್ತಾಳೆ.. ಆಕೆಯ ಮೇಲೆ ಸದಾ ಸಿಟ್ಟುಮಾಡಿಕೊಳ್ಳುತ್ತಿರುತ್ತಾಳೆ.. ಈ ಪಾತ್ರ ವೀಕ್ಷಕರ ಮನಗೆದ್ದಿದೆ.. ಅಂದಹಾಗೆ ಅಂತರಪಟ ಸೀರಿಯಲ್ ನಲ್ಲಿ ಆರಾಧನಾಳ ಅತ್ತೆ ಪಾತ್ರ ಮಾಡ್ತಿರುವವರು ಬೇರೆ ಯಾರು ಅಲ್ಲ.. ಅಕ್ಷತಾ ಗಣೇಶ್.. ಈಕೆ ನಿಜ ಜೀವನದಲ್ಲಿ ನಟಿ ಮಾತ್ರ ಅಲ್ಲ.. ಟೀಚರ್ ಕೂಡ ಹೌದು.‌. ಬಾಲಿವುಡ್ ಸ್ಟಾರ್ಸ್ ಮಕ್ಕಳಿಗೆ ಈಕೆಯೇ ಟೀಚರ್..

ಅಂತರಪಟ ಸೀರಿಯಲ್ ಚೆನ್ನಾಗಿ‌ಮೂಡಿ ಬರ್ತಾ ಇದೆ.‌ ಆರಾಧನಾಳಾ ಅತ್ತೆಯ ಪಾತ್ರ ವೀಕ್ಷಕರ ಮನಗೆದ್ದಿದೆ. ಯಾವಾಗ್ಲೂ ಸೀರೆಯುಟ್ಟು, ತಲೆ ತುಂಬ ಹೂವು ಮುಡಿದು, ಅಪ್ಪಟ ಗೃಹಿಣಿಯಾಗಿರುವ ಸಾವಿತ್ರಿ ರಿಯಲ್ ಲೈಫಲ್ಲಿ ಸಖತ್ ಮಾಡರ್ನ್. ಇಷ್ಟೊಂದು ಶ್ತೈಲಿಶ್ ಆಗಿರೋ ಅಕ್ಷತಾ ಗಣೇಶ್ ಎರಡೂವರೆ ವರ್ಷದ ಪುಟ್ಟಮಗುವಿನ ತಾಯಿ ಕೂಡ ಹೌದು. ಈಕೆ‌ ನಟನೆಯಲ್ಲಿ ಮಾತ್ರ ಗುರುತಿಸಿಕೊಂಡಿಲ್ಲ.. ಈಗೆ ಬಾಲಿವುಡ್ ಸ್ಟಾರ್ಸ್ ಗಳ ಮಕ್ಕಳಿಗೆ ಟೀಚರ್.. ಹೌದು.. ಅಕ್ಷತಾ  ಕಳೆದ 20 ವರ್ಷಗಳಿಂದ  ಶಿಕ್ಷಣ ವಲಯದಲ್ಲಿ ಕೆಲಸ ಮಾಡ್ತಿದ್ದಾರೆ. ಇವರೊಬ್ಬ ಟೀಚರ್ ಮತ್ತು ಸ್ಕಾಲರ್ ಕೂಡ ಹೌದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಕ್ಷತಾ ಯುರೋಪಿಯನ್ ಕ್ಲಾಸಿಕ್ ಡ್ಯಾನ್ಸ್ ಕೂಡ ಕಲಿತಿದ್ದಾರೆ. ಅಕ್ಷತಾ ನವದೆಹಲಿಯ ಪಾಥ್ ವೇಸ್ ವರ್ಲ್ಡ್ ಸ್ಕೂಲ್, ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ದಿ ಜರ್ಮನ್ ಸ್ಕೂಲ್ ಆಫ್ ಬಾಂಬೆ ಸೇರಿ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಇಂಗ್ಲೀಷ್ ಅನ್ನು ಫಾರಿನ್ ಲಾಂಗ್ವೇಜ್ ಆಗಿ ಕಲಿಸುವುದರಿಂದ ಹಿಡಿದು ವಿಶ್ವ ಸಾಹಿತ್ಯ ಮತ್ತು ನಾಟಕದಲ್ಲೂ ಇಂಗ್ಲೀಷ್ ಭಾಷಾ ಪ್ರಯೋಗ ಮಾಡೋದ್ರಲ್ಲಿ ಪರಿಣತಿ ಪಡೆದಿದ್ದಾರೆ.

ಸಿಲ್ಲಿಲಲ್ಲಿ ಸೀಸನ್ 2 ನಲ್ಲಿ ಲಲಿತಾಂಬ ಪಾತ್ರಕ್ಕೆ ಜೀವ ತುಂಬಿದ್ದ ಈ ನಟಿ, ಬಾಲಿವುಡ್ ಸ್ಟಾರ್ ಕಿಡ್ ಗಳಿಗೂ‌ ಸಹ ಪಾಠ ಮಾಡಿದ್ದಾರೆ.  ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬಾಲಿವುಡ್ ಸೂಪರ್ ಸ್ಟಾರ್ ಆಗಿರುವ ಶಾರುಖ್ ಖಾನ್ ನಟ ಸೈಫ್ ಅಲಿ ಖಾನ್, ನಟಿ ಜೂಹಿ ಚಾವ್ಲಾ ಸೇರಿದಂತೆ ಅನೇಕ ತಾರೆಯರ ಮಕ್ಕಳಿಗೆ ಅಕ್ಷತಾ ಗಣೇಶ್ ಇಂಗ್ಲೀಷ್ ಕಲಿಸಿದ್ದಾರೆ.

ದೇಶದ ಪ್ರತಿಷ್ಟಿತ ವಿದ್ಯಾ ಸಂಸ್ಥೆಯಾಗಿರುವ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ  ಇಂಗ್ಲೀಷ್ ಟೀಚರ್ ಆಗಿ ಸುಮಾರು 10 ವರ್ಷಗಳ ಕಾಲ ಇವರು ಕೆಲಸ ಮಾಡಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಇದೇ ಸ್ಕೂಲಲ್ಲಿ ಕಲಿಯೋದ್ರಿಂದ ಶಾರೂಖ್, ಹೃತಿಕ್, ಸಚಿನ್ ತೆಂಡೂಲ್ಕರ್ ಅಷ್ಟೇ ಯಾಕೆ ಮುಕೇಶ್ ಅಂಬಾನಿ, ನೀತಾ ಅಂಬಾನಿ ಜೊತೆಗೂ ಇವರು ಮಾತುಕತೆ ನಡೆಸಿದ್ದಾರೆ, ಜೊತೆಗೆ ಈ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..

ಇನ್ನು ಹಲವು ವರ್ಷಗಳಿಂದ ನಟಿಸುತ್ತಿರುವ ಅಕ್ಷತಾ ಸಿಲ್ಲಿಲಲ್ಲಿ, ಅಂತರಪಟ ಮಾತ್ರವಲ್ಲ, ಶ್ರೀನಿ ಪದ್ದು, ಸೇರಿ ಹಲವು ಸೀರಿಯಲ್ಗಳಲ್ಲಿ ನಾಯಕಿ ಪಾತ್ರ, ಸಿನಿಮಾ ಸಿರಿಯಲ್ಗಳಲ್ಲಿ ಪೋಷಕ ಪಾತ್ರ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.. ಅಷ್ಟೇ ಅಲ್ಲದೇ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದು, ಹಲವು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ಹೀಗೆ ಸ್ಟಾರ್ ಕಿಡ್ ಗಳಿಗೆ ಪಾಠ ಮಾಡಿದ್ರು ಅಕ್ಷತಾ ಗಣೇಶ್ ಕನ್ನಡ ಸೀರಿಯಲ್ ಗಳಲ್ಲಿ ನಟನೆಯನ್ನ ಮಾತ್ರ ಸೀರಿಯಸ್ ಆಗಿ ಮುಂದುವರಿಸಿದ್ದಾರೆ..

Shwetha M

Leave a Reply

Your email address will not be published. Required fields are marked *