ಕಾಂಗ್ರೆಸ್ ನಿಂದ ಮತ್ತೊಂದು ಯಾತ್ರೆ – ಸಂವಿಧಾನ ಬಚಾವೋ ಯಾತ್ರೆ

ಕಾಂಗ್ರೆಸ್ ನಿಂದ ಮತ್ತೊಂದು ಯಾತ್ರೆ – ಸಂವಿಧಾನ ಬಚಾವೋ ಯಾತ್ರೆ

ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ  ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ಇದರ ಮುಂದುವರೆದ ಭಾಗವಾಗಿ ಕಾಂಗ್ರೆಸ್ ಸಂವಿಧಾನ ಬಚಾವ್ ಎಂಬ ಹತ್ತು ಕಿ.ಮೀ ಪಾದಯಾತ್ರೆಯನ್ನು ನ. 28 ರಿಂದ ನವೆಂಬರ್ 28 ರಿಂದ ಡಿಸೆಂಬರ್ 2 ರವೆಗೆ ಐದು ದಿನಗಳ ಕಾಲ ನಡೆಸಲಿದೆ.

ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ. ನವೆಂಬರ್ 28 ರಂದು ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಗೊಂಡು ದಾವಣಗೆರೆಯವರೆಗೆ ನಡೆಯಲಿದೆ. ಒಟ್ಟು ಹತ್ತು ದಿನಗಳ ಕಾಲ ನಡೆಯಲಿದೆ. ಎಸ್ ಸಿ ಹಾಗೂ ಅಸಂಘಟಿತ ಕಾರ್ಮಿಕರು ಮತ್ತು ನೌಕರರ ವಿಭಾಗ ನೇತೃತ್ವದಲ್ಲಿ ನಡೆಯಲಿದೆ.

ಇದನ್ನೂ ಓದಿ ಡಿಜಿಟಲ್ ಪತ್ರಕರ್ತರಿಗೂ ಕೇಂದ್ರದಿಂದ ಶೀಘ್ರದಲ್ಲೇ ಮಾನ್ಯತೆ

ನವೆಂಬರ್ 29 ರಂದು ಹಾವೇರಿಯಿಂದ ಆರಂಭಗೊಂಡು ಗದಗ ಜಿಲ್ಲೆಯವರೆಗೆ 10 ಕಿ ಮೀ ನಡೆಯಲಿದೆ. ಈ ಪಾದಯಾತ್ರೆ ನೇತೃತ್ವವನ್ನು ಕಾಂಗ್ರೆಸ್ ಮೀನುಗಾರಿಕಾ ವಿಭಾಗ ವಹಿಸಲಿದೆ. ಮೂರನೇ ದಿನ ನವೆಂಬರ್ 30 ರಂದು ಹುಬ್ಬಳ್ಳಿಯಿಂದ ಆರಂಭಗೊಂಡು ಧಾರವಾಡದ ವರಗೆ 10 ಕಿ.ಮೀ ಪಾದಯಾತ್ರೆ ನಡೆಯಲಿದೆ. ಕಾರ್ಮಿಕ ಘಟಕ ಹಾಗೂ ಒಬಿಸಿ ವಿಭಾಗದವರು ಇದರ ನೇತೃತ್ವ ವಹಿಸಲಿದ್ದಾರೆ.

ನಾಲ್ಕನೇ ದಿನ ಡಿಸೆಂಬರ್ 1 ರಂದು ಬೆಳಗಾವಿಯಲ್ಲಿ 20 ಕಿಮೀ ಪಾದಯಾತ್ರೆ ನಡೆಯಲಿದೆ. ಡಿಸೆಂಬರ್ 2 ಕೊನೆಯ ದಿನ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆ ರಾಜ್ಯದ ಏಳು ಜಿಲ್ಲೆಗಳಲ್ಲಿ 21 ದಿನಗಳ ಕಾಲ ನಡೆದಿತ್ತು. ಈ ಪಾದಯಾತ್ರೆ ಕರ್ನಾಟಕದಲ್ಲಿ ಯಶಸ್ವಿ ಆಗಿತ್ತು. ಈ ನಿಟ್ಟಿನಲ್ಲಿ ಇತರ ಜಿಲ್ಲೆಗಳಲ್ಲಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತೊಂದು ಸುತ್ತಿನ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

suddiyaana